ತನ್ನಿಂತಾನೆ ಚಲಿಸಿದ ಲಾರಿ; ತಪ್ಪಿದ ಭಾರಿ ಅನಾಹುತ
Team Udayavani, Sep 27, 2024, 11:17 PM IST
ಅರಂತೋಡು: ಆಲೆಟ್ಟಿ ರಸ್ತೆಯ ಗುರುಂಪು ಬಳಿ ಇರುವ ರಬ್ಬರ್ ಗೋಡಾನ್ನಿಂದ ರಬ್ಬರ್ ಲೋಡ್ ಮಾಡಿ ನಿಂತಿದ್ದ ದೊಡ್ಡ ಗಾತ್ರದ ಲಾರಿಯೊಂದು ತನ್ನಿಂತಾನೆ ಮುಂದಕ್ಕೆ ಚಲಿಸಿ ಆಲೆಟ್ಟಿಯ ಮುಖ್ಯ ರಸ್ತೆಯನ್ನು ದಾಟಿ ರಸ್ತೆ ಬಿಟ್ಟು ಕೆಳಗೆ ಇಳಿದ ಘಟನೆ ಶುಕ್ರವಾರ ಸಂಭವಿಸಿದೆ.
ಮುಖ್ಯ ರಸ್ತೆಯಲ್ಲಿ ಆ ಸಮಯದಲ್ಲಿ ಯಾವುದೇ ವಾಹನಗಳ ಮತ್ತು ಜನರ ಓಡಾಟವಿಲ್ಲದಿದ್ದುದರಿಂದ ಭಾರಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಲಾರಿಯ ಮೇಲೆ ಚಾಲಕ ರಬ್ಬರ್ ಲೋಡ್ ಮಾಡಿ ಟಾರ್ಪಲ್ ಹೊದಿಕೆಯನ್ನು ಹಾಕುತ್ತಿರುವಾಗಲೇ ಇದ್ದಕ್ಕಿದ್ದಂತೆ ಲಾರಿ ಮುಂದಕ್ಕೆ ಚಲಿಸಿದೆ.
ಗಮನಕ್ಕೆ ಬಂದ ಕೂಡಲೇ ಲಾರಿ ಚಾಲಕ ಲಾರಿ ಮೇಲಿನಿಂದ ಕೆಳಕ್ಕೆ ಹಾರಿದ್ದಾರೆ. ಒಂದು ವೇಳೆ ಲಾರಿ ಮತ್ತಷ್ಟು ಮುಂದಕ್ಕೆ ಚಲಿಸಿರುತ್ತಿದ್ದರೆ ಕೆಳಗಡೆ ಮನೆಗಳಿದ್ದು, ಅವಘಡ ಸಂಭವಿಸುವ ಸಾಧ್ಯತೆ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.