‘ಜನನಿ ಮತ್ತು ಜನ್ಮಭೂಮಿ’; ಹೆತ್ತ ತಾಯಿ ಮತ್ತು ಹೊತ್ತ ತಾಯಿಯನ್ನು ನೆನಪಿಸಿಕೊಳ್ಳುವ ಸುದಿನ
‘ಅಮ್ಮಂದಿರ ದಿನಾಚರಣೆಯ ಸುಂದರ ಅಭಿಯಾನವನ್ನ ಹಮ್ಮಿಕೊಂಡ ಉದಯವಾಣಿಗೆ ಧನ್ಯವಾದಗಳು.
Team Udayavani, May 10, 2020, 12:59 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ಇವರೇ ಸೃಷ್ಠಿಯ ಆಧಾರ. ಏಕೆಂದರೆ ನವಮಾಸಗಳ ಕಾಲ ಹೊತ್ತು ಪೋಷಿಸುವ ಅಮ್ಮ ಒಂದು ಕಡೆಯಾದರೆ, ಕೊನೆವರೆಗೂ ನಮ್ಮನ್ನೆಲ್ಲ ಹೊತ್ತು ಸಲಹುವ ಭೂತಾಯಮ್ಮ ಇನ್ನೊಂದೆಡೆ. ಈ ಇಬ್ಬರೂ ತಾಯಂದಿರನ್ನ ನೆನೆವ ದಿನವೇ ಅಮ್ಮಂದಿರ ದಿನ. ಆದ್ದರಿಂದ ಇಂತಹ ಸ್ತ್ರೀಯರ ಮಹತ್ವ ಹೇಳುವ ಒಂದು ಸಣ್ಣ ಪ್ರಯತ್ನ ಕವನದ ಸಾಲುಗಳಲ್ಲಿ ನಡೆದಿದೆ.
ಹೆತ್ತ ತಾಯಿ ಹೊತ್ತ ಭೂಮಿ ದೇವರಲ್ಲವೇ?
ಅದುವೇ ಕಳೆದ ಹೋದ ಮೇಲೆ ನರಕವಲ್ಲವೇ?
ಹೆತ್ತ ತಾಯಿ ಹೊರುವಳು ನವಮಾಸಗಳ್ವರೆಗೆ
ಹೊತ್ತ ತಾಯಿ ಹೊರುವಳು ಮಣ್ಣಾಗುವರೆಗೆ. (೧)
ಹೆತ್ತ ತಾಯ್ಗೆ ನೂರು ನೂರು ಮಾತು ಅಂದರೂ
ಮಮತೆಯಲ್ಲೆ ಅಪ್ಪುವಳು ಮತ್ತೆ ಕೊಂದರೂ
ಮಗನಿಗಾಗಿ ಮಗಳಿಗಾಗಿ ಮಮತೆ ಮರೆಯಳು
ಇವಳೆ ತಾನೇ ಕೋಟಿ ಜೀವ ಜನುಮದಾತಳು (೨)
ಹೊತ್ತ ತಾಯ ಒಡಲ ಬಗೆದು ನೀರು ತೆಗೆದರೂ
ಅವಳ ಮೇಲೆ ಸಾವಿರಾರು ಕೃತ್ಯ ನಡೆದರೂ
ತನ್ನ ಪ್ರಿಯ ಸುತರು ಎಂದು ಕ್ಷಮಿಸಿ ಬಿಡುವಳು
ಕ್ಷಮಾನಾರಿಯಾಗಿ ಅವಳು ಜಗದಿ ಮೆರೆವಳು. (೩)
ಹೆತ್ತ ತಾಯಿ ಹೊತ್ತ ಭೂಮಿ ರಿಣವು ತೀರದು
ಸೂರ್ಯ ಚಂದ್ರ ದೈವಕ್ಕಿಂತ ದೊಡ್ಡ ಮಾತಿದು
ಬ್ರಹ್ಮ ವಿಷ್ಣು ಶಿವನಿಗಿಂತ ತಾಯಿ ಹಿರಿಯಳು
ಹೆಣ್ಣು (ತಾಯಿ) ತಾನೇ ಇವರನ್ಹೆತ್ತ ಜನುಮದಾತಳು. (೪)
– ಮೌನೇಶ್ ಎಸ್ ಪಿ, ಲಕ್ಕುಂಡಿ, ಗದಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು
‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….
ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು
ನಾನು ಅಮ್ಮನ ಕನಸಿನಲ್ಲಿ ಎಚ್ಚರವಾಗಿರುತ್ತೇನೆ, ಅವಳು ನನ್ನ ಕನಸಿನಲ್ಲಿ ಎಚ್ಚರವಾಗಿರುತ್ತಾಳೆ
ನವಮಾಸ ನಮ್ಮನ್ನು ಹೊತ್ತು, ಹೆರುವ ಆಕೆಗೆ ಕೇವಲ ಒಂದು ದಿನ ಇತ್ತರೆ ಸಾಕೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.