“ಆಧಾರ್‌ ದೃಢೀಕರಣ’: 70 ಕೋಟಿ ರೂ. ಉಳಿತಾಯ!


Team Udayavani, Jul 17, 2019, 3:09 AM IST

aadhar

ಬೆಂಗಳೂರು: ಅನ್ನಭಾಗ್ಯ ಯೋಜನೆಯ ಫ‌ಲಾನುಭವಿಗಳ “ಆಧಾರ್‌ ದೃಢೀಕರಣ’ (ಇ-ಕೆವೈಸಿ)ದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ ಕೋಟಿ ಕೋಟಿ ಹಣ ಉಳಿತಾಯ ಆಗಲಿದೆ.

ಅನ್ನಭಾಗ್ಯ ಯೋಜನೆಯ ಫ‌ಲಾನುಭವಿಗಳು ಸೇರಿ ರಾಜ್ಯದ ಎಲ್ಲ ಪಡಿತರ ಚೀಟಿದಾರ ಕುಟುಂಬ ಸದಸ್ಯರ “ಆಧಾರ್‌ ಜೋಡಣೆ’ ಆಗಿದೆ. ಈಗ ಜೋಡಣೆಯಾದ ಆಧಾರ ಸಂಖ್ಯೆ, ಅದೇ ವ್ಯಕ್ತಿಯದ್ದೇ ಎಂದು ಖಾತರಿಪಡಿಸಿಕೊಳ್ಳಲು ಇ-ಕೆವೈಸಿ (ನೊ ಯುವರ್‌ ಕಸ್ಟಮರ್‌) ಮೂಲಕ ಆಧಾರ್‌ ದೃಢೀಕರಣ ಪ್ರಕ್ರಿಯೆ ನಡೆಸಲಾಗುತ್ತಿದೆ.

ಈ ಆಧಾರ್‌ ದೃಢೀಕರಣ ಪ್ರಕ್ರಿಯೆ ಪೂರ್ಣಗೊಂಡರೆ ಅನ್ನಭಾಗ್ಯ ಯೋಜನೆ ಫ‌ಲಾನುಭವಿಗಳಿಗೆ “ಜರಡಿ’ ಹಿಡಿದಂತಾಗುತ್ತದೆ. ಇದರಿಂದ ಮರಣ ಹೊಂದಿದ, ವಿಳಾಸ ಬದಲಾವಣೆಯಾದ ಫ‌ಲಾನುಭವಿಗಳು ಸೇರಿ “ನಕಲಿ’ ಎಂದು ಹೇಳಬಹುದಾದ 20ರಿಂದ 25 ಲಕ್ಷ ಪಡಿತರ ಚೀಟಿದಾರರು ಫ‌ಲಾನಭವಿ ಪಟ್ಟಿಯಿಂದ ಡಿಲಿಟ್‌ (ಅಳಸಿ ಹಾಕು) ಆಗಲಿದ್ದಾರೆಂದು ಆಹಾರ ಇಲಾಖೆ ಅಂದಾಜಿಸಿದೆ.

ಹೀಗೆ 20ರಿಂದ 25 ಲಕ್ಷ ಪಡಿತರ ಚೀಟಿದಾರರು ಕಡಿಮೆಯಾದರೆ, ಅನ್ನಭಾಗ್ಯ ಯೋಜನೆಯ ಫ‌ಲಾನುಭವಿಗಳ ಪಟ್ಟಿ “ಶುದ್ಧೀಕರಣ’ಗೊಂಡು ಪಾರದರ್ಶಕವಾಗಲಿದೆ. ಇದರಿಂದಾಗಿ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು 6ರಿಂದ 7 ಕೋಟಿ ರೂ.ಗಳಂತೆ ವರ್ಷಕ್ಕೆ ಬರೋಬ್ಬರಿ 70ರಿಂದ 80 ಕೋಟಿ ರೂ. ಉಳಿತಾಯ ಆಗಲಿದೆ. ಇದು ಹಣಕಾಸಿನ ದೃಷ್ಟಿಯಿಂದ ದೊಡ್ಡ ಉಳಿತಾಯ ಎಂದು ಅಧಿಕಾರಿಗಳು ಹೇಳುತ್ತಾರೆ.

ಸದ್ಯ ರಾಜ್ಯದಲ್ಲಿ 1.44 ಕೋಟಿ ಪಡಿತರ ಚೀಟಿಗಳು ಹಾಗೂ 4.89 ಕೋಟಿ ಫ‌ಲಾನುಭವಿಗಳಿದ್ದಾರೆ. ಆಹಾರ ಭದ್ರತಾ ಕಾಯ್ದೆಯ ನಿಯಮಗಳಂತೆ ಕೇಂದ್ರ ಸರ್ಕಾರ 4 ಕೋಟಿ ಫ‌ಲಾನುಭವಿಗಳಿಗೆ ತಲಾ 5 ಕೆ.ಜಿ ಆಹಾರಧಾನ್ಯ ನೀಡುತ್ತಿದೆ. ಅದರಂತೆ ಕೇಂದ್ರದಿಂದ ಪ್ರತಿ ತಿಂಗಳು 2.17 ಲಕ್ಷ ಮೆಟ್ರಿಕ್‌ ಟನ್‌ ಪಡಿತರ (ಅಕ್ಕಿ) ರಾಜ್ಯಕ್ಕೆ ಬರುತ್ತದೆ. ಆದರೆ, ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ 7 ಕೆ.ಜಿ ಅಕ್ಕಿ ಕೊಡುತ್ತಿರುವುದರಿಂದ ಹೆಚ್ಚುವರಿ 2 ಕೆ.ಜಿ ಅಕ್ಕಿಯನ್ನು ಕೆ.ಜಿಗೆ 29 ರೂ.ಗಳಂತೆ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ ಉಚಿತವಾಗಿ ನೀಡಬೇಕಾಗುತ್ತದೆ.

ಇದಕ್ಕಾಗಿ ರಾಜ್ಯ ಸರ್ಕಾರ ವರ್ಷಕ್ಕೆ 70 ರಿಂದ 80 ಕೋಟಿ ರೂ. ಖರ್ಚು ಮಾಡುತ್ತದೆ. ಒಂದೊಮ್ಮೆ ಇ-ಕೆವೈಸಿ ಮೂಲಕ ಎಲ್ಲ ಫ‌ಲಾನುಭವಿಗಳ ಆಧಾರ್‌ ದೃಢೀಕರಣವಾದರೆ ಗಣನೀಯ ಪ್ರಮಾಣದಲ್ಲಿ ಪಡಿತರ ಉಳಿತಾಯ ಆಗುವುದರ ಜೊತೆಗೆ ಕೋಟ್ಯಂತರ ರೂ. ಹಣ ಸಹ ಉಳಿತಾಯ ಆಗಲಿದೆ. ಇದರಿಂದ ರಾಜ್ಯದ ಮೇಲಿನ ಆರ್ಥಿಕ ಹೊರೆ ಕಡಿಮೆ ಆಗಲಿದೆ ಅನ್ನುವುದು ಆಹಾರ ಇಲಾಖೆಯ ಅಧಿಕಾರಿಗಳ ಲೆಕ್ಕಾಚಾರ.

ಏನಿದು ಇ-ಕೆವೈಸಿ?: ಆನ್‌ಲೈನ್‌ ತಂತ್ರಜ್ಞಾನದ ಮೂಲಕ ಗ್ರಾಹಕರು, ಫ‌ಲಾನುಭವಿಗಳನ್ನು ಗುರುತು ಖಾತರಿಪಡಿಸಿಕೊಳ್ಳುವ ವ್ಯವಸ್ಥೆಗೆ (ಇ-ಕೆವೈಸಿ) ಎಂದು ಹೇಳಲಾಗುತ್ತದೆ. ರಾಜ್ಯದಲ್ಲಿ ಪಡಿತರ ಚೀಟಿಗಳ ಆಧಾರ್‌ ಜೋಡಣೆ ಕಾರ್ಯ ಪೂರ್ಣಗೊಂಡಿದೆ. ಈಗ ಆಧಾರ್‌ ಜೋಡಣೆಯಾಗಿರುವ ಪಡಿತರ ಚೀಟಿಯ ಸಾಚಾತನ ಮತ್ತು ಪಡಿತರ ಚೀಟಿಯಲ್ಲಿರುವ ಫ‌ಲಾನುಭವಿ ಅಥವಾ ಪಡಿತರ ಚೀಟಿದಾರರ ಹೆಸರು ಜೋಡಣೆಯಾದ ಆಧಾರ್‌ ಕಾರ್ಡ್‌ ಸಂಖ್ಯೆಗೆ ತಾಳೆ ಆಗುತ್ತದೆಯೋ ಇಲ್ಲವೋ ಎಂದು ಖಾತರಿಪಡಿಸಿಕೊಳ್ಳಲು ಇ-ಕೆವೈಸಿ ಮೂಲಕ ಆಧಾರ್‌ ದೃಢೀಕರಣ ಮಾಡಲಾಗುತ್ತದೆ.

ಸದ್ಯ ಇ-ಕೆವೈಸಿ ಸ್ಥಗಿತ: ರಾಷ್ಟ್ರೀಯ ಆಹಾರ ಸುರಕ್ಷತೆ ಕಾಯ್ದೆ ಹಾಗೂ ಸುಪ್ರೀಂಕೋರ್ಟ್‌ ಆದೇಶದಂತೆ ಪಡಿತರ ಕಾರ್ಡ್‌ನಲ್ಲಿರುವ ಪ್ರತಿಯೊಬ್ಬರೂ ಆಧಾರ್‌ ದೃಢೀಕರಣ ಮಾಡಿಸಬೇಕೆಂದು, ಅದರಂತೆ ರಾಜ್ಯದ ಪಡಿತರ ಚೀಟಿದಾರ ಕುಟುಂಬ ಸದಸ್ಯರ ಇ-ಕೆವೈಸಿಯನ್ನು (ಆಧಾರ್‌ ದೃಢೀಕರಣ) ನ್ಯಾಯಾಬೆಲೆ ಅಂಗಡಿ ಹಂತದಲ್ಲಿ ಆನ್‌ಲೈನ್‌ ಮೂಲಕ ಜೂ.1ರಿಂದ ಸಂಗ್ರಹಿಸಲಾಗುತ್ತಿತ್ತು. ಆದರೆ, ಕೇಂದ್ರ ಸರ್ಕಾರದ ಕಿಸಾನ್‌ ಸಮ್ಮಾನ್‌ ಯೋಜನೆಯ ಫ‌ಲಾನುಭವಿಗಳ ನೋಂದಣಿ ಆರಂಭವಾಗಿದ್ದರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಲ್ಲಿವರೆಗೆ 25 ಲಕ್ಷ ಫ‌ಲಾನುಭವಿಗಳ ಆಧಾರ್‌ ದೃಢೀಕರಣ ಆಗಿದ್ದು, ಸುಮಾರು 4 ಕೋಟಿ ಫ‌ಲಾನುಭವಿಗಳ ಆಧಾರ್‌ ದೃಢೀಕರಣ ಆಗಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

* ರಫೀಕ್‌ ಅಹ್ಮದ್‌

ಟಾಪ್ ನ್ಯೂಸ್

3-ullala

Ullala: ಲಾರಿ ಅಪಘಾತ; ಡೆಲಿವರಿ ಬಾಯ್ ದಾರುಣ ಸಾವು

eart

Kutch; 3.2 ತೀವ್ರತೆಯ ಭೂ ಕಂಪನ

1-gundlupete

Gundlupete: ವಿದ್ಯುತ್ ಕಂಬಕ್ಕೆ ‌ಗುದ್ದಿದ್ದ ಕಾರು: ಸ್ಥಳದಲ್ಲೇ ‌ಇಬ್ಬರು ಸಾವು

crime (2)

Lucknow; ಯುವಕನಿಂದ ತಾಯಿ ಮತ್ತು ನಾಲ್ವರು ಸಹೋದರಿಯರ ಬರ್ಬರ ಹ*ತ್ಯೆ!

1-blur

Aranthodu;ಅರಣ್ಯದಲ್ಲಿ ಹೊಸ ವರ್ಷ ಪಾರ್ಟಿ: 40 ಮಂದಿ ಅರಣ್ಯ ಇಲಾಖೆಯ ವಶಕ್ಕೆ!

kejriwal 2

BJP ತಪ್ಪುಗಳನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ? ಭಾಗವತ್ ರನ್ನು ಪ್ರಶ್ನಿಸಿದ ಕೇಜ್ರಿವಾಲ್

1-wwewqe

2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಹೊಸ ವರ್ಷಾಚರಣೆಗೆ ಮಾದಕ ವಸ್ತು ಮಾರುತ್ತಿದ್ದ 11 ಮಂದಿ ಸೆರೆ

Arrested: ಹೊಸ ವರ್ಷಾಚರಣೆಗೆ ಮಾದಕ ವಸ್ತು ಮಾರುತ್ತಿದ್ದ 11 ಮಂದಿ ಸೆರೆ

robin

EPF ನಿಧಿ ವಂಚನೆ: ರಾಬಿನ್‌ ಉತಪ್ಪ ವಿರುದ್ದದ ವಾರಂಟ್‌ಗೆ ಹೈಕೋರ್ಟ್‌ ತಡೆ

1-new

Bengaluru: ರಂಗೇರಿದ ರಾತ್ರಿಯಲ್ಲಿ ಹೊಸ ವರ್ಷದ ಸಂಭ್ರಮ

1-carr

Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು

KSRtc-1

New Way: ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ “ತ್ರಿವಳಿ ಸೂತ್ರ’

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

3-ullala

Ullala: ಲಾರಿ ಅಪಘಾತ; ಡೆಲಿವರಿ ಬಾಯ್ ದಾರುಣ ಸಾವು

eart

Kutch; 3.2 ತೀವ್ರತೆಯ ಭೂ ಕಂಪನ

2-hunsur

Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು

suicide (2)

Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ

1-gundlupete

Gundlupete: ವಿದ್ಯುತ್ ಕಂಬಕ್ಕೆ ‌ಗುದ್ದಿದ್ದ ಕಾರು: ಸ್ಥಳದಲ್ಲೇ ‌ಇಬ್ಬರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.