ಸಾವಯವ ಕೃಷಿಯಲ್ಲಿ ಯುವಕನ ಯಶೋಗಾಥೆ


Team Udayavani, Jun 2, 2020, 6:02 PM IST

ಸಾವಯವ ಕೃಷಿಯಲ್ಲಿ ಯುವಕನ ಯಶೋಗಾಥೆ

ಕೃಷಿಯನ್ನು ಕಡೆಗಣಿಸುತ್ತಿರುವ ಪ್ರಸ್ತುತದಲ್ಲಿ ಯುವಕರು ನಗರದ ವ್ಯಾಮೋಹ ತೊರೆದು ಕೃಷಿಯತ್ತ ಮುಖ ಮಾಡುತ್ತಿರುವುದು ಖುಷಿಯ ಸಂಗತಿ. ಕೈತುಂಬ ಸಂಬಳ ನೀಡುವ ಸಂಬಳ, ಅಧುನಿಕ ಜೀವನಶೈಲಿಯ ನಗರಗಳನ್ನು ತೊರೆದು ಅನೇಕ ಯುವಕರು ನಮ್ಮ ಹಳ್ಳಿಗೆ ಹಿಂದುರುಗಿ ಮರಳಿ ಮಣ್ಣಿನಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಂದು ಇವರೇ ಕೃಷಿ ಕ್ಷೇತ್ರದ ಹೊಸ ಭರವಸೆಗಳಾಗಿದ್ದಾರೆ.

ಕೈ ತುಂಬ ಇದ್ದ ಸಂಬಳದ ಹುದ್ದೆ ತೊರೆದು ಸಾವಯವ ಕೃಷಿಯ ಮೂಲಕ ಹೊಸ ಬದುಕು ಕಟ್ಟಿಕೊಂಡ ಮೀರತ್‌ನ ಯುವಕನೋರ್ವ ಇಂದು ಅನೇಕ ಕೃಷಿಕರಿಗೆ ಆದರ್ಶವಾಗಿದ್ದಾರೆ. ಅಲ್ಲದೇ ಅನೇಕ ಕಾರ್ಪೊರೇಟರ್‌ ಉದ್ಯೋಗಿಗಳಿಗೆ ಕೃಷಿಯತ್ತ ಮರಳಲು ಪ್ರೇರಣೆ ನೀಡುತ್ತಿರುವವರೇ ಮೀರತ್‌ನ ಅಜಯ್‌ ತ್ಯಾಗಿ.

ಕೃಷಿಕ ಕುಟುಂಬದ ಮೂಲದ ಅಜಯ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಮೀರತ್‌ನಲ್ಲಿ ಕೈ ತುಂಬ ಸಂಬಳದ ಉದ್ಯೋಗ ಹರಿಸಿದ್ದರು. ಅನಂತರ ಅವರಲ್ಲಿ ಕೃಷಿಯ ಆಸಕ್ತಿ ಮೂಡಿದಾಗ ಉದ್ಯೋಗ ತೊರೆಯುವ ನಿರ್ಧಾರಕ್ಕೆ ಬಂದರು. ಮೊದಲು ಕುಟುಂಬದವರು ವಿರೋಧ ಮಾಡಿದರು, ಮೂಲತಃ ಕೃಷಿ ಕುಟುಂಬವಾದ್ದರಿಂದ ಮಗ ಒಳ್ಳೆಯ ಕೆಲಸದಲ್ಲಿರಲಿ ಎಂಬುವುದು ಅವರ ಒತ್ತಾಯ. ಇದೆಲ್ಲವನ್ನೂ ಮೀರಿ ಇಂದು ಅಜಯ್‌ ಒಬ್ಬ ಯಶಸ್ವಿ ಕೃಷಿಕನಾಗಿದ್ದಾರೆ. ತನ್ನ ಹೋರಾಟಕ್ಕೆ ತಕ್ಕ ಫ‌ಲ ಪಡೆಯುತ್ತಿದ್ದಾರೆ. ಇಂದು ಸಾವಯವ ಉತ್ಪನ್ನಗಳ ಉತ್ಪಾದಕ ಮತ್ತು ಮಾರಾಟಗಾರನಾಗಿ ತ್ಯಾಗಿ ಹೆಸರು ಮಾಡಿದ್ದಾರೆ. ಅಲ್ಲದೇ ಸಾವಯವ ಕೃಷಿಯ ಬಗ್ಗೆ ಪ್ರಾದೇಶಿಕವಾಗಿ ಇದುವರೆಗೂ ಒಟ್ಟು 200ಕ್ಕೂ ಹೆಚ್ಚು ಕೃಷಿಕರನ್ನು ತರಬೇತಿಗೊಳಿಸಿದ್ದಾರೆ.

ಕೃಷಿಯ ಆರಂಭ
ಜನರಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶದಿಂದ 2016ರಿಂದ ಅಜಯ್‌ ಅವರು ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿದ್ದಾರೆ. ಅಳತೆ ಮೀರಿ ಇಂದು ಉಪಯೋಗಿಸುತ್ತಿರುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಂದ ಬೆಳೆಯುತ್ತಿರುವುದು ಶುದ್ಧ ಆಹಾರವಲ್ಲ ಅದು ವಿಷ ಎನ್ನುತ್ತಾರೆ ತ್ಯಾಗಿ.

ಆರಂಭಿಕ ವೈಫ‌ಲ್ಯಗಳು
ಹೊಸತನ್ನು ಮಾಡುವಾಗ ಕಷ್ಟಗಳು ಎದುರಾಗುವುದು ಸಹಜ. ಹಾಗೇಯೆ ತ್ಯಾಗಿ ಅವರು ಆರಂಭಿಕವಾಗಿ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಒಂದೆಡೆ ಮನೆಯವರ ವಿರೋಧ ಮತ್ತೂಂದೆಡೆ ಕೃಷಿಗೆ ಇವರು ಹೊಸಬರು. ಮೊದಲಿಗೆ ಹೈನುಗಾರಿಕೆ ಆರಂಭಿಸಿ ಅಲ್ಲಿ ಕಾರ್ಮಿಕರ ಅಗತ್ಯ ಮತ್ತು ಹೆಚ್ಚಿನ ಶ್ರಮದಿಂದ ಹೈರಾಣಾಗಿ ಮತ್ತೆ ಅವರ ಮೂಲ ಉದ್ದೇಶವಾದ ಸಾವಯವ ಕೃಷಿಗೆ ಮರಳುತ್ತಾರೆ.

ಕೈ ಹಿಡಿದ ಸಾವಯವ ಕೃಷಿ
ಹೇಗೋ ಮನೆಯವರನ್ನು ಒಪ್ಪಿಸಿ ತಮ್ಮ ಸ್ವಂತ ಜಮೀನಿನಲ್ಲಿ ಕೃಷಿ ಆರಂಭಿಸುತ್ತಾರೆ. ಅನಂತರ 10 ಎಕ್ರೆ ಭೂಮಿಯನ್ನು ಗುತ್ತಿಗೆ ಪಡೆದುಕೊಂಡು ಅಲ್ಲಿ ಸಾವಯವ ಕೃಷಿ ಆರಂಭಿಸಿದರು. ಮೊದಲು ಅಗತ್ಯ ಕೆಲಸಗಾರ ಸಹಾಯದಿಂದ ನಿರ್ವಹಣೆ ವೆಚ್ಚ ಕಡಿಮೆ ಮಾಡಿ ಮೊದಲ ವರ್ಷವೇ ಸಾಂಪ್ರದಾಯಿಕ ಕೃಷಿಗಿಂತ ಶೇ. 25 ರಷ್ಟು ಹೆಚ್ಚು ಲಾಭಗಳಿಸಿದರು.

ಕಾಬೋನಿಕ್‌ ಮಿಡೋವ್ಸ್‌ ಎಂಬ ಹೆಸರಿನ ತಮ್ಮದೇ ಆದ ಬ್ರ್ಯಾಂಡ್‌ನ್ನು ಆರಂಭಿಸಿ ಅದರ ಹೆಸರಿನಲ್ಲಿ ಧಾನ್ಯಗಳು, ತರಕಾರಿ, ಬಿತ್ತನೆ ಬೀಜಗಳು, ಮಸಾಲೆ ಪದಾರ್ಥಗಳನ್ನು ವ್ಯಾಪಕವಾಗಿ ಬೆಳೆಯುತ್ತಿದ್ದಾರೆ. ಏಕದಳ ಧಾನ್ಯಗಳಲ್ಲಿ ಸಾಂಪ್ರಾದಾಯಿಕ ವಿಧದ ಗೋಧಿ ಮತ್ತು ಭತ್ತ, ಅಕ್ಕಿ, ರಾಗಿ, ಅಗಸೆ , ಚಿಯಾ ಹಾಗೂ ಇದರ ಜತೆಗೆ ದ್ವಿದಳ ಧಾನ್ಯಗಳನ್ನೂ ವ್ಯಾಪಕವಾಗಿ ಬೆಳೆಯುತ್ತಿದ್ದಾರೆ. ಸ್ವಲ್ಪ ಸಮಯದ ಅನಂತರ ತರಕಾರಿ ಬೆಳೆಯುವುದು ಆರಂಭಿಸಿದರು. ತರಕಾರಿಗಳಲ್ಲಿ ಟೊಮೆಟೋ, ಮೆಣಸಿನಕಾಯಿ, ಮೂಲಂಗಿ, ಗಜ್ಜರಿ, ಹೂಕೋಸು, ಕೋಸುಗಡ್ಡೆ ಮತ್ತು ಕೊತ್ತಂಬರಿ ಬೆಳೆದಿದ್ದಾರೆ.

ತ್ಯಾಗಿ ಕೃಷಿಗೆ ಬೇಕಾದ ಹೆಚ್ಚಿನ ವಸ್ತುಗಳನ್ನು ತಮ್ಮ ಸ್ವಂತ ಜಮೀನಿನಿಂದಲೇ ತಯಾರಿಸುತ್ತಾರೆ. ಹೊಲದ ಕಳೆಯನ್ನು ಸಂಗ್ರಹಿಸಿ ಅದರಿಂದ ರಸಗೊಬ್ಬರವನ್ನು ಮತ್ತು ವರ್ಮಿ ಕಾಂಪೋಸ್ಟ್‌ ಗೊಬ್ಬರ ತಯಾರಿಸಿ ಅದನ್ನೇ ಉಪಯೋಗಿಸಲಾಗುತ್ತಿದೆ.

ದೇಶಾದ್ಯಂತ ಉತ್ಪನ್ನಗಳ ಮಾರಾಟ
ಕೃಷಿಯ ಉತ್ಪನ್ನಗಳ ಮಾರಾಟ ತ್ಯಾಗಿ ಅವರು ತಾವು ತಯಾರಿಸುವ ಉತ್ತಮ ತಳಿಯ ಬೀಜಗಳಿಗೆ ದೇಶಾದ್ಯಂತ ಗ್ರಾಹಕರನ್ನು ಸಂಪಾದಿಸಿದ್ದಾರೆ. ಪ್ರಮುಖ ನಗರಗಳಾದ ದೆಹಲಿ, ಮುಂಬಯಿ, ಬೆಂಗಳೂರು ಹೀಗೆ ಮುಂತಾದಡೆ ಮಾರಾಟ ಮಾಡುತ್ತಾರೆ. ಕಾರ್ಬಾನಿಕ್‌ ಮೆಡೋಸ್‌ ಒಂದು ಜನಪ್ರಿಯ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದ್ದು, ಕೇರಳ ರಾಜಸ್ಥಾನ ಇತರೆಡೆಗಳಲ್ಲಿ ಸಣ್ಣ ಪ್ರಮಾಣದ ಕೃಷಿಕರೊಂದಿಗೆ ಇವರು ಸಹಭಾಗಿತ್ವ ಹೊಂದಿದ್ದಾರೆ. ಅವರೊಂದಿಗೆ ವಸ್ತುಗಳನ್ನು ಖರೀದಿಸಿ ಉತ್ತಮ ವ್ಯಾಪಾರ ಜಾಲವೊಂದನ್ನು ರೂಪಿಸಿಕೊಂಡಿದ್ದಾರೆ.

ರೈತರಿಗೆ ಕಾರ್ಯಾಗಾರ
ಆಗಾಗ ತ್ಯಾಗಿ ಅವರು ರೈತರಿಗಾಗಿ ಕಾರ್ಯಾಗಾರಗಳನ್ನು ಹಮ್ಮಿಕೊಂಡು ತಮ್ಮ ಜಮೀನಿನಲ್ಲೇ ತರಬೇತಿ ನೀಡುತ್ತಾರೆ. ಇದಕ್ಕೆ ರಾಜಸ್ಥಾನ, ಒಡಿಶಾ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಿಂದ ರೈತರು ಸೇರುತ್ತಾರೆ. ಹೀಗೆ ತ್ಯಾಗಿ ಅವರು ತಮ್ಮ ಜತೆಗೆ ಇನ್ನೂ ಹಲವಾರು ರೈತರ ಬಾಳು ಹಸನಾಗಿಸಿದ್ದಾರೆ. ಇವರಿಂದ ಸ್ಫೂರ್ತಿಗೊಂಡ ಯುವಕರು ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ.

– ಶಿವಾನಂದ

ಟಾಪ್ ನ್ಯೂಸ್

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

UTK

Speaker ಯು.ಟಿ.ಖಾದರ್‌ ವ್ಯಾಟಿಕನ್‌ ಸಿಟಿಗೆ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.