ಮೂರು ಕುಟುಂಬಗಳ ಸುತ್ತ ಹೆಣೆದ ಕಾದಂಬರಿ


Team Udayavani, Nov 4, 2020, 5:00 AM IST

ಮೂರು ಕುಟುಂಬಗಳ ಸುತ್ತ ಹೆಣೆದ ಕಾದಂಬರಿ

ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.

“ಗಂಗವ್ವ ಗಂಗಾಮಾಯಿ’ ಕಾದಂಬರಿಯು ಅಪ್ಪಟ ಧಾರವಾಡ ನೆಲದ ಸೊಗಡಿನ ಕೃತಿ. ಈ ಕೃತಿಯಲ್ಲಿ ಲೇಖಕರು ಧಾರವಾಡವನ್ನು ಹಾಗೂ ಅಲ್ಲಿನ ಭಾಷೆಯನ್ನು ಬಹಳ ಚೆನ್ನಾಗಿ ನಮಗೆ ಪರಿಚಯಿಸುವಲ್ಲಿ ಸಫ‌ಲರಾಗಿದ್ದಾರೆ. ಧಾರವಾಡದ ಸುಂದರ ಭಾಷೆಯು ಈ ಕೃತಿಯಲ್ಲಿ ಧಾರಾಳವಾಗಿ ಬಳಕೆ ಆಗಿರು ವುದರಿಂದ ಓದಲು ಖುಷಿಯಾಗುತ್ತದೆ.

ಇಡೀ ಕಾದಂಬರಿಯನ್ನು ಮೂರು ಕುಟುಂಬಗಳ ಸುತ್ತ ಹೆಣೆಯಲಾಗಿದೆ. ಈ ಕಾದಂ ಬರಿಯಲ್ಲಿ ಬಳಸ ಲಾಗಿರುವ ಮೊದಲನೆಯ ಕುಟುಂಬ ಗಂಗವ್ವ, ಅವಳ ಮಗ ಕಿಟ್ಟಿ ಮತ್ತು ಗಂಗವ್ವಳ ತಮ್ಮ ರಾಘಪ್ಪನದ್ದು. ಇನ್ನೊಂ ದು ದೇಸಾಯಿ ಯವ ರದ್ದು. ಕಥೆಯುದ್ದಕ್ಕೂ ದೇಸಾಯಿವರ ಕುಟುಂಬ ಗಂಗವ್ವನಿಗೆ ಬೆನ್ನೆಲುಬಾಗಿ ನಿಂತಿರುತ್ತದೆ.

ತನ್ನ ಮಗ ಕಿಟ್ಟಿಯನ್ನು ಓದಿಸಿ ಸ್ವಂತ ಕಾಲಲ್ಲಿ ನಿಲ್ಲುವಂತೆ ಮಾಡುವುದೇ ಗಂಗವ್ವನ ಗುರಿ ಯಾಗಿತ್ತು. ಈ ಕುಟುಂಬದಲ್ಲಿ ಗಂಗ ವ್ವಳ ತಮ್ಮ ರಾಘಪ್ಪ ಪ್ರವೇಶ ಪಡೆದ ಮೇಲೆ ಕಥೆ ಮತ್ತಷ್ಟು ಚುರುಕು, ತಿರುವು ಪಡೆ ಯುತ್ತದೆ. ಯಾಕೆಂದರೆ ರಾಘಪ್ಪನನ್ನು ಗಂಗವ್ವ ದ್ವೇಷಿಸುತ್ತಿದ್ದರು. ಆದರೆ ಇಡೀ ಸಂಬಂ ಧದಲ್ಲಿ ಒಂದು ಹೊಸ ತಿರುವು ಬರುವುದು ಕಿಟ್ಟಿಯು ರಾಘಪ್ಪನ ಮಗಳನ್ನೇ ಮದುವೆಯಾದ ಬಳಿಕ.

ಈ ಮದುವೆಯ ಬಳಿಕ ಕಥೆಯು ರಾಘಪ್ಪನ ಸುತ್ತಲೇ ಗಿರಕಿ ಹೊಡೆಯುತ್ತದೆ. ಅವನ ಚಾಣಾಕ್ಷತೆ, ದೌರ್ಬ ಲ್ಯಗಳು ಕಾದಂಬರಿಯನ್ನು ಬೆಳೆಸುತ್ತಾ ಸಾಗುತ್ತದೆ. ರಾಘಪ್ಪನ ಕೆಲವು ಉಪಾಯ ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ದೇಸಾಯಿ ಕುಟುಂಬ ಪ್ರಮುಖ ಅಡ್ಡಿಯಾಗಿ ನಿಲ್ಲುತ್ತದೆ. ಇತ್ತ ದೇಸಾಯಿಯ ಎರಡನೇ ಮಗ ವಸಂತ ಇಡೀ ಕುಟುಂಬದ ದೌರ್ಬಲ್ಯ ವಾಗಿದ್ದ.

ರಾಘಪ್ಪ ಮತ್ತು ದೇಸಾಯಿ ಇಬ್ಬರು ಚದುರಂಗದಾಟದಲ್ಲಿ ತಮ್ಮ ಕಾಯಿಗಳನ್ನು ನಡೆಸುತ್ತಾ ಹೋಗುತ್ತಾರೆ. ಆ ಶೀತಲ ಸಮರದಲ್ಲಿ ರಾಘಪ್ಪನಿಗೆ ಸೋಲುಂ ಟಾಗುತ್ತದೆ. ಇದರ ಜತೆಯಲ್ಲಿ ನಡೆಯುವ ಎರಡು ದುರಂತ ಘಟನೆಗಳಲ್ಲಿ, ರಾಘಪ್ಪನ ಪ್ರೇಯಸಿ ಮೆಹಬೂಬಾ ಮತ್ತು ಪತ್ನಿಯ ಸಾವು ಸಂಭವಿಸುತ್ತದೆ. ಈ ಎರಡು ಘಟನೆಗಳು ರಾಘಪ್ಪನನ್ನು ಮಾನಸಿಕವಾಗಿ ಜರ್ಝರಿತನನ್ನಾಗಿ ಮಾಡುತ್ತವೆ. ಇದರಿಂದ ಹೊರಬರಲಾಗದೆ ಮಾನಸಿಕವಾಗಿ ಮತ್ತಷ್ಟು ಕುಗ್ಗಿಹೋದ ರಾಘಪ್ಪ ಆತ್ಮಹತ್ಯೆಗೆ ಶರಣಾಗುತ್ತಾನೆ.

ಈ ನಡುವೆ ನೀತಿ ವಂತರಾದ ದೇಸಾಯಿ ತಮ್ಮ ಪುತ್ರ ವಸಂತನ ಮದುವೆಯನ್ನು ರಾಘಪ್ಪನ ಎರಡನೇ ಮಗಳ ಜತೆಗೆ ನೆರವೇರಿಸುತ್ತಾರೆ. ಇದರ ಜತೆಗೆ ಗಂಗವ್ವಳ ಕುಟುಂಬವು ಸಹಜ ಜೀವನಕ್ಕೆ ಮರಳುತ್ತದೆ.

ಗಂಗವ್ವ ಗಂಗಾಮಾಯಿ ಎಂಬ ಹೆಸರಿದ್ದರು ಕೂಡ ಗಂಗವ್ವ ಇಲ್ಲಿ ಮುಖ್ಯವಾಹಿನಿಯಾಗಿ ಇರದೇ ನೇಪಥ್ಯದಲ್ಲಿಯೇ ಇದ್ದು ಓದುಗರನ್ನ ಆವರಿಸಿಕೊಳ್ಳುತ್ತಾಳೆ.

ಕಾದಂಬರಿಯನ್ನು ಯಾವುದೇ ರೂಪಕ, ಪ್ರತಿಮೆಗಳ ಹಂಗಿಲ್ಲದೆ ನೆಲದ ಭಾಷೆಯ ಲ್ಲಿಯೇ ಬರೆದಿರುವುದರಿಂದ ಇದು ನಮ್ಮದು ಎಂದೆನಿಸಿ ಮತ್ತಷ್ಟು ಆಪ್ತವಾಗುತ್ತದೆ. ಇದನ್ನು ಓದಿದ ಮೇಲೆ ಅಲ್ಲಿ ಬಂದಿರುವ ಸ್ಥಳಗಳನ್ನೆಲ್ಲ ಹುಡುಕಿಕೊಂಡು ಹೋಗಬೇಕು ಎನ್ನುವ ಹೊಸ ಆಸೆಯೊಂದು ಉದಯಿಸಿದೆ.

ಸಾವಧಾನವಾಗಿ ನಿಧಾನಗತಿಯಲ್ಲಿ ಸಾಗುವ ಈ ಕೃತಿಯು ಪ್ರತಿಯೋರ್ವನೂ ಓದಬೇಕಾದಂಥ ಉತ್ತಮ ಸಾಹಿತ್ಯವನ್ನು ಹೊಂದಿದೆ.

– ರಾಜೇಶ್ವರಿ ಲಕ್ಕಣ್ಣವರ, ಮೈಸೂರು

ಟಾಪ್ ನ್ಯೂಸ್

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asssaa

ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ

5-spcl

India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !

4-ed

Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್‌

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kundapura: ಬಟ್ಟೆ ವ್ಯಾಪಾರಿ ನಾಪತ್ತೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.