Missing Case ಕುಕ್ಕೆಗೆ ಬಂದಿದ್ದ ಪೊನ್ನಂಪೇಟೆ ವ್ಯಕ್ತಿ ನಾಪತ್ತೆ
Team Udayavani, Jul 23, 2024, 11:47 PM IST
ಸುಬ್ರಹ್ಮಣ್ಯ: ತಿಂಗಳ ಹಿಂದೆ ಕುಕ್ಕೆಗೆ ಬಂದಿದ್ದ ಕೊಡಗು ಮೂಲದ ಕುಟುಂಬದಲ್ಲಿನ ಸದಸ್ಯನೋರ್ವ ನಾಪತ್ತೆಯಾಗಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಲಾಗಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾ| ಮಾಯಮುಡಿ ಚೆನ್ನಂಗುಳಿ ಗ್ರಾಮದ ರಘು (49) ನಾಪತ್ತೆಯಾಗಿ ರುವವರು. ಕೊಡಗಿನ ಸುಮಾರು 30 ಜನರ ತಂಡ ಜೂ. 24ರಂದು ಕುಕ್ಕೆಗೆ ಬಂದಿದ್ದು, ಎರಡು ದಿನಗಳ ಕಾಲ ಪೂಜೆ ನೆರವೇರಿಸಿ ಜೂ. 26ರಂದು ಕುಕ್ಕೆಯಿಂದ ತೆರಳುವ ವೇಳೆ ರಘು ನಾಪತ್ತೆಯಾಗಿದ್ದಾರೆ. ಪೇಟೆಯಲ್ಲಿ, ಸುಬ್ರಹ್ಮಣ್ಯ ಸ್ಥಳೀಯ ಪರಿಸರದಲ್ಲಿ ಹುಡುಕಾಡಿದರೂ ರಘು ಅವರು ಪತ್ತೆಯಾಗಿರುವುದಿಲ್ಲ.
ಈ ಬಗ್ಗೆ ಕುಟುಂಬದವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಅವರು ಪತ್ತೆಯಾಗದೇ ಇರುವುದರಿಂದ ಕುಟುಂಬದವರು ಮತ್ತೆ ಸುಬ್ರಹ್ಮಣ್ಯದ ಸ್ಥಳೀಯರನ್ನು ಸಂಪರ್ಕಿಸಿ ವಿವಿಧೆಡೆಗಳಲ್ಲಿ ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.