Moon: ಚಂದ್ರನ ಮೇಲೆ ಯಶಸ್ವಿಯಾಗಿಳಿದ ಜಪಾನಿನ ಸ್ಲಿಮ್
ಇಂಧನ ಉತ್ಪಾದಿಸಲು ನೌಕೆಯ ಸೌರಫಲಕ ವಿಫಲ-ಪೂರಕ ಬ್ಯಾಟರಿ ಕ್ಷಮತೆ ಕೆಲವೇ ಗಂಟೆಗಳು ಮಾತ್ರ; ಮಾಹಿತಿ ತರಿಸಿಕೊಳ್ಳಲು ಜಪಾನ್ ಕ್ಷಿಪ್ರ ಕಾರ್ಯಾಚರಣೆ
Team Udayavani, Jan 20, 2024, 8:46 PM IST
ನವದೆಹಲಿ: ಜಪಾನಿನ ಚಂದ್ರಾಧ್ಯಯನ ನೌಕೆ “ಸ್ಲಿಮ್’ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದೆ. ತಾನು ಎಲ್ಲಿ ನೌಕೆಯನ್ನು ಇಳಿಸಬೇಕೆಂದು ಜಪಾನ್ ಅಂದುಕೊಂಡಿತ್ತೋ, ಅದೇ ಜಾಗದ 100 ಮೀಟರ್ ಆಸುಪಾಸಲ್ಲಿ ನಿಖರವಾಗಿ ಇಳಿಸಲು ಯಶಸ್ವಿಯಾಗಿದೆ. ಈ ಮೂಲಕ ಸುಗಮವಾಗಿ ಚಂದ್ರನ ಮೇಲಿಳಿದ ಜಗತ್ತಿನ ಐದನೇ ದೇಶ ಎಂಬ ದಾಖಲೆ ನಿರ್ಮಿಸಿದೆ. ಆತಂಕಕಾರಿಯಾದ ಸಂಗತಿಯೇನೆಂದರೆ ನೌಕೆಗೆ ಇಂಧನ ಪೂರೈಸುವ ಸೌರಫಲಕ ವಿದ್ಯುತ್ ಉತ್ಪಾದಿಸಲು ವಿಫಲವಾಗಿದೆ! ತಕ್ಷಣಕ್ಕೆ ಜಪಾನಿನ ಬಾಹ್ಯಾಕಾಶ ಸಂಸ್ಥೆ ಜಾಕ್ಸಾ, ಸ್ಲಿಮ್ ಸಂಗ್ರಹಿಸಿರುವ ಮಾಹಿತಿ ತರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ.
ಸದ್ಯ ಬ್ಯಾಟರಿ ಮೂಲಕ ಸ್ಲಿಮ್‌ಗೆ ವಿದ್ಯುತ್ ಪೂರೈಕೆಯಾಗುತ್ತಿದೆ, ಈ ಬ್ಯಾಟರಿಯ ಒಟ್ಟಾರೆ ಅವಧಿ ಕೆಲವೇ ಗಂಟೆಗಳು ಮಾತ್ರ. ಆದ್ದರಿಂದ ಜಾಕ್ಸಾ ಅಪಾಯಕಾರಿ ಸಾಹಸಗಳಿಗೆ ಕೈಹಾಕದೇ ಲಭ್ಯವಿರುವ ಮಾಹಿತಿ ಪಡೆಯಲು ಆದ್ಯತೆ ನೀಡಿದೆ. ಸೂರ್ಯನ ಕಿರಣಗಳು ಬೀಳುವ ಕೋನ ಬದಲಾದ ನಂತರ, ಸ್ಲಿಮ್‌ನ ಸೌರಫಲಕ ಮತ್ತೆ ಕಾರ್ಯಾಚರಣೆ ಆರಂಭಿಸಲಿದೆ. ಅಷ್ಟಾಗಲೂ ಇನ್ನೂ 30 ದಿನಗಳು ಬೇಕು. ಅಲ್ಲಿಯವರಿಗೆ ಸ್ಲಿಮ್ ಉಪಗ್ರಹ ಸಕ್ರಿಯವಾಗಿರುವುದು ಅಸಾಧ್ಯ!
ದಕ್ಷಿಣ ಧ್ರುವದಲ್ಲಿಳಿದ ಮೊದಲ ದೇಶ ಭಾರತ: ಕಳೆದ ವರ್ಷ ಭಾರತದ ಚಂದ್ರಯಾನ-3 ನೌಕೆ ಯಶಸ್ವಿಯಾಗಿ ಚಂದ್ರನ ಮೇಲಿಳಿದಿತ್ತು. ಅದರ ಮೂಲಕ ಈ ಸಾಧನೆ ಮಾಡಿದ ಜಗತ್ತಿನ 4ನೇ ದೇಶ ಎಂಬ ಹೆಗ್ಗಳಿಕೆ ಭಾರತಕ್ಕೆ ದಕ್ಕಿತ್ತು. ಆದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಯಶಸ್ವಿಯಾಗಿಳಿಸಿದ ಜಗತ್ತಿನ ಮೊದಲ ಭಾರತ ಎನ್ನುವುದು ಇಲ್ಲಿನ ಹೆಗ್ಗಳಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.