ಕಾಶ್ಮೀರ ಕಣಿವೆಗೆ ಅಭಿವೃದ್ಧಿ ಕಿರಣ ಸ್ಪರ್ಶ

370ನೇ ವಿಧಿ ರದ್ದು.. ಇಂದಿಗೆ 4 ವರ್ಷ !

Team Udayavani, Aug 5, 2023, 7:22 AM IST

KASHMIR

ಭಾರತ ವಿರೋಧಿ ಘೋಷಣೆಗಳ ಮೊಳಗು, ಭಯೋತ್ಪಾದಕರ ಗುಂಡಿನ ದಾಳಿಯ ಸದ್ದು, ವಲಸಿಗರನ್ನು ಪ್ರವಾಸಿಗರನ್ನು ಒತ್ತೆಯಾಳಾಗಿಸಿಕೊಂಡು ಸರ್ಕಾರಕ್ಕೇ ಬೆದರಿಕೆ ಹಾಕುತ್ತಿದ್ದ ಉಗ್ರರ ಅಟ್ಟಹಾಸ… ದಿನವೂ ಕಲ್ಲೆ ಸೆತ… ಅಲ್ಲಲ್ಲಿ ಗುಂಡಿನ ಮೊರೆತ… ಇವೆಲ್ಲವಕ್ಕೂ ಕಡಿವಾಣ ಬಿದ್ದು ಇಂದಿಗೆ 4 ವರ್ಷ ! ಭೂಮಿ ಮೇಲಿನ ಸ್ವರ್ಗವೆನ್ನಲಾದ, ಭರತಖಂಡದ ಇತಿಹಾಸಕ್ಕೆ, ಸಂಸ್ಕೃತಿಗೆ, ಜ್ಞಾನಕ್ಕೆ ಗರಿ ಹಚ್ಚಿದ್ದ ಕಾಶ್ಮೀರ, ಇಂದು ಮತ್ತೆ ಜೀವಕಳೆ ತುಂಬಿಕೊಂಡು, ಹೆಮ್ಮೆಯ ತಿರಂಗದ ಹಾರಾಟದ ನೆರಳಿನಲ್ಲಿ ಉಸಿರಾಡುತ್ತಿದೆ.

ಭಾರತದ ಮುಕುಟವಾದ ಕಾಶ್ಮೀರಕ್ಕೆ ಅಭಿವೃದ್ಧಿಯ ಹೊಂಗಿರಣವ ತುಂಬಲು, ಭಾರತ ಸರ್ಕಾರ 2019ರ ಆಗಸ್ಟ್‌ 5ರಂದು ತಗೆದುಕೊಂಡು ಆ ಐತಿಹಾಸಿಕ ನಿರ್ಣಯವೇ 370ನೇ ವಿಧಿ ರದ್ದು.. ಕಣಿವೆಗೆ ನೀಡಿದ್ದ ವಿಶೇಷಸ್ಥಾನಮಾನವನ್ನು ರದ್ದುಗೊಳಿಸಿದ ಮೋದಿ ಸರ್ಕಾರದ ಹೆಜ್ಜೆ ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ನಿರ್ಮಿಸಿದ ಪಥದ ಹಾದಿ ಹೀಗಿದೆ.

ಮೂರು ಹಂತದ ಪಂಚಾಯತ್‌ ರಾಜ್‌ ಚುನಾವಣೆ ಜಾರಿ
370ನೇ ವಿಧಿ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಯ ಹಂತದಲ್ಲಿ ಚುನಾವಣೆ ನಡೆಸಬೇಕೆಂಬ ನಿಯಮವಿದ್ದರೂ, ಕಣಿವೆಯಲ್ಲಿ ಅದು ಜಾರಿಯಲ್ಲಿರಲಿಲ್ಲ. ಆದರೆ, 370ನೇ ವಿಧಿ ರದ್ದತಿಯ ಬಳಿಕ ಕೇಂದ್ರಸರ್ಕಾರವು ಜಮ್ಮು-ಕಾಶ್ಮೀರ ಪಂಚಾಯತ್‌ ರಾಜ್‌ ಕಾಯ್ದೆ 1989 ಅನ್ನು ಮಾರ್ಪಡಿಸಿ, ಸಚಿವ ಸಂಪುಟದ ಅಂಗೀಕಾರ ನೀಡುವ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ 3 ಹಂತದ ಪಂಚಾಯತ್‌ ಚುನಾವಣೆಗೆ ನಾಂದಿ ಹಾಡಿ, ಗ್ರಾಮ ಮಟ್ಟದಿಂದಲೂ ಜನರಿಗೆ ತಮ್ಮ ನಾಯಕರನ್ನು ತಾವೇ ಆಯ್ಕೆ ಮಾಡುವ ಅವಕಾಶ ಮಾಡಿಕೊಟ್ಟಿದೆ.

ಎಲ್ಲರಿಗೂ ಒಂದೇ ಕಾನೂನು
ಭಾರತದ ಸಂಸತ್ತಿನಲ್ಲಿ ರೂಪಿಸಿದ ಕಾನೂನಿನ ಪೈಕಿ ರಕ್ಷಣೆ, ವಿದೇಶಾಂಗ ವ್ಯವಹಾರ ಮತ್ತು ಸಂವಹನದ ಹೊರತಾಗಿ ಬೇರೆ ಯಾವುದೇ ಕಾನೂನು ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ಲ. ವಿಶೇಷ ಸ್ಥಾನಮಾನದ ಅನ್ವಯ ತನ್ನದೇ ಪ್ರತ್ಯೇಕ ಸಂವಿಧಾನ ಮತ್ತು ಕಾನೂನು ಹೊಂದುವ ಅವಕಾಶವನ್ನು ಕಣಿವೆ ಹೊಂದಿತ್ತು. ಆದರೀಗ ಇದು ಬದಲಾಗಿದ್ದು, ದೇಶದ ಎಲ್ಲೆಡೆ ಇರುವ ಕಾನೂನುಗಳೇ ಅನ್ವಯವಾಗಿವೆ. ಜತೆಗೆ ಕಣಿವೆಯಲ್ಲಿನ ರಾಜ್ಯಸರ್ಕಾರವನ್ನು ರದ್ದುಗೊಳಿಸುವ ಅಥವಾ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸುವ ಅವಕಾಶವನ್ನು ಕಸಿದಿದ್ದ ಸೆಕ್ಷನ್‌ 356ರನ್ನು ಕೂಡ ರದ್ದುಗೊಳಿಸುವ ಮೂಲಕ ರಾಜ್ಯಪಾಲರ ಹುದ್ದೆ ಕೊನೆಗೊಂಡಿದೆ. ಇದರಿಂದ ರಾಜ್ಯ ಪೊಲೀಸ್‌ ಇಲಾಖೆಯೂ ಕೂಡ ಕೇಂದ್ರದ ಅಧೀನಕ್ಕೆ ಒಳಪಟ್ಟಿದೆ.

ಪ್ರತ್ಯೇಕ ಧ್ವಜವಿಲ್ಲ
ಜಮ್ಮು-ಕಾಶ್ಮೀರವು ತನ್ನದೇ ಆದ ಧ್ವಜ ಹೊಂದಿದ್ದು, ಭಾರತದ ತ್ರಿವರ್ಣದ ಜತೆಗೆ ಕಣಿವೆಯ ಧ್ವಜವನ್ನೂ ಹಾರಿಸಲಾಗುತ್ತಿತ್ತು. ಇದನ್ನು ಪ್ರತ್ಯೇಕ ದೇಶದ ಗುರುತಾಗಿ ಬಳಸುವ ಷಡ್ಯಂತ್ರವೂ ನಡೆದಿತ್ತು. ಆದರೆ, 370ನೇ ವಿಧಿ ರದ್ದಾದ ಬಳಿಕ ಪ್ರತ್ಯೇಕ ಧ್ವಜವನ್ನು ರದ್ದುಗೊಳಿಸಿದ್ದು, ಈಗ ಎಲ್ಲೆಡೆ ಭಾರತದ ತ್ರಿವರ್ಣ ಧ್ವಜದ ಹಾರಾಟಕ್ಕೆ ಮಾತ್ರ ಅನುಮತಿ ಇದೆ. ಜತೆಗೆ ಜಮ್ಮು-ಕಾಶ್ಮೀರದ ನಿವಾಸಿಗಳು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವ ಅಥವಾ ಮತದಾನ ಮಾಡುವ ನಿಯಮವನ್ನೂ ತೆಗದುಹಾಕಲಾಗಿದೆ. ಇದರಿಂದ ದೇಶದ ಯಾವುದೇ ನಾಗರಿಕನೂ ಅರ್ಹ ಮಾನದಂಡಗಳನ್ನು ಪೂರೈಸಿ, ಜಮ್ಮು-ಕಾಶ್ಮೀರದ ಮತದಾರನಾಗಿ ಅಥವಾ ಸ್ಪರ್ಧಿಯಾಗಿ ಚುನಾವಣೆಯಲ್ಲಿ ಭಾಗವಹಿಸಬಹುದು

ಭದ್ರತಾ ಪರಿಸ್ಥಿತಿ ಸುಧಾರಣೆ
ಭದ್ರತಾ ಕಾರಣಗಳಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಆಗಾಗ ಶಾಲೆಗಳು, ಕಾಲೇಜುಗಳು, ವಿಶ್ವ ವಿದ್ಯಾಲಯಗಳು ಹಾಗೂ ಆಸ್ಪತ್ರೆ ಸೇರಿಂದತೆ ಸಾರ್ವಜನಿಕ ಸಂಸ್ಥೆಗಳನ್ನು ಪದೇ ಪದೇ ಮುಚ್ಚಲಾಗುತ್ತಿತ್ತು. ಎಲ್ಲೆಂದರಲ್ಲಿ ಐಇಡಿ ಸ್ಫೋಟಗಳು, ಸೇನಾಪಡೆಗಳನ್ನು ಗುರಿಯಾಗಿಸಿ ಗುಂಡಿನದಾಳಿ, ನಾಗರಿಕರ-ವಲಸಿಗರ ಹತ್ಯೆ ನಡೆಸಲಾಗುತ್ತಿತ್ತು. ಆದರೆ, ಕೇಂದ್ರಸರ್ಕಾರದ ನಿರ್ಣಯದ ಬಳಿಕ ಭದ್ರತಾ ಪರಿಸ್ಥಿತಿ ಸುಧಾರಿಸಿದ್ದು ಯಾವುದೇ ಆತಂಕವಿಲ್ಲದೇ ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ.

ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿಗಳ ಪ್ರಕಾರ, 2018ರಲ್ಲಿ ಅಂದರೆ 370ನೇ ವಿಧಿ ರದ್ದುಗೊಳಿಸುವ ಮೊದಲು ದಾಖಲಾಗುತ್ತಿದ್ದ ಭದ್ರತಾ ಸಮಸ್ಯೆಗಳು 2022ರ ವೇಳೆಗೆ ಶೇ.97.2ರಷ್ಟು ಕಡಿಮೆಯಾಗಿದೆ. ಅದರಲ್ಲೂ ಭಯೋತ್ಪಾದಕ ಕೃತ್ಯಗಳು ಶೇ.45.2ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದೆ. ಇನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರಿಕೊಳ್ಳುವವರ ಸಂಖ್ಯೆ ಕೂಡ ಇಳಿಕೆಯಾಗಿದ್ದು, 2018ರಲ್ಲಿ 199ರಷ್ಟಿದ್ದ ಸಂಖ್ಯೆ 2023ರ ವೇಳೆಗೆ 12ಕ್ಕೆ ತಲುಪಿದೆ. ಮತ್ತೂಂದು ಪ್ರಮುಖ ವಿಚಾರವೆಂದರೆ ಖುದ್ದು ಕಾಶ್ಮೀರದ ಯುವಕರೇ ಭಯೋತ್ಪಾದನೆ ವಿರುದ್ಧ ಸಮರ ಸಾರಿದ್ದು, ಸೇನಾ ನೇಮಕಾತಿಗಳಲ್ಲಿ ಆಸಕ್ತಿ ವಹಿಸಿ ಸೇನೆ ಸೆರ್ಪಡೆಗೊಳ್ಳುತ್ತಿದ್ದಾರೆ.

5,502 ಮಂದಿ ಪಂಡಿತರಿಗೆ ಉದ್ಯೋಗ
ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸಮಸ್ಯೆಯಿಂದಾಗಿ ಕಣಿವೆ ತೊರೆಯುತ್ತಿದ್ದ ಕಾಶ್ಮೀರಿ ಪಂಡಿತರಿಗೂ 370ನೇ ವಿಧಿ ರದ್ದುಗೊಳಿಸಿದ ಬಳಿಕ ಸುರಕ್ಷತೆ ಒದಗಿಸಲಾಗಿದ್ದು, 2019ರಿಂದ 2022ರ ವರೆಗೆ ಯಾವುದೇ ಕಾಶ್ಮೀರಿ ಪಂಡಿತರು ಕಣಿವೆಯಿಂದ ವಲಸೆ ಹೋಗಿಲ್ಲ. ದತ್ತಾಂಶಗಳ ಪ್ರಕಾರ ಜಮ್ಮು-ಕಾಶ್ಮೀರ ಸರ್ಕಾರದ ವಿವಿಧ ಇಲಾಖೆಗಳಲ್ಲೂ 5,502 ಮಂದಿ ಕಾಶ್ಮೀರಿ ಪಂಡಿತರಿಗೆ ” ಪ್ರಧಾನಮಂತ್ರಿ ಅಭಿವೃದ್ಧಿ ಪ್ಯಾಕೆಜ್‌ (ಪಿಎಂಡಿಪಿ) ಅನ್ವಯ’ ಉದ್ಯೋಗ ಕಲ್ಪಿಸಿಕೊಡಲಾಗಿದೆ. ಈ ಮೂಲಕ ಕಾಶ್ಮೀರಿ ಪಂಡಿತರು ನಿರಾಳವಾಗಿ ಜೀವಿಸುವಂತಾಗಿದೆ.

ಬಜೆಟ್‌ ವಿಸ್ತರಣೆ
ಜಮ್ಮು-ಕಾಶ್ಮೀರ ಅಭಿವೃದ್ಧಿಗೆ 370ನೇ ವಿಧಿ ರದ್ದುಗೊಳಿಸಿದ ಬಳಿಕ ಅತ್ಯಧಿಕ ಆದ್ಯತೆ ನೀಡಲಾಗಿದ್ದು, 2019-2020ರಲ್ಲಿದ ವಾರ್ಷಿಕ ಬಜೆಟ್‌ 80,423 ಕೋಟಿ ರೂ.ಗಳು ಗಣನೀಯವಾಗಿ ಏರಿಕೆ ಕಂಡಿದ್ದು, 2023-24ನೇ ಅವಧಿಗೆ 1,18,500 ಕೋಟಿ ರೂ.ಗಳ ಬಜೆಟ್‌ ಘೋಷಿಸಲಾಗಿದೆ. ಅಲ್ಲದೇ, ಪ್ರಧಾನಮಂತ್ರಿ ಅಭಿವೃದ್ಧಿ ಪ್ಯಾಕೆಜ್‌ (ಪಿಎಂಡಿಪಿ) ಅನ್ವಯ ಆರೋಗ್ಯ, ನೈರ್ಮಲ್ಯ, ಜಲವಿದ್ಯುತ್‌ ಯೋಜನೆಗಳು, ಉನ್ನತ ಶಿಕ್ಷಣ ಸೇರಿದಂತೆ ಇತ್ಯಾದಿ ಕ್ಷೇತ್ರಗಳ ಅಭಿವೃದ್ಧಿಗೆಂದು 58,477 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.

ಪ್ರವಾಸೋದ್ಯಮ ಅಭಿವೃದ್ಧಿ, ಹೂಡಿಕೆಗೆ ಉತ್ತೇಜನ
ಜಮ್ಮು-ಕಾಶ್ಮೀರದ ಅಭಿವೃದ್ಧಿಗಾಗಿಯೇ 2021ರಲ್ಲಿ ಕೇಂದ್ರಸರ್ಕಾರವು 28,400 ಕೋಟಿ ರೂ.ಗಳನ್ನು ನಿಗದಿ ಪಡಿಸಿದ್ದು, ಸ್ವತಂತ್ರ್ಯದ ಬಳಿಕ ಕವೆಯ ಅಭಿವೃದ್ಧಿಗಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ವ್ಯಯಿಸುತ್ತಿರುವುದು ಇದೇ ಮೊದಲು ಎಂದೂ ಸರ್ಕಾರ ತಿಳಿಸಿದೆ. ಅಲ್ಲದೇ, ದೇಶದ ಇತರೆ ಭಾಗಗಳಂತೆ ಕವೆಯಲ್ಲೂ ಹೂಡಿಕೆ ಉತ್ತೇಜಿಸಿ, ಹೊಸ ಅಭಿವೃದ್ಧಿಯ ಮೂಲಕ ಉದ್ಯೋಗ ಸೃಷ್ಟಿಗೆ ಮುಂದಾಗಲು ಯೋಜನೆಗಳನ್ನು ರೂಪಿಸಲಾಗಿದ್ದು, ಇತ್ತೀಚೆಗೆ ನಡೆದ ಜಿ-20 ಸಭೆಯು ಜಮ್ಮು-ಕಾಶ್ಮೀರದಲ್ಲೂ ಯಾವುದೇ ಆತಂಕವಿಲ್ಲದೇ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಶಾಂತಿಯುತವಾಗಿ ನಡೆಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ಈ ಸಂದರ್ಭದಲ್ಲಿ ಕೇಂದ್ರಸರ್ಕಾರವು ಕವೆಯ ಸಂಪೂರ್ಣ ಪರಿಚಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದು, ಕಣಿವೆಯಲ್ಲಿ ಕರಕುಶಲತೆ, ಪ್ರವಾಸೋದ್ಯಮ, ಆತಿಥ್ಯವನ್ನು ಸವಿಯಲು ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಹೂಡಿಕೆಗೆ ಆಕರ್ಷಿಸಿದೆ.

– ತಂಗ್‌ಮಾರ್ಗ್‌- ಗುಲ್ಮಾರ್ಗ್‌ ಪ್ರದೇಶಗಳಲ್ಲಿರುವ ಉದ್ಯಾನವನ, ಸರೋವರ, ರಸ್ತೆಗಳು ಸೇರಿದಂತೆ ಎಲ್ಲ ಸರ್ಕಾರಿ ಸಂಪತ್ತನ್ನು ಮರು ಅಭಿವೃದ್ಧಿಗೊಳಿಸಲು 1.64 ಕೋಟಿ ರೂ.ಗಳನ್ನು ಕಣಿವೆ ಸರ್ಕಾರ ವ್ಯಯಿಸಿದೆ.
– ಕಾಶ್ಮೀರಿ ಶಾಲ್‌ಗ‌ಳು, ದಿರಿಸುಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ಸ್ಥಾಪಿಸಿ, ವ್ಯಾಪಾರ ಉತ್ತೇಜಿಸಲಾಗಿದೆ.
– ನದಿಗಳ ಸೌಂದರ್ಯ ಅಭಿವೃದ್ಧಿ ಪಡಿಸಿ, ಪ್ರವಾಸಿಗರು ದೋಣಿಗಳಲ್ಲಿ ಸಂಚರಿಸಲು ಉತ್ತಮ ವ್ಯವಸ್ಥೆ ರೂಪಿಸಲಾಗಿದೆ.
– ಪ್ರಖ್ಯಾತ ದಾಲ್‌ ಲೇಖ್‌ನಲ್ಲಿ ಬಣ್ಣ ಬಣ್ಣದ ದೋಣಿಗಳನ್ನು ನಿಯೋಜಿಸಿ ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ.
– ಬಾರಾಮುಲ್ಲದಲ್ಲಿರುವ ರೆಸಾರ್ಟ್‌ಗಳನ್ನು ಮರು ನವೀಕರಿಸಿ, ಪ್ರವಾಸಿಗರಿಗೆ ಸುರಕ್ಷಿತ ತಂಗುದಾಣ ಕಲ್ಪಿಸಲಾಗಿದೆ.
– ನಿರುದ್ಯೋಗ ಸಮಸ್ಯೆಯನ್ನು ಶೇ.30 ರಿಂದ ಶೇ.23.1ಕ್ಕೆ ಇಳಿಸಲಾಗಿದ್ದು, ವ್ಯಾಪಾರಿಗಳು ನಿರ್ಭೀತಿಯಿಂದ ವ್ಯವಹರಿಸಲು ಅನುವು

ಏನಂತಿದ್ದಾರೆ ಕಣಿವೆಯ ಮಂದಿ ?
ಕಳೆದ 7 ವರ್ಷಗಳಿಂದಲೂ ರಾಜಕೀಯ ಅಸ್ಥಿರತೆಯಿಂದಾಗಿ ಭಯೋತ್ಪಾದಕರನ್ನು ನಿಗ್ರಹಿಸದೇ ವರ್ಷದ 6 ತಿಂಗಳು ಅಂಗಡಿಗಳನ್ನು ಮುಚ್ಚುವಂತ ಪರಿಸ್ಥಿತಿ ಇತ್ತು. ಆದರೀಗ ಆ ಸಮಸ್ಯೆ ಬಗೆಹರಿದಿದ್ದು, ಪ್ರವಾಸಿಗರಿಗೆ ನಮ್ಮ ನೆಲದ ಉತ್ಪನ್ನಗಳನ್ನು ಮಾರುವ, ವಿದೇಶಕ್ಕೂ ತಲುಪಿಸುವ ಅವಕಾಶ ಸಿಕ್ಕಿದೆ.
– ಸಮೀರ್‌ ಅಹ್ಮದ್‌ (34), ಕಾಶ್ಮೀರಿ ಶಾಲುಗಳ ಮಾರಾಟ ಮಳಿಗೆಯ ಮಾಲೀಕ

ಮೊದಲೆಲ್ಲ ಸುರಕ್ಷತೆ ಕಾರಣಗಳಿಂದ ಪ್ರವಾಸಿಗರ ಆಗಮನ ಕಡಿಮೆ ಇತ್ತು, ಈಗ ಭಯವಿಲ್ಲದೆ ಬಂದು ಪ್ರವಾಸಿ ತಾಣಗಳನ್ನು ನೋಡುತ್ತಿದ್ದಾರೆ. ಕಾಶ್ಮೀರದ ವಿಶೇಷ ಕಾರ್ಪೆಟ್‌ಗಳನ್ನು ಕೊಂಡುಕೊಳ್ಳಲು ವಿದೇಶಿಗರು ಮುಗಿ ಬೀಳುತ್ತಿದ್ದು, ರಾತ್ರೋ ರಾತ್ರಿಯೇ 10 ಸಾವಿರ ರೂ.ಗಳ ವರೆಗಿನ ಆರ್ಡರ್‌ಗಳನ್ನು ಒಂದೇ ದಿನಕ್ಕೆ ಪಡೆಯುತ್ತಿದ್ದೇವೆ. ಇದು ಕನಸಂತೆ ಭಾಸವಾಗುತ್ತಿದೆ. ನಮ್ಮ ಕುಟುಂಬಸ್ಥರು ಬೋಟ್‌ಗಳನ್ನು ನಡೆಸುತ್ತಿದ್ದು, ಅವರಿಗೂ ಉತ್ತಮ ವ್ಯಾಪಾರವಾಗುತ್ತಿದೆ.
– ಅನೀಸ್‌ ನೂರ್‌, ಕಾಶ್ಮೀರಿ ವುಲ್ಲನ್‌ ರಗ್‌ಗಳ ತಯಾರಕಿ

ಕಾಶ್ಮೀರದ ಗುರೇಜ್‌ ಕಣಿವೆಯ ಕಪ್ಪು ಜೀರಿಗೆ, ತುಲೈಲ್‌ ವ್ಯಾಲಿಯ ರಾಜ್ಮಾದ ರುಚಿ ಇಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ. ಇಲ್ಲಿನ ವೈವಿಧ್ಯತೆ, ಉತ್ಪನ್ನಗಳನ್ನು ಪ್ರದರ್ಶಿಸಲು ಅಂತಾರಾಷ್ಟ್ರೀಯ ಸಮ್ಮೆಳನಗಳಲ್ಲಿ ಸರ್ಕಾರ ಅವಕಾಶ ಒದಗಿಸಿಕೊಟ್ಟಿದೆ. ಇದರಿಂದ ವ್ಯಾಪಾರ ಅಭಿವೃದ್ಧಿಯಾಗುವುದು ಮಾತ್ರವಲ್ಲದೇ ಜಮ್ಮು-ಕಾಶ್ಮೀರದ ಬಗ್ಗೆಗಿನ ನಮ್ಮ ಹೆಮ್ಮೆಯೂ ಹೆಚ್ಚುತ್ತಿದೆ.
ಜಾವೇದ್‌ ಬಖರ್‌, ಉದ್ಯಮಿ

ಟಾಪ್ ನ್ಯೂಸ್

PKL 11: Panthers won against Yoddhas

PKL 11: ಯೋಧಾಸ್‌ ವಿರುದ್ಧ ಗೆದ್ದ ಪ್ಯಾಂಥರ್

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

books-colomn

Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ

Agriculture: ಕಂದಕೂರು ಗ್ರಾಮ- ನಿವೃತ್ತರ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

science-AI-2

ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ

16

Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PKL 11: Panthers won against Yoddhas

PKL 11: ಯೋಧಾಸ್‌ ವಿರುದ್ಧ ಗೆದ್ದ ಪ್ಯಾಂಥರ್

Brahmavar

Belthangady: ಆತ್ಮಹ*ತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

Court-1

Puttur: ರಸ್ತೆ ಅಪಘಾತದಲ್ಲಿ ಸಾವು; ಆರೋಪಿ ಚಾಲಕ ಖುಲಾಸೆ

2

Kasaragod: ರೈಲು ಹಳಿಯಲ್ಲಿ ಬಾಟಲಿ, ನಾಣ್ಯ ಇರಿಸಿ ದುಷ್ಕೃತ್ಯಕ್ಕೆ ಸಂಚು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.