Banahatti: ಕಾಡಸಿದ್ಧೇಶ್ವರ ಜಾತ್ರೆಗೆ ಹರಿದು ಬಂದ ಜನಸಾಗರ
Team Udayavani, Oct 3, 2023, 7:54 PM IST
ರಬಕವಿ-ಬನಹಟ್ಟಿ: ಬನಹಟ್ಟಿಯ ಕಾಡಸಿದ್ಧೇಶ್ವರರ ಜಾತ್ರೆಗೆ ಮಂಗಳವಾರ ಜನ ಸಾಗರ ಹರಿದು ಬಂದಿತು. ದೇವಸ್ಥಾನಕ್ಕೆ ಬರುವ ಭಕ್ತರು ಕಾಡಸಿದ್ಧೇಶ್ವರ ಮಹಾರಜಕೀ ಜೈ ಎಂಬ ಘೋಷಣೆಗಳನ್ನು ಕೂಗೂತ್ತ ಬರುತ್ತಿದ್ದರು. ಸೋಮವಾರ ಮಧ್ಯ ರಾತ್ರಿಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೀಡ ನಮಸ್ಕಾರ ಹಾಕಿ ಹರಕೆ ತೀರಿಸಿದರು.
ಜಾತ್ರೆಯ ಅಂಗವಾಗಿ ಮಂಗಳವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಮತ್ತು ಬುತ್ತಿ ಪೂಜೆಯನ್ನು ಕೈಗೊಳ್ಳಲಾಯಿತು.
ಕಾಡಸಿದ್ಧೇಶ್ವರರ ನಿಜರೂಪದ ನಾಲ್ಕು ಅಡಿ ಎತ್ತರದ ಬುತ್ತಿಪೂಜೆ ಭಕ್ತರ ಗಮನ ಸೆಳೆಯಿತು. ದೇವಸ್ಥಾನದ ಆವರಣವನ್ನು ಹೂ ಮಾಲೆಗಳಿಂದ ಶೃಂಗಾರ ಮಾಡಲಾಗಿತ್ತು.
ವೈವಿಧ್ಯಮಯವಾದ ಪ್ರಸಾದ ಸೇವೆ: ಗಮನ ಸೆಳೆದ ವಡಾಪಾವ: ದೇವಸ್ಥಾನದಲ್ಲಿ ವೈವಿಧ್ಯಮಯವಾದ ಪ್ರಸಾದ ಸೇವೆ ನಡೆಯಿತು. ಹತ್ತು ಕ್ವಿಂಟಲ್ ಮಸಾಲೆ ಅನ್ನ, ಐದು ಕ್ವಿಂಟಲ್ ಶಿರಾ, ಎರಡು ಕ್ಷಿಂಟಲ್ ಬೂಂದಿ, ಬೂಂದಿ ಲಾಡು, ಬೂಂದಿ ವಡೆ, ಇಡ್ಲಿ, ಚಟ್ನಿ, ಲಡಕಿ ಉಂಡಿಯ ಜೊತೆಗೆ ರಾತ್ರಿ ದೀಡ ನಮಸ್ಕಾರ ಹಾಕಿದ ಭಕ್ತರಿಗೆ ಒಡಾ ಪಾವನ್ನು ಕೂಡಾ ಪ್ರಸಾದವಾಗಿ ವಿತರಣೆ ಮಾಡಲಾಯಿತು.
ಶಾಸಕ ಸಿದ್ದು ಸವದಿ, ಸಿದ್ದನಗೌಡ ಪಾಟೀಲ, ಶ್ರೀಶೈಲ ಧಬಾಡಿ, ಶ್ರೀಶೈಲ ಯಾದವಾಡ, ಭೀಮಶಿ ಮಗದುಮ್, ದಾನಪ್ಪ ಹುಲಜತ್ತಿ, ಸಿದ್ರಾಮ ಸವದತ್ತಿ, ಗೌರಿ ಮಿಳ್ಳಿ, ಜಯಶ್ರೀ ಬಾಗೇವಾಡಿ, ಪವಿತ್ರಾ ತುಕ್ಕನ್ನವರ, ಚಿದಾನಂದ ಹೊರಟ್ಟಿ ಸೇರಿದಂತೆ ರಬಕವಿ ಬನಹಟ್ಟಿ ಸುತ್ತ ಮುತ್ತಲಿನ ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ಜಾತ್ರೆಗೆ ಆಗಮಿಸಿದ್ದರು.
ಲಕ್ಷಾಂತರ ಮೌಲ್ಯದ ಹೂಮಾಲೆ ಮಾರಾಟ: ಜಾತ್ರೆಯಲ್ಲಿ ಲಕ್ಷಾಂತರ ಮೌಲ್ಯದ ಹೂ ಮತ್ತು ಹೂಮಾಲೆಗಳು ಮಾರಾಟಗೊಂಡವು. ರೂ. ೧೦ ರಿಂದ ಎರಡು ಸಾವಿರದವರೆಗೆ ಹೂ ಮಾಲೆಗಳ ವ್ಯಾಪಾರ ನಡೆಯಿತು ಎಂದು ಹೂ ಮಾರಾಟಗಾರ ಮಹಾಂತೇಶ ಹೂಗಾರ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.