Honnavar ದೈವಜ್ಞ ಬ್ರಾಹ್ಮಣ ಪೀಠಕ್ಕೆ ನೂತನ ಸ್ವಾಮೀಜಿ
Team Udayavani, Apr 2, 2024, 11:27 PM IST
ಹೊನ್ನಾವರ: ದೈವಜ್ಞ ಬ್ರಾಹ್ಮಣ ಸಮಾಜದ ಮಠ ಪರಂಪರೆ ಹಾಗೂ ಇತಿಹಾಸದಲ್ಲಿ ಬುಧವಾರ ಹೊಸ ಅಧ್ಯಾಯ ಆರಂಭವಾಗಲಿದೆ. ತಾಲೂಕಿನ ಕರ್ಕಿಯ ಜ್ಞಾನೇಶ್ವರಿ ಪೀಠದಲ್ಲಿ ನೂತನ ಶ್ರೀಗಳ ಸನ್ಯಾಸ ಸ್ವೀಕಾರ ಸಮಾರಂಭ ನಡೆಯಲಿದೆ.
ದೈವಜ್ಞ ಸಮಾಜದ ಗಣಪತಿ ದೇವಸ್ಥಾನದ ಅರ್ಚಕರಾಗಿದ್ದ ರಾಮಚಂದ್ರ ಭಟ್ಟರು ತಮ್ಮ ಮಗನನ್ನು ಮಠಾಧಿಪತಿಯಾಗಲು ಒಪ್ಪಿಗೆ ಕೊಟ್ಟ ಕಾರಣ ಸ್ವತಂತ್ರ ದೈವಜ್ಞ ಮಠ 1986ರಲ್ಲಿ ಕರ್ಕಿಯಲ್ಲಿ ಸ್ಥಾಪನೆ ಯಾಯಿತು. ಕಾರವಾರದ ನೇತಲಕರ್ ಕುಟುಂಬದ ಗುರುನಾಥ ಮತ್ತು ದೀಪಾ ದಂಪತಿ ದ್ವಿತೀಯ ಪುತ್ರ ಸಂತೋಷಿಮಾ ಆರಾಧಕರಾಗಿದ್ದ ಕನ್ಹಯ್ನಾ ಎಂಬ ಹೆಸರಿನ 30 ವರ್ಷದ ವಟುವನ್ನು ಶಿಷ್ಯನಾಗಿ ಸ್ವೀಕರಿಸಲು ನಿರ್ಧರಿಸಿದ್ದಾರೆ. ಕನ್ಹಯ್ನಾ ಕರ್ಕಿ ಮಠದ ಮತ್ತು ಶೃಂಗೇರಿ ಮಠದ ಪಾಠಶಾಲೆಗಳಲ್ಲಿ ಓದಿದ್ದಾರೆ. ಇವರ ಸನ್ಯಾಸ ಸ್ವೀಕಾರ ಕಾರ್ಯಕ್ರಮ ಸಮಾಜದ ಪ್ರಮುಖರ ಸಮ್ಮುಖದಲ್ಲಿ ಕರ್ಕಿ ಮಠದಲ್ಲಿ ನಡೆಯಲಿದೆ.
ಜ್ಞಾನೇಶ್ವರಿ ಪೀಠದ ಸಚ್ಚಿದಾನಂದ ಶ್ರೀಗಳು ವಿದ್ಯಾಭ್ಯಾಸ ಮಾಡಿದ ಧಾರವಾಡದ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿದ್ಯಾಲಯದ ಶ್ರೀ ರಾಜೇಶ್ವರ ಶಾಸ್ತ್ರಿಗಳು, ಗೋಕರ್ಣದ ವಿದ್ವಾಂಸರು, ದೈವಜ್ಞ ಸಮಾಜದ ವಿದ್ವಾಂಸರು ಸನ್ಯಾಸ ಸ್ವೀಕಾರದ ಧಾರ್ಮಿಕ ವಿಧಿಗಳನ್ನು ನೆರವೇರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.