Viral: ಜಾಲತಾಣದಲ್ಲಿ ಆಮೀರ್ ಖಾನ್ ಅಳಿಯನದ್ದೇ ಭರ್ಜರಿ ಸುದ್ದಿ!
ಶಾರ್ಟ್ಸ್-ಬನಿಯನ್ ಧರಿಸಿ ಬಂದ ಮದುಮಗ- ಮದುವೆ ಮನೆಗೆ 8 ಕಿ.ಮೀ. ಓಡಿ ಕೊಂಡು ಬಂದ ನೂಪುರ್
Team Udayavani, Jan 4, 2024, 9:52 PM IST
ಮುಂಬೈ: ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಮದುವೆ ವಿಷಯ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಆದರೆ, ಅದ್ದೂರಿ ವಿವಾಹ, ಐಷಾರಾಮಿ ಆತಿಥ್ಯಕ್ಕೋ ಈ ಮದುವೆ ಸುದ್ದಿಯಾಗಿಲ್ಲ. ಬದಲಿಗೆ ಆಮೀರ್ ಅಳಿಯ ನೂಪುರ್ ಶಿಖಾರೆ ತೊಟ್ಟಿರುವ ಬಟ್ಟೆ ಕಾರಣದಿಂದ ವೈರಲ್ ಆಗಿದೆ.
ಶಿಖಾರೆ ಶಾರ್ಟ್ಸ್ ಮತ್ತು ಬನಿಯನ್ ಧರಿಸಿಯೇ ಮದುವೆ ಮನೆಗೆ ದಿಬ್ಬಣ ಹೊರಟು, ವಿವಾಹ ನೋಂದಣಿಯನ್ನೂ ಅದೇ ದಿರಿಸಿನಲ್ಲಿ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ, ಫಿಟ್ನೆಸ್ ಟ್ರೈನರ್ ಆಗಿರುವ ಮದುಮಗ ನೂಪುರ್, ಮುಂಬೈನಿಂದ ಬಾಂದ್ರಾವರೆಗೆ ಅಂದರೆ ಮದುವೆ ಮನೆಗೆ ಬರೋಬ್ಬರಿ 8 ಕಿ.ಮೀ. ಓಡಿಕೊಂಡೇ (ಜಾಗಿಂಗ್) ಬಂದಿದ್ದಾರೆ!
ಈ ವಿಚಿತ್ರ ವರ್ತನೆ ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿತ್ತು. ಶಿಖಾರೆ ಆ ರೀತಿಯ ಬಟ್ಟೆ ಧರಿಸಿದ್ದು ಯಾಕೆ ಎಂಬುದಕ್ಕೆ ನೆಟ್ಟಿಗರೊಬ್ಬೊಬ್ಬರು ಒಂದೊಂದು ಕಾರಣ ನೀಡಿದ್ದಾರೆ. ಕೆಲವರು ಆಮಿರ್ ಅವರ 3 ಇಡಿಯಟ್ ಸಿನಿಮಾದ ಪ್ರೇರಣೆ ಎಂದರೆ ಮತ್ತೆ ಕೆಲವರು ಬಟ್ಟೆ ಮೌಲ್ಯ ಎಷ್ಟೆಂದು ತಿಳಿಯಲು ಈ ಪರೀಕ್ಷೆ ಎಂದು ಛೇಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.