ಕೇರಳ ದೇಗುಲಕ್ಕೆ ಇ-ಆನೆ; ಇರಿಂಜಾಲಪ್ಪಿಲಿ ಶ್ರೀಕೃಷ್ಣ ದೇಗುಲದಲ್ಲಿ ಹೊಸ ಪ್ರಯೋಗ
ಭಕ್ತರ ದೇಣಿಗೆಯಿಂದ ನಿರ್ಮಾಣ; 26ರಂದು ಅನಾವರಣ
Team Udayavani, Feb 21, 2023, 7:25 AM IST
ತಿರುವನಂತಪುರ : ದೇವಸ್ಥಾನಗಳ ಸಮಾರಂಭಗಳಲ್ಲಿ ಆನೆಗಳ ಉಪಸ್ಥಿತಿ ಸರ್ವೇಸಾಮಾನ್ಯ. ಅದೇ ರೀತಿ ಅವುಗಳ ಖರೀದಿ, ನಿರ್ವಹಣೆಗೆ ಆಗುವ ವೆಚ್ಚವೂ ಅಪಾರ. ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇರಳದ ದೇಗುಲವೊಂದು ಹೊಸ ಕಾರ್ಯಕ್ಕೆ ಕೈ ಹಾಕಿದ್ದು, ಇ-ಆನೆಯನ್ನು ಖರೀದಿಸಿದೆ.
ತ್ರಿಶ್ಶೂರ್ ಜಿಲ್ಲೆಯ ಇರಿಂಜಾಲಕ್ಕುಡ ಸಮೀಪವಿರುವ ಇರಿಂಜಾಡಪ್ಪಿಲ್ಲಿ ಶ್ರೀ ಕೃಷ್ಣ ದೇವಸ್ಥಾನ, ಇಲೆಕ್ಟ್ರಾನಿಕ್ ಆನೆಯನ್ನು ಖರೀದಿಸಿದೆ. 11 ಅಡಿ ಎತ್ತರವಿರುವ ಈ ಆನೆಯನ್ನು ಉಕ್ಕಿನಿಂದ ತಯಾರಿಸಲಾಗಿದ್ದು, ಮೇಲೆ ರಬ್ಬರ್ ಚರ್ಮದ ಹೊದಿಕೆಯನ್ನು ಹೊಂದಿದೆ. ಅಲ್ಲದೇ, ಥೇಟ್ ನಿಜವಾದ ಆನೆಯಂತೆ ಇ-ಆನೆ ತಲೆ ಆಡಿಸಲು ಮೋಟಾರ್‌ಗಳನ್ನು ಅಳವಡಿಸಲಾಗಿದೆ. 4 ಮಂದಿಯನ್ನು ಹೊತ್ತು ಆನೆ ಸಾಗಬಲ್ಲದ್ದಾಗಿದ್ದು, ಕಾಲಿಗೆ ಚಕ್ರಗಳನ್ನು ಅಳವಡಿಸಲಾಗಿದೆ.
800 ಕೆಜಿ ತೂಕವಿರುವ ಆನೆಯನ್ನು ಭಕ್ತರು ನೀಡಿದ ದೇಣಿಗೆ ಹಾಗೂ ಪ್ರಾಣಿ ಕಲ್ಯಾಣ ಸಂಘಗಳು ನೀಡಿದ ಸಹಾಯಧನದಿಂದ ಅಭಿವೃದ್ಧಿಪಡಿಸಲಾಗಿದ್ದು, 5 ಲಕ್ಷ ರೂ.ವೆಚ್ಚವಾಗಿದೆ. ಫೆ. 26ರಂದು ದೇಗುಲದಲ್ಲಿ ಇ-ಆನೆಯ ಅನಾವರಣವಾಗಲಿದೆ. ಅದಕ್ಕೆ ಆನೆಗೆ ಇರಿಂಜಾಡಪ್ಪಿಲ್ಲಿ ರಾಮನ್ ಎಂದು ಹೆಸರನ್ನಿಡಲಾಗಿದೆ ಎಂದು ದೇಗುಲ ಆಡಳಿತ ಮಂಡಳಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
MUST WATCH
ಹೊಸ ಸೇರ್ಪಡೆ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.