ದೇಶ, ಭಾಷೆ, ಸಂಸ್ಕೃತಿ ಅನಾವರಣಕ್ಕೆ ವೇದಿಕೆ: ನಾಗರಾಜ್
ಮಂಗಳೂರು ಸಾಹಿತ್ಯ ಉತ್ಸವದ ಐದನೇ ಆವೃತ್ತಿಗೆ ವಿ. ನಾಗರಾಜ್ ಚಾಲನೆ
Team Udayavani, Feb 19, 2023, 5:50 AM IST
ಮಂಗಳೂರು: ಸಾಹಿತ್ಯವು ದೇಶದ ಸಂಸ್ಕೃತಿ ಮತ್ತು ಕಾಲವನ್ನು ಪ್ರತಿ ಬಿಂಬಿಸುತ್ತದೆ. ಸಾಹಿತ್ಯ ಉತ್ಸವ ಮೂಲಕ ಭಾಷೆ, ಕಲೆ, ಸಂಸ್ಕೃತಿಯ ಅನಾವರಣವಾಗುತ್ತದೆ ಎಂದು ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ. ನಾಗರಾಜ್ ಹೇಳಿದರು.
ಟಿಎಂಎ ಪೈ ಸಭಾಂಗಣದಲ್ಲಿ ಶನಿವಾರ ಮಂಗಳೂರು ಸಾಹಿತ್ಯ ಉತ್ಸ ವದ ಐದನೇ ಆವೃತ್ತಿಯನ್ನು ಉದ್ಘಾಟಿಸಿ ಅವರು, ಕಳೆದ ಹಲವು ದಶಕಗಳು ನಮ್ಮದಲ್ಲದ ವಿಚಾರಗಳಿಂದ ತುಂಬಿತ್ತು, ಇಂದು ಕಾಲ ಬದಲಾಗಿದೆ. ಐಡಿಯಾ ಆಫ್ ಭಾರತ್ ಮೂಲಕ ದೇಶದ ಇತಿ ಹಾಸ, ಸಾಹಿತ್ಯ, ಕಲೆ, ಸಂಸ್ಕೃತಿಯ ಅನಾ ವರಣ ಸಾಧ್ಯವಾಗುತ್ತಿದೆ ಎಂದರು.
ನಮ್ಮ ಮಣ್ಣಿನ ಸತ್ವವನ್ನು ನಮ್ಮ ಜನಸಾಮಾನ್ಯರು, ಕೆಲವು ಕಲಾವಿದರು, ಸಾಹಿತಿಗಳು ಕಾಪಾಡಿದರು. ಮೆಸಪೊ ಟೇಮಿಯಾ, ಈಜಿಪ್ಟ್, ಗ್ರೀಕ್ ನಾಗರಿಕತೆಗಳು ನಶಿಸಿದ್ದರೆ ಭಾರತ ಮಾತ್ರ 5000 ವರ್ಷಗಳಿಂದ ನಿರಂತರತೆಯನ್ನು ಕಾಯ್ದು ಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಹಿರಿಯ ಪತ್ರಕರ್ತ ಆರ್. ಜಗನ್ನಾಥನ್, ಅಮೃತಕಾಲಕ್ಕೆ ಕಾಲಿಡು ತ್ತಿರುವ ನಾವು ಔನ್ನತ್ಯಕ್ಕೆ ಏರಬೇಕಿದೆ, ಅದಕ್ಕಾಗಿ ಆತ್ಮನಿರ್ಭರತೆಯಿಂದ ಮುನ್ನಡೆಯಬೇಕಿದೆ ಎಂದರು.
2035ರ ವೇಳೆಗೆ ನಮ್ಮ ದೇಶವು 10 ಟ್ರಿಲಿಯನ್ ಡಾಲರ್ ಆರ್ಥಿಕತೆ ಯಾಗುವ ನಿರೀಕ್ಷೆ ಇದೆ. ಈ ವೇಳೆ ತಲಾ ಆದಾಯ ಹೆಚ್ಚಳವಾಗಲಿದೆ, ಇದರಿಂದಾಗಿ ಜನರು ತಮ್ಮ ಆವಶ್ಯಕತೆ ಗಳನ್ನು ಪೂರೈಸಿಕೊಳ್ಳುವ ಮಟ್ಟಿಗೆ ಬೆಳವಣಿಗೆ ಸಾಧಿಸಿರುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ ನಿಟ್ಟೆ ವಿ.ವಿ. ಕುಲಪತಿ ಎನ್.ವಿನಯ ಹೆಗ್ಡೆ ಅವರು ಮಾತನಾಡಿ ಮಂಗಳೂರನ್ನು ಕೆಲವರು ಹಿಂದೆ ನಿರ್ಲಕ್ಷಿಸುತ್ತಿದ್ದರು, ದೂರದಲ್ಲಿ ಕುಳಿತು ದೂರುತ್ತಿದ್ದರು, ಈಗ ಅವರೆ ಲ್ಲರೂ ಮತ್ತೆ ಹಿಂದೆ ಮಂಗಳೂರಿಗೆ ಬರುವಂತಾಗಿದೆ, ಅಷ್ಟರ ಮಟ್ಟಿಗೆ ಗುಣಾತ್ಮಕ ಬದಲಾವಣೆ ಕಾಣುತ್ತಿದೆ, ಹಾಗಾಗಿ ಇಲ್ಲಿ ಸಾಹಿತ್ಯ ಉತ್ಸವ ನಡೆ ಯುತ್ತಿರುವುದು ಸಾರ್ಥಕ ಎಂದರು.
ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಮಂಗಳೂರು ಸಾಕಷ್ಟು ಮುನ್ನಡೆ ಸಾಧಿಸಿದೆ, ಸೌಹಾರ್ದತೆಗೂ ಇದು ತಾಣವಾಗಿದೆ, ಭಾರತ ವಿಶೇಷ ದೇಶವಾದರೆ ಮಂಗಳೂರು ನನಗೆ ವಿಶೇಷ ಸ್ಥಳ, ಬೇರೆ ಕಡೆ ಇಲ್ಲದ ಅನೇಕ ವಿಚಾರಗಳು ಇಲ್ಲಿವೆ ಎಂದು ಬಣ್ಣಿಸಿದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ತುಕಾರಾಮ್ ಪೂಜಾರಿ ಅವರಿಗೆ ಲಿಟ್ ಫೆಸ್ಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತ್ ಫೌಂಡೇಶನ್ ಟ್ರಸ್ಟಿ ಸುನಿಲ್ ಕುಲಕರ್ಣಿ ಸ್ವಾಗತಿಸಿದರು. ಪಲ್ಲಕ್ಕಿಯ ಮೂಲಕ ಪುಸ್ತಕಗಳ ಮೆರವಣಿಗೆಯು ಲಿಟ್ ಫೆಸ್ಟ್ ನಡೆಯುವ ಟಿ.ಎಂ.ಎ ಪೈ ಸಭಾಂಗಣದವರೆಗೂ ನಡೆಯಿತು. ಜಾನಪದ ಕಲಾವಿದೆ ಭವಾನಿ ಅಮ್ಮ ಪೆರ್ಗಡೆ ಅವರು ಪಾಡªನ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಭಾರತದ ಪ್ರಜಾಪ್ರಭುತ್ವ ಯಶಸ್ವಿ: ಬೆಬೋನ್ಸ್
ಭಾರತದ ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಅತ್ಯಂತ ಯಶಸ್ವಿ ಪ್ರಜಾಪ್ರಭುತ್ವ ದೇಶವಾಗಿದೆ ಎಂದು ಆಸ್ಟ್ರೇಲಿಯಾದ ಸಮಾಜ ಶಾಸ್ತ್ರಜ್ಞ ಸಾಲ್ವಟೋರ್ ಬೆಬೋನ್ಸ್ ಹೇಳಿದ್ದಾರೆ.
ಗೋಷ್ಠಿಯಲ್ಲಿ ಅವರು ಮಾತನಾಡಿ, ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಜಾ ಪ್ರಭುತ್ವದ ರ್‍ಯಾಂಕಿಂಗ್ ಅವೈಜ್ಞಾನಿಕವಾಗಿರುತ್ತದೆ, ಭಾರತದ ಬಗ್ಗೆ ಪಾಶ್ಚಿಮಾತ್ಯರು ನಡೆಸುವ ಧಾರ್ಮಿಕ ಸ್ವಾತಂತ್ರÂ ಕುರಿತ ಶ್ರೇಯಾಂಕ ನೀಡುವಿಕೆಯೂ ಕೂಡ ಅಸಮರ್ಪಕ ಎಂದರು. ನಾನು ಭಾರತದ ವಿಶೇಷ ಜ್ಞನಲ್ಲ, ಆದರೆ ಪ್ರಮಾಣೀಕೃತ ಸಮಾಜಶಾಸ್ತ್ರಜ್ಞ, ಭಾರತದಲ್ಲಿನ ವಿಚಾರಗಳ ಬಗ್ಗೆ ನಾನು ಅಂಕಿ ಅಂಶಗಳ ಆಧಾರದಲ್ಲೇ ವಿಶ್ಲೇಷಿಸುವೆ ಎಂದರು.
16 ವಿಚಾರ ಗೋಷ್ಠಿ
ಮೊದಲ ದಿನ ವಿವಿಧ ವಿಷಯ ತಜ್ಞರು 16 ವಿವಿಧ ವಿಚಾರಗೋಷ್ಠಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಚಿವ ವಿ.ಸುನಿಲ್ ಕುಮಾರ್, ಶಾಸಕ ಡಾ| ವೈ.ಭರತ್ ಶೆಟ್ಟಿ, ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಚಿತ್ರನಟ ಪ್ರಕಾಶ್ ಬೆಳವಾಡಿ, ಬಿಜೆಪಿ ಸಂಘಟನ ಕಾರ್ಯದರ್ಶಿ ರಾಜೇಶ್ ಸಹಿತ ಹಲವು ಗಣ್ಯರು ಪಾಲ್ಗೊಂಡರು. ರವಿವಾರವೂ ಬೆಳಗ್ಗೆ 10ರಿಂದ ವಿಚಾರಗೋಷ್ಠಿಗಳು ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.