ಶಿಕ್ಷಕನ ಪರಿಸರ ಪ್ರೇಮ, ಉದ್ಯಾನದಂತಾದ ಶಾಲೆ
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ರವಿಕುಮಾರ್ ಆಯ್ಕೆ ; ಗೌರಿಪುರ ಶಾಲೆ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ ಶಿಕ್ಷಕ
Team Udayavani, Sep 5, 2021, 3:25 PM IST
ಶ್ರೀರಂಗಪಟ್ಟಣ: ಶಿಕ್ಷಕನೋರ್ವ ತನ್ನ ಶಿಕ್ಷಕ ವೃತ್ತಿಯ ಜೊತೆಯಲ್ಲಿ ತಾನು ಕರ್ತವ್ಯ ನಿರ್ವಹಿಸುವ ಶಾಲೆಯಲ್ಲಿನ ಪರಿಸರವನ್ನು ಹಸಿರೀಕರಣ ಮಾಡಲು ಮುಂದಾಗಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳಿಗೆ ಭೌತಿಕ ಪಾಠದ ಜೊತೆಗೆ ಪರಿಸರದ ಸಂರಕ್ಷಣೆ ಕಲಿಸಿ ಈ ಶಾಲೆಗೆ ಮಾದರಿ ಪರಿಸರ ಮಿತ್ರ ಶಾಲೆಯೆಂದು ಪ್ರಶಸ್ತಿ ದೊರೆಯಲು ಶ್ರಮಿಸಿದ ಪರಿಸರ ಪ್ರೇಮಿ ಶಿಕ್ಷಕ ಎಂದೇ ಗುರುತಿಸಿಕೊಂಡಿದ್ದಾರೆ.
200ಕ್ಕೂ ಗಿಡಗಳು: ಶಾಲೆಯ ಆವರಣದಲ್ಲಿ ಗಿಡ ನೆಟ್ಟು ಕಳೆ ಕಿತ್ತು ಹಸಿರು ಮಾಡಿದವರು ಶ್ರೀರಂಗಪಟ್ಟಣ ತಾಲೂಕಿನ ಗೌರಿ ಪುರ
ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ರವಿಕುಮಾರ್ ಗಮನ ಸೆಳೆದಿದ್ದಾರೆ. ಇವರ ಪರಿಸರ ಪ್ರೇಮದ ಕಳಕಳಿಯ ಕಾರಣದಿಂದ ಈ ಶಾಲೆಯಲ್ಲಿ
200 ಕ್ಕೂ ಹೆಚ್ಚು ಗಿಡಮರಗಳು, ಸಸ್ಯಗಳು ಹಾಗೂ ತರಕಾರಿ ಗಿಡಗಳಿದ್ದು, ಹಸಿರಿನಿಂದ ನಳನಳಿಸ್ತಿದೆ. ಇವರು ಬಂದ ಮೇಲೆ ಈ ಶಾಲೆಯಲ್ಲಿ ಈ ವಾತಾವರಣ ನಿರ್ಮಾಣವಾಗಿದ್ದು, ಈ ಶಾಲೆಗೆ ಮಾದರಿ ಪರಿಸರ ಮಿತ್ರ ಶಾಲೆ ಎಂದು ಜಿಲ್ಲಾ ಶಿಕ್ಷಣ ಇಲಾಖೆ ಪ್ರಶಸ್ತಿ ನೀಡಿ ಗೌರವಿಸಿ, ಈ ಶಿಕ್ಷಕನ ಸೇವೆಯನ್ನು ಶ್ಲಾಘಿಸಿದೆ.
ವಿದ್ಯಾರ್ಥಿಗಳ ಹೆಸರಲ್ಲಿ ಗಿಡ: ಪರಿಸರ ಪ್ರೇಮಿ ಶಿಕ್ಷಕ ರವಿಕುಮಾರ್ ತಮ್ಮ ಸ್ವಂತ ಹಣದಲ್ಲಿ, ಶಾಲೆಯ ಗೋಡೆಗಳಿಗೆ ಬಣ್ಣ ಬಳಿಸಿ ಶಾಲೆಯಲ್ಲಿ ಸ್ವಚ್ಛತೆಗೆ ಆದ್ಯತೆ,ನೀಡುತ್ತಾ ಸ್ವಚ್ಛತೆ ಬಗ್ಗೆ ಅರಿವೂ ಮೂಡಿಸಿದ್ದು, ಶಾಲೆ ಚಿಕ್ಕದಾಗಿದ್ದರೂ ಚೊಕ್ಕವಾಗಿಟ್ಟುಕೊಂಡಿದ್ದು, ಪರಿಸರವನ್ನು ಸುಂದರವಾಗಿಟ್ಟಿದ್ದಾರೆ. ಪರಿಸರದಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಲು ಮತ್ತು ತರಗತಿಯ ಒಳಗೆ ಆಕರ್ಷಿಸುವಂತೆ ಮಾಡಿದ್ದಾರೆ. ಇವ್ರರ ಪರಿಸರ ಕಳಿಕಳಿಯಿಂದ ಶಾಲೆಯಲ್ಲಿರುವ ಪ್ರತಿಯೊಂದು ಗಿಡ ಮರಗಳ ನಿರ್ವಹಣೆಯನ್ನು ಓರ್ವ ವಿದ್ಯಾರ್ಥಿ ವಹಿಸಿ ಅವುಗಳು ಮೇಲೆ ಆಯಾ ವಿದ್ಯಾರ್ಥಿ ಹೆಸರು ಬರೆಸಿದ್ದು, ಇದರಿಂದ ಮಕ್ಕಳು ಶಾಲೆಯ ಪರಿಸರದ ಮೇಲೆ ಹೆಚ್ಚಿನ ಮಮಕಾರ ಬೆಳೆಸಿಕೊಂಡಿದ್ದಾರೆ. ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನದ ಜೊತೆಗೆ ಪರಿಸರ ಜ್ಞಾನವನ್ನು ತುಂಬಿರುವ ಈ ಇಂತಹ ಈ ಆದರ್ಶ ಶಿಕ್ಷಕರ ಕೊಡುಗೆ ನಿಜಕ್ಕೂ ಶ್ರೀರಂಗಪಟ್ಟಣದಲ್ಲಿ ಶ್ಲಾಘನೀಯ ಎನಿಸಿದೆ.
ಬಹುಮುಖ ಪ್ರತಿಭೆ
ರವಿಕುಮಾರ್ ಅವರು ಶಿಕ್ಷಕರಾಗಿ ಮಾತ್ರವಲ್ಲದೇ ಸರ್ಕಾರದ ಯಾವುದೇ ಕಾರ್ಯಕ್ರಮವಾದರೂ ನಿರೂಪಣೆ ಮಾಡುತ್ತಾ ನಿರೂಪಕರಾಗಿ ಹೆಸರು ಗಳಿಸಿದ್ದಾರೆ. ಕವಿ, ಲೇಖಕರಾಗಿದ್ದು, “ಮುಗಿಲತಾರೆ’ ಕಾದಂಬರಿ ಬರೆದಿದ್ದು, ಸ್ನೇಹಿತರೊಂದಿಗೆ ಮುಂಜಾನೆ ಧ್ವನಿ ಸುರಳಿಯನ್ನು ನಿರ್ಮಾಣ ಮಾಡಿ ಬಿಡುಗಡೆ ಮಾಡಿ ಬಹುಮುಖ ಪ್ರತಿಭೆಯ ಶಿಕ್ಷಕರಾಗಿದ್ದಾರೆ. ಇದರ ಜೊತೆಗೆ ತಾವು ಹಿಂದೆ ಕೆಲಸ ಮಾಡಿದ್ದ ಇದೇ ತಾಲೂಕಿನ ಮರಳಗಾಲದಲ್ಲಿ ರಣಧೀರ ಕಂಠೀರವ ಪಡೆ ಹೆಸರಿನಲ್ಲಿ ಹಳೇ ವಿದ್ಯಾರ್ಥಿಗಳನ್ನು ಸಂಘಟಿಸಿ ಆ ಮೂಲಕ ಸಾಮಾಜಿಕ
ಕಾರ್ಯದಲ್ಲಿ ಅವರನ್ನ ತೊಡಗಿಸಿದ್ದು, ಇಂದಿಗೂ ಕೂಡ ಆ ಶಾಲೆಯ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳಕೆಲಸವನ್ನು ಪ್ರಶಂಸಿಸುತ್ತಾರೆ.
ಶಾಲಾಆವರಣದಲ್ಲಿ ಸ್ವತ್ಛತೆಹಾಗೂಪರಿಸರವನ್ನು ಉಳಿಸಲು ತೆಂಗು ಸೇರಿದಂತೆಹಸಿರು ಗಿಡಗಳನ್ನು ನೆಡಿಸಲಾಗಿದೆ . ಬಿಸಿಯೂಟಕ್ಕೆ ತರಕಾರಿಗಳು ಅಗತ್ಯವಿತ್ತು. ಶಾಲಾ ಮಕ್ಕಳು ಸೇರಿದಂತೆ ನಾವೆಲ್ಲರೂ ಅಲ್ಪ ಸ್ವಲ್ಪ ತರಕಾರಿ ಗಿಡಗಳನ್ನು ನೆಟ್ಟುಬೆಳೆಯುತ್ತಿದ್ದೇವು. ಹಲವು ದಿನಗಳಿಂದ ರಜವಿದ್ದ ಕಾರಣ ಇದೀಗ ಹೂವುಹಣ್ಣಿನ ಗಿಡಗಳನ್ನುಹಾಕಿಬೆಳೆಸಿ ಶಾಲಾಅಂದಕ್ಕೆ ಮುಂದಾಗಿದ್ದೇವೆ.
– ರವಿಕುಮಾರ್, ಶಿಕ್ಷಕ, ಗೌರಿಪುರ ಸ.ಪ್ರಾ.ಶಾಲೆ
-ಗಂಜಾಂ ಮಂಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.