ಸಾಮೂಹಿಕ ವಿವಾಹ ಭಾಗ್ಯದ ವಿವಾಹ
ವೈಭವದಿಂದ ಕಟ್ಟೆಬಸವಲಿಂಗೇಶ್ವರ ಜಾತ್ರೆ : ನವದಾಂಪತ್ಯಕ್ಕೆ ಕಾಲಿಟ್ಟ 14 ಜೋಡಿಗಳು
Team Udayavani, Mar 4, 2023, 3:26 PM IST
ಬಳಗಾನೂರು: ಗೌಡನಭಾವಿ ಗ್ರಾಮದಲ್ಲಿ ಉಟಕನೂರು ಮೌನಯೋಗಿ ಲಿಂ|ಶ್ರೀಮರಿಬಸವಲಿಂಗೇಶ್ವರು ಪ್ರತಿಷ್ಠಾಪಿಸಿದ ಶ್ರೀಕಟ್ಟೆಬಸವಲಿಂಗೇಶ್ವರ 30ನೇ ಜಾತ್ರಾ ಮಹೋತ್ಸವ ಹಾಗೂ ಲಿಂ| ನಾಗಪ್ಪ ತಾತನವರ ಪುಣ್ಯಸ್ಮರಣೋತ್ಸವ ನಿಮಿತ್ತ ನಡೆದ 14 ಜೋಡಿ ಸಾಮೂಹಿಕ ವಿವಾಹಗಳು ಭಾಗ್ಯದ ವಿವಾಹಗಳು ಎಂದು ಉಟಕನೂರು ಅಡವಿಸಿದ್ದೇಶ್ವರಮಠದ ಬಸವರಾಜದೇಶಿಕೇಂದ್ರ ಸ್ವಾಮಿಗಳು ಹೇಳಿದರು.
ಗೌಡನಭಾವಿ ಗ್ರಾಮದ ಶ್ರೀಕಟ್ಟೆಬಸವಲಿಂಗೇಶ್ವರ 30ನೇ ಜಾತ್ರಾ ಮಹೋತ್ಸವ, ಲಿಂ| ನಾಗಪ್ಪ ತಾತನವರ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡ ಸಾಮೂಹಿಕ ವಿವಾಹ ಹಾಗೂ ಮಹಾದಾಸೋಹಿ ಕಲಬುರ್ಗಿ ಶರಣಬಸವೇಶ್ವರ ಪುರಾಣ ಪ್ರವಚನ ಮಹಾಮಂಗಲ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಪವಾಡ ಪುರುಷರು, ಮಹಾತ್ಮರೆನಿಕೊಂಡ ಉಟಕನೂರು ಲಿಂ| ಮರಿಬಸವಲಿಂಗತಾತನವರ ಪರಮಶಿಷ್ಯರಾದ ಲಿಂ| ಶ್ರೀನಾಗಪ್ಪ ತಾತನವರು ಶ್ರೀಗಳ ಕೃಪಾಶೀರ್ವಾದಗಳೊಂದಿಗೆ ಮುಕ್ತಿ ಮಾರ್ಗ ಕಂಡುಕೊಂಡು, ಸದ್ಭಕ್ತರರಿಗೆ ಮಾರ್ಗದರ್ಶಕರಾಗಿ, ಧಾರ್ಮಿಕ ಆದ್ಯತ್ಮೀಕ ಕಾರ್ಯಕ್ರಮಗಳು ಸರಾಗವಾಗಿ ನಡೆಯುವಂತೆ ಮಾಡಿದ ಶ್ರೀನಾಗಪ್ಪ ತಾತನವರು ಎಂದರು.
ಜಾತ್ರಾ ನಿಮಿತ್ತ ಲಿಂ| ನಾಗಪ್ಪ ತಾತನವರ ಕೃಪಾಶೀರ್ವಾದದೊಂದಿಗೆ, ಪಲ್ಲಕ್ಕಿ ಮಹೋತ್ಸವ, ಮೆರವಣಿಗೆ, ಮಹಾದಾಸೋಹಿ ಕಲಬುರ್ಗಿ ಶರಣಬಸವೇಶ್ವರ ಪುರಾಣ ಪ್ರವಚನ ಮಹಾಮಂಗಲ, ಉಚ್ಚಾಯ ಮಹೋತ್ಸವ ಸೇರಿ ಇತರೆ ಧಾರ್ಮಿಕ ಕಾರ್ಯಕ್ರಮಗಳು ಉಟಕನೂರು ಅಡವಿಸಿದ್ದೇಶ್ವರ ಮಠದ ಮರಿಬಸವರಾಜ ದೇಶಿಕೇಂದ್ರಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಮುಖಂಡರಾದ ನಿರುಪಾದೇಪ್ಪ ವಕೀಲರು, ಸಿದ್ದಯ ಶಾಸ್ತ್ರಿಗಳು ಮಾತನಾಡಿದರು.
ಇರಲಕ್ ಮಠದ ಬಸವಪ್ರಸಾದ ಶರಣರು, ಲಿಂ| ಶ್ರೀನಾಗಪ್ಪ ತಾತನವರ ಶಿಷ್ಯರಾದ ಅಮರೇಶ, ಚನ್ನಪ್ಪತಾತ ಗೊರೇಬಾಳ, ತಿಪ್ಪನಟ್ಟಿ ಲಿಂಗಣ್ಣತಾತ, ಎಲೆಕೂಡ್ಲಿಗಿ ತಿಮ್ಮಣ್ಣತಾತ, ಅರ್ಚಕರಾದ ಚಂದ್ರಶೇಖರಸ್ವಾಮಿ, ವಿಜಯಕುಮಾರಸ್ವಾಮಿ, ಮಸ್ಕಿ ಚೇತನಪಾಟೀಲ್, ಗ್ರಾಪಂ ಅಧ್ಯಕ್ಷೆ ಹನುಮಂತೆಮ್ಮ ದೊಡ್ಡಪ್ಪ, ಪಿಡಿಒ ಲಕ್ಷ್ಮೀಕಾಂತ, ಅಮರೇಶ ವಕೀಲರು, ಮಲ್ಲನಗೌಡ ಸುಂಕನೂರು, ರಮೇಶ ಕರೆಕುರಿ, ಮುರುಗೇಶ, ಶರಣಪ್ಪ ಜಾಲಿಹಾಳ, ದುರಗನಗೌಡ ಸೇರಿದಂತೆ ಜನಪ್ರತಿನಿ ಧಿಗಳು ಇದ್ದರು.
ಸಸಿ ವಿತರಣೆ: ಮಸ್ಕಿ ಪ್ರಕೃತಿ ಫೌಂಡೇಶನ್ ವತಿಯಿಂದ ನವದಂಪತಿಗಳಿಗೆ ಶ್ರೀಗಳು ಹಾಗೂ ಪ್ರಕೃತಿ ಫೌಂಡೇಷನ್ ಪದಾಧಿಕಾರಿಗಳು ಸಸಿ ವಿತರಿಸಿದರು. ಬಳಗಾನೂರು ಪಿಎಸ್‌ಐ ಪ್ರಕಾಶರಡ್ಡಿಡಂಬಳ ನೇತೃತ್ವದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.