Britain; ಬ್ರಿಟನ್‌ನಲ್ಲಿ ಹೊಸ ರೂಪಾಂತರಿ: ಸೋಂಕು ಪ್ರಕರಣಗಳ ಹೆಚ್ಚಳ
Team Udayavani, Aug 6, 2023, 7:35 AM IST
ಲಂಡನ್: ಕೊರೊನಾದಿಂದ ವಿಶ್ವ ಮುಕ್ತವಾಗುತ್ತಿದೆ ಎಂದುಕೊಳ್ಳುತ್ತಿರುವಾಗಲೇ “ಎರಿಸ್’ ಎಂದು ಹೆಸರಿಸಲಾಗಿರುವ ಕೊರೊನಾ ಹೊಸ ರೂಪಾಂತರಿ ಇಜಿ.5.1 ಬ್ರಿಟನ್‌ನಲ್ಲಿ ಪತೆಯಾಗಿದೆ. ಅಲ್ಲದೇ, ಎಲ್ಲೆಡೆ ಸೋಂಕು ಪ್ರಕರಣ ಹೆಚ್ಚಿಸಿದ್ದ ಒಮಿಕ್ರಾನ್ ರೂಪಾಂತರಿಯ ಉಪತಳಿಯಾಗಿರುವ ಎರಿಸ್, ಅಷ್ಟೇ ಪರಿಣಾಮಕಾರಿಯಾಗಿ ರಾಷ್ಟ್ರಾದ್ಯಂತ ಸೋಂಕು ಹೆಚ್ಚಲು ಕಾರಣವಾಗುತ್ತಿದೆ ಎಂದು ಬ್ರಿಟನ್ ವೈದ್ಯಕೀಯ ತಜ್ಞರು ತಿಳಿಸಿದ್ದಾರೆ.
ಬ್ರಿಟನ್‌ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ವಾರದಿಂದ ವಾರಕ್ಕೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಶೇ.14.6ರಷ್ಟು ಪ್ರಕರಣಗಳು ಎರಿಸ್ ರೂಪಾಂತರಿಯದ್ದೇ ಆಗಿವೆ. ಇದು ದೇಶದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿರುವ 2ನೇ ರೂಪಾಂತರಿಯೂ ಆಗಿದ್ದು, ಎರಿಸ್ ದೃಢಪಟ್ಟವರಲ್ಲಿ ಹೆಚ್ಚಿನವರಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂಥ ಸ್ಥಿತಿ ಇದೆ. ವಯಸ್ಸಾದವರಲ್ಲಿ ಉಸಿರಾಟದ ಸಮಸ್ಯೆಯೂ ವರದಿಯಾಗುತ್ತಿದೆ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.