ಉಸೋಡಾದಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ- ಐದು ತಿಂಗಳಾದರೂ ದೊರೆಯದ ಪರಿಹಾರ
ಸಂಕಷ್ಟದಲ್ಲಿ ವೃದ್ಧ ದಂಪತಿಗಳು... ಕತ್ತಲಲ್ಲೇ ಜೀವನ
Team Udayavani, Dec 21, 2023, 5:55 PM IST
ಸಂಕಷ್ಟದಲ್ಲಿ ವೃದ್ಧ ದಂಪತಿಗಳು... ಕತ್ತಲಲ್ಲೇ ಜೀವನ
ದಾಂಡೇಲಿ/ಜೋಯಿಡಾ: ತಾಲ್ಲೂಕಿನ ಸಿಂಗರಗಾವ್ ಗ್ರಾ.ಪಂ ವ್ಯಾಪ್ತಿಯ ಉಸೋಡಾ ಎಂಬಲ್ಲಿ ಸುತ್ತಲು ಆವರಿಸಿರುವ ದಟ್ಟ ಕಾಡಿನ ಮಧ್ಯೆ ಇರುವ ವೃದ್ಧ ದಂಪತಿಗಳ ಪುಟ್ಟ ಮನೆಯ ಮೇಲೆ ಕಳೆದ ಐದು ತಿಂಗಳ ಹಿಂದೆ ಮರ ಒಂದು ಬಿದ್ದು, ಮನೆಗೆ ಸಂಪೂರ್ಣ ಹಾನಿಯಾಗಿ, ಸರಕಾರದ ಪರಿಹಾರಕ್ಕಾಗಿ ಜಾತಕಪಕ್ಷಿಯಂತೆ ಕಾಯುತ್ತಿರುವ ವೃದ್ಧ ದಂಪತಿಗಳ ಕರುಣಾಜನಕ ವರದಿಯಿದು.
ಅವರು ಅತೀ ಬಡವರು. ಬದುಕಿಗಾಗಿ ಮುಂಭಾಗದಲ್ಲಿ ಅಲ್ಪ ಕೃಷಿಯನ್ನೆ ನಂಬಿ, ಅಲ್ಪ ಸ್ವಲ್ಪ ಕೃಷಿಯ ಜೊತೆ ಬದುಕು ಕಟ್ಟಿ ಕೊಂಡವರು. ಮಗಳನ್ನು ಮದುವೆ ಮಾಡಿ ಕೊಟ್ಟಿದ್ದಾರೆ. ಗಂಡು ಮಕ್ಕಳಿಬ್ಬರು ಗೌಂಡಿ ಕೆಲಸ ಮಾಡುವುದಕ್ಕಾಗಿ ತಮ್ಮಕುಟುಂಬದ ಜೊತೆ ದೂರದಲ್ಲಿದ್ದಾರೆ. ಹಾಗಾಗಿ ಇಲ್ಲಿರುವವರು ರುಕ್ಮಿಣಿ ಸಟ್ಟು ಡುರೆ ಮತ್ತು ಅವರ ಪತಿ ಸಟ್ಟು ಡುರೆ ಎಂಬ ಹತ್ತಿರ ಹತ್ತಿರ 75 ದಾಟಿದ ವೃದ್ಧ ದಂಪತಿಗಳು.
ಆದರೂ ಸ್ವಾಭಿಮಾನದ ಜೀವನ ನಡೆಸುತ್ತಾ ಬಂದಿದ್ದಾರೆ.
ಜುಲೈ 26 ರಂದು ಸುರಿದ ಭೀಕರ ಗಾಳಿ ಮಳೆಗೆ ಮನೆಯ ಮೇಲೆ ಮರವೊಂದು ಬಿದ್ದು, ಮನೆಗೆ ಬಹಳಷ್ಟು ಹಾನಿಯಾಗಿದೆ. ಅದೃಷ್ಟವಶಾತ್ ವೃದ್ಧ ದಂಪತಿಗಳಿಗೆ ಯಾವುದೇ ಅಪಾಯ ಆಗದೇ ಇದ್ದರೂ ಮನೆಗೆ ಮಾತ್ರ ಹಾನಿಯಾಗಿದೆ. ಮನೆಯ ಮೇಲ್ಛಾವಣಿ ಸಂಪೂರ್ಣ ಮುರಿದು ಬಿದ್ದಿದ್ದು. ಮಳೆ ನೀರು ಸೋರದಂತೆ ಪ್ಲಾಸ್ಟಿಕ್ ಹೊದಿಕೆಯನ್ನು ಹಾಸುಕೊಂಡಿದ್ದಾರೆ. ಆದರೆ ಮನೆಯ ಮೇಲೆ ಬಿದ್ದಿರುವ ಮರವನ್ನು ಮಾತ್ರ ಇನ್ನೂ ತೆರವುಗೊಳಿಸಿಲ್ಲ. ಮನೆಯ ಮೇಲೆ ಮರ ಬಿದ್ದ ಹಿನ್ನಲೆಯಲ್ಲಿ ಮೊದಲೆ ಮಣ್ಣಿನ ಗೋಡೆಯಾಗಿರುವುದರಿಂದ ಗೋಡೆ ಬಿರುಕು ಬಿಟ್ಟಿದೆ. ಮರ ಬಿದ್ದಾಗಿನಿಂದ ವಿದ್ಯುತ್ ಮೀಟರ್ ಬೋರ್ಡ್ ಕೆಟ್ಟು ಹೋಗಿದ್ದು, ಆ ದಿನದಿಂದ ಈವರೇಗೆ ವಿದ್ಯುತ್ ಪೊರೈಕೆಯಾಗದೇ ಚಿಮಿಣಿ ದೀಪದಲ್ಲೆ ದಿನ ಕಳೆಯ ಬೇಕಾದ ಅನಿವಾರ್ಯ ಪರಿಸ್ಥಿತಿ ಈ ವೃದ್ಧ ದಂಪತಿಗಳದ್ದಾಗಿದೆ.
ಪರಿಹಾರಕ್ಕಾಗಿ ಸಿಂಗರಗಾವ್ ಗ್ರಾಮ ಪಂಚಾಯಿತಿಗೆ ಹಾಗೂ ತಾಲೂಕಾಡಳಿತಕ್ಕೆ ಮನವಿಯನ್ನು ಮಾಡಿದ್ದರು. ಮನವಿಗೆ ಅನುಗುಣವಾಗಿ ಪರಿಶೀಲನೆಗೆ ಅಧಿಕಾರಿಗಳು ಬಂದಿದ್ದ ಸಮಯದಲ್ಲಿ ಸಟ್ಟು ಡುರೆ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಮನಗಂಡು, ಈ ಮನೆಯಲ್ಲಿ ಯಾರು ವಾಸವಿರುವುದಿಲ್ಲ ಎಂದು ವರದಿ ಮಾಡಿಕೊಂಡು ಹೋಗಿರುವುದರಿಂದ ನಮಗಿನ್ನೂ ಪರಿಹಾರ ಬಂದಿಲ್ಲ ಎಂಬ ವಾದ ರುಕ್ಮಿಣಿ ಸಟ್ಟು ಡುರೆಯವರಾದ್ದಾಗಿದೆ.
ಒಂದು ಕಡೆ ಮನೆಗೆ ಬಿದ್ದಿರುವ ಮರವನ್ನು ಇನ್ನೂ ತೆರವುಗೊಳಿಸಲಾಗಿಲ್ಲ, ಮರ ಬಿದ್ದು ಹಾನಿಯಾಗಿರುವ ಮೇಲ್ಚಾವಣಿಯನ್ನು ದುರಸ್ತಿ ಮಾಡಲಾಗಿಲ್ಲ, ವಿದ್ಯುತ್ ಮೀಟರ್ ಬೋರ್ಡಿಗೆ ಹಾನಿಯಾಗಿರುವುದರಿಂದ ವಿದ್ಯುತ್ ಪೂರೈಕೆಯಾಗದೆ ಕತ್ತಲಲ್ಲೆ ದಿನದೂಡಬೇಕಾದ ಪರಿಸ್ಥಿತಿಯಲ್ಲಿ ಈ ವೃದ್ಧ ದಂಪತಿಗಳ ಕುಟುಂಬವಿದೆ.
ಆದ್ದರಿಂದ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯವರು ಮತ್ತು ತಾಲೂಕಾಡಳಿತ ಈ ವೃದ್ಧ ದಂಪತಿಗಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ, ಗ್ರಾಮ ಪಂಚಾಯತಿ ವತಿಯಿಂದ ವಿಶೇಷ ಮುತುವರ್ಜಿಯನ್ನು ವಹಿಸಿ ಆಶ್ರಯ ಮನೆ ನೀಡುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ.
ಇದನ್ನೂ ಓದಿ: Sagara: ಗ್ರಾಮದ ರಸ್ತೆ ಬದಿಗೆ ತ್ಯಾಜ್ಯ- ಗ್ರಾಮಸ್ಥರ ಆಕ್ರೋಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Assam; ಚಹಾರ್ ಜಿಲ್ಲೆ 4 ಗ್ರಾಮ ಬಾಲ್ಯ ವಿವಾಹ ಮುಕ್ತ: ಸಿಎಂ ಹಿಮಾಂತ್
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.