ಶತಮಾನ ಕಳೆದರೂ ಮಾದರಿಯಾಗದ ಶಾಸಕರ ಮಾದರಿ ಶಾಲೆ

ಸರಕಾರಿ ಹೈಸ್ಕೂಲ್‌ ತೆರೆಯುವುದಕ್ಕೆ ಶಿಕ್ಷಣ ಇಲಾಖೆ ಹಿಂದೇಟು ಹಾಕುತ್ತಿರುವುದೇಕೆ

Team Udayavani, Oct 17, 2022, 3:36 PM IST

ಶತಮಾನ ಕಳೆದರೂ ಮಾದರಿಯಾಗದ ಶಾಸಕರ ಮಾದರಿ ಶಾಲೆ

ತೆಲಸಂಗ: ಈಗಿನ ಆಂಗ್ಲ ಮಾಧ್ಯಮ ಶಾಲೆಗಳ ಆಕರ್ಷಣೆಯ ನಡುವೆಯೂ ಬ್ರಿಟಿಷರ ಕಾಲದಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಗ್ರಾಮದ ನಮ್ಮೂರ ಸರಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 151 ವರ್ಷ ತುಂಬಿದರೂ ಶತಮಾನೋತ್ಸವದ ಸಂಭ್ರಮ ಕಾಣದೇ ಅನಾಥವಾಗಿದೆ.

ಸರಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶತಮಾನ ಕಂಡ ರಾಜ್ಯದ 143 ಸರಕಾರಿ ಶಾಲೆಗಳಿಗೆ 20 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಬೆಳಗಾವಿ ಜಿಲ್ಲೆಯ 5 ಶಾಲೆಗಳನ್ನು ಅನುದಾನಕ್ಕಾಗಿ ಆಯ್ಕೆ ಮಾಡಲಾಗಿದೆ. ಆದರೆ ಚಿಕ್ಕೋಡಿ ಶೆ„ಕ್ಷಣಿಕ ಜಿಲ್ಲೆಯಲ್ಲಿನ ತೆಲಸಂಗದಲ್ಲಿನ 151 ವರ್ಷದ ಹಳೆಯ ಶಾಲೆ ಅಭಿವೃದ್ಧಿಗಾಗಿ ಬಾಯೆ¤ರೆದು ನಿಂತಿದ್ದರೂ ಪಟ್ಟಿಯಿಂದ ಹೆಸರು ಕೈ ಬಿಟ್ಟಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.1871ರಲ್ಲಿ ಪ್ರಾರಂಭವಾದ ಜಿಲ್ಲೆಯಲ್ಲಿಯೇ
ಅತ್ಯಂತ ಹಿರಿಯದಾದ ಸರಕಾರಿ ಶಾಲೆ ಇದು. ಇಂದು ದಯನೀಯ ಸ್ಥಿತಿ ತಲುಪಿದ್ದು, ಇಲ್ಲಗಳ ಸರಮಾಲೆಗೆ ಈ ಕನ್ನಡ ಶಾಲೆ ನಲುಗಿ ಹೋಗಿದೆ. ಹೆಸರಿಗೆ ಮಾತ್ರ ಶಾಸಕರ ಮಾದರಿ ಶಾಲೆ ಇದಾಗಿದೆ ಎಂದು ಜನ ದೂರುತ್ತಿದ್ದಾರೆ.

2 ಎಕರೆ ಜಾಗದಲ್ಲಿ ಬ್ರಿಟಿಷ ಕಾಲದ ಕೆಲ ಕಟ್ಟಡಗಳನ್ನು ಬೀಳಿಸಿ ಕಟ್ಟಲಾಗಿದ್ದು, ಕೆಲ ಕೊಠಡಿಗಳ ನವೀಕರಣದ ಅವಶ್ಯಕತೆ ಇದೆ. 20 ಸಾವಿರ ಜನಸಂಖ್ಯೆಯ ಗ್ರಾಮದಲ್ಲಿ 151 ವರ್ಷ ಹಳೆಯ ಶಾಲೆ ಇದ್ದರೂ ಹೆ„ಟೆಕ್‌ ಸ್ಪರ್ಷ ಇಲ್ಲ, ಸಾವಿರಾರು ಮಕ್ಕಳು ಓದುತ್ತಿದ್ದ ಶಾಲೆಯಲ್ಲೀಗ ಕೇವಲ 317 ಮಕ್ಕಳು ಓದುತ್ತಿದ್ದು, 11 ಜನ ಶಿಕ್ಷಕರಿದ್ದಾರೆ. ಸೌಲಭ್ಯಗಳಿಲ್ಲದೇ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.

ಪ್ರೌಢಶಾಲೆಗೆ ಹಿಂದೇಟು ಏಕೆ?; ಸುಮಾರು 20 ಸಾವಿರ ಜನಸಂಖ್ಯೆ ಹೊಂದಿದ ತೆಲಸಂಗ ಹೋಬಳಿಯೂ ಹೌದು. ಆದರೆ ಇಲ್ಲಿ ಇನ್ನುವರೆಗೂ ಸರಕಾರಿ ಪ್ರೌಢಶಾಲೆ ಇಲ್ಲದಿರುವುದು ವಿಪರ್ಯಾಸದ ಸಂಗತಿ. ಒಣ ಬೇಸಾಯದ ಬಡ ಕೂಲಿ ಕಾರ್ಮಿಕರನ್ನೇ ಹೆಚ್ಚು ಹೊಂದಿದ ಈ ಗ್ರಾಮದಲ್ಲಿ 10ನೇ ತರಗತಿ ವರೆಗೆ ವರ್ಗಗಳ ವಿಸ್ತರಣೆ ಹಾಗೂ ಪಿಯು ಕಾಲೇಜು ತೆರಯುವ ಅವಶ್ಯಕತೆ ಇದೆ. ಇಷ್ಟೊಂದು ದೊಡ್ಡ ಗ್ರಾಮದಲ್ಲಿ ಸರಕಾರಿ ಹೈಸ್ಕೂಲ್‌ ತೆರೆಯುವುದಕ್ಕೆ ಶಿಕ್ಷಣ ಇಲಾಖೆ ಹಿಂದೇಟು ಹಾಕುತ್ತಿರುವುದೇಕೆ ಎನ್ನುವ ಅನುಮಾನ ಗ್ರಾಮಸ್ಥರನ್ನು ಕಾಡುತ್ತಿದೆ.

ಶಾಸಕರ ಮಾದರಿ ಶಾಲೆಗೆ ಬೇಕಿದೆ ಅನುದಾನ: ವಿದ್ಯಾರ್ಥಿಗಳು ಕೂಡ್ರಲು ಕೊಠಡಿಗಳಲ್ಲಿ ಬೆಂಚ್‌ ಗಳಿಲ್ಲ. ನೆಲದ ಮೇಲೆ ಕುಳಿತು ಪಾಠ ಕೇಳಬೇಕು. ಸ್ಮಾರ್ಟ್‌ ಕ್ಲಾಸ್‌ ಇಲ್ಲ. ಗ್ರಂಥಾಲಯ ಕೊಠಡಿ, ಕ್ರೀಡಾ ಕೊಠಡಿ, ಸಭಾ ಭವನ, ಸಿಸಿ ಕ್ಯಾಮೆರಾ, ಗಣಕಯಂತ್ರದ ಕೊಠಡಿ, ಶುದ್ಧ ಕುಡಿಯುವ ನೀರು ಘಟಕ, ಡೈನಿಂಗ್‌ ಹಾಲ್‌ ಇಲ್ಲ. ಇದು ಶಾಸಕರ ಮಾದರಿ ಶಾಲೆಯಾಗಿರುವುದರಿಂದ ಅವರೇ ಆಸಕ್ತಿ ವಹಿಸಿ ಶಾಲೆ ಅಭಿವೃದ್ಧಿಗೆ ಮುಂದಾಗಬೇಕಿದೆ. ಶಿಕ್ಷಣ ಇಲಾಖೆಯು ಮುತುವರ್ಜಿ ವಹಿಸಿ ಶತಮಾನೋತ್ಸವದ ಹೆಸರಲ್ಲಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ನೀಡಬೇಕಿದೆ

ಎಂ.ಎಲ್‌.ಎ.,ಎಂಪಿ, ಎಂಎಲ್‌ಸಿ ಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಅನುದಾನ ನೀಡುತ್ತಾರೆ. ಬಡ ಮಕ್ಕಳು ಓದುವ ಸರಕಾರಿ ಶಾಲೆಗೇಕೆ ನೀಡುತ್ತಿಲ್ಲ?ಗ್ರಾಮ 20 ಸಾವಿರ ಜನಸಂಖ್ಯೆ ಹೊಂದಿದರೂ ಪ್ರೌಢಶಾಲೆಯನ್ನಾಗಿ ಮೇಲ್ದರ್ಜೆಗೇರಿಸಿಲ್ಲ. ಅಧಿ ಕಾರಿ ಹಾಗೂ ಜನಪ್ರತಿನಿ ಧಿಗಳ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲಿನ ಪ್ರೀತಿಗೆ ಶತಮಾನ ಕಂಡ ಶಾಲೆ ಬಡವಾಗಿದೆ. ಬಡ ಮಕ್ಕಳು ಪರದೇಶಿಗಳಂತಾಗಿದ್ದಾರೆ. ಬಡವರ ಮನವಿಗೆ ಯಾರೊಬ್ಬರೂ ಕಿವಿಗೊಡುತ್ತಿಲ್ಲ.
ಅಪ್ಪು ಜಮಾದರ, ತೆಲಸಂಗ ಬ್ಲಾಕ್‌ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ

ಇಲ್ಲಿಯ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ಶತಮಾನೋತ್ಸವ ಆಚರಿಸಲು ಸಭೆ ಸೇರಿ ಸಿದ್ದತೆಯನ್ನೂ ನಡೆಸಿದ್ದರು. ಆದರೆ ಅಭಿವೃದ್ಧಿ ಹೊಂದಿರದ ಶಾಲೆಯಲ್ಲಿ ಬೃಹತ್‌ ಕಾರ್ಯಕ್ರಮ ಹಮ್ಮಿಕೊಂಡರೆ ಅಪಮಾನವಾಗುತ್ತದೆ. ಹೀಗಾಗಿ ಮೊದಲು ಅಭಿವೃದ್ಧಿ ಪಡಿಸೋಣ. ನಂತರ ಶತಮಾನೋತ್ಸವ ಆಚರಿಸೋಣ ಎಂದು ತೀರ್ಮಾನಿಸಲಾಯಿತು. ಈಗ 151 ವರ್ಷ ಕಳೆದರೂ ಮತ್ತೆ ಯಾರೊಬ್ಬರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.

ಬಿ.ಎಚ್‌.ಶೆಲ್ಲೆಪ್ಪಗೋಳ, ಮುಖ್ಯಶಿಕ್ಷಕ ತೆಲಸಂಗ.

*ಜೆ.ಎಮ್‌.ಖೊಬ್ರಿ

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavai: ಆಟೋಗೆ ಕಾರು ಟಚ್ ಆಗಿದ್ದಕ್ಕೆ ಮಾಜಿ ಶಾಸಕರ ಹ*ತ್ಯೆ!

Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!

Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು

Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು

Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ

Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ

Belagavi: Rpe, mrder have increased due to the court system: Muthalik

Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್

Belagavi: Return to public life in two weeks: Minister Lakshmi Hebbalkar

Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.