Indian Army: ರಜೆಯಲ್ಲಿದ್ದ ಯೋಧನ ಅಪಹರಿಸಿ ಹತ್ಯೆ
Team Udayavani, Sep 17, 2023, 9:42 PM IST
ಇಂಫಾಲ: ರಜೆಯ ಮೇರೆಗೆ ಮಣಿಪುರದ ತನ್ನ ಗ್ರಾಮಕ್ಕೆ ಆಗಮಿಸಿದ್ದ ಭಾರತೀಯ ಸೇನೆಯ ಯೋಧರೊಬ್ಬರನ್ನು ಅಪಹರಿಸಿ, ಹತ್ಯೆ ಮಾಡಲಾಗಿದೆ. ಸಿಪಾಯಿ ಸೆರ್ಟೊ ತಂಗ್ತಾಂಗ್ ಕೋಮ್ ಮೃತ ಯೋಧ. ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಶಸ್ತ್ರಸಜ್ಜಿತ ಮೂವರು ಅಪಹರಣಕಾರರು ಮನೆಗೆ ನುಗ್ಗಿ, ಬಂದೂಕು ತೋರಿಸಿ, ಸೆರ್ಟೊ ಅವರನ್ನು ತಮ್ಮ ವಾಹನದಲ್ಲಿ ಅಪರಿಸಿದ್ದರು. ಈ ವೇಳೆ ಅವರ 10 ವರ್ಷದ ಮಗ ಮನೆಯಲ್ಲಿದ್ದ.
ಭಾನುವಾರ ಬೆಳಗ್ಗೆ ಇಂಫಾಲ ಪೂರ್ವ ಜಿಲ್ಲೆಯ ಖುನಿಂಗೆಕ್ ಗ್ರಾಮದಲ್ಲಿ ಸೆರ್ಟೊ ಅವರ ಮೃತದೇಹ ಪತ್ತೆಯಾಗಿದೆ. ಅವರ ಹಣೆಯ ಮೇಲೆ ಬುಲೆಟ್ ಗುರುತು ಇತ್ತು ಎಂದು ಕುಟುಂಬದವರು ತಿಳಿಸಿದ್ದಾರೆ. ಸೆರ್ಟೊ ಅವರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಈ ಘಟನೆಯನ್ನು ಭಾರತೀಯ ಸೇನೆ ತೀವ್ರವಾಗಿ ಖಂಡಿಸಿದ್ದು, ಕುಟುಂಬದ ಜತೆಗೆ ನಿಲ್ಲುವ ಭರವಸೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.