ಆ್ಯಪ್ ಮಿತ್ರ: ಪಿಕಾಯ್ (Picai)
Team Udayavani, May 18, 2020, 4:15 AM IST
ಡಿ.ಎಸ್.ಎಲ್.ಆರ್. ಕ್ಯಾಮೆರಾಗಳಲ್ಲಿ ಫೋಟೋ ತೆಗೆಯುವವರಿಗೆ, ಅಸಂಖ್ಯ ಸಲಕರಣೆಗಳು, ಲೆನ್ಸ್‌ಗಳ ಆಯ್ಕೆಗಳಿರುತ್ತವೆ. ಎಷ್ಟೋ ವೇಳೆ, ಲೆನ್ಸ್ ಎದುರುಗಡೆ ಫಿಲ್ಟರ್ ಗಳನ್ನೂ ಬಳಸುತ್ತಾರೆ. ಬಣ್ಣಬಣ್ಣದ ತೆಳು ಗಾಜಿನ ಆ ಪರದೆಗಳನ್ನು, ದೃಶ್ಯಾವಳಿಯ ಅಂದ ಹೆಚ್ಚಿಸಲು ಬಳಸುತ್ತಾರೆ. ಅದನ್ನು ಸ್ಮಾರ್ಟ್ ಫೋನಿನಲ್ಲಿ ಸಾಧ್ಯವಾಗಿಸುವ ಅನೇಕ ಫಿಲ್ಟರ್ ಗಳು, ಆಪ್ ಪ್ಲೇಸ್ಟೋರಿನಲ್ಲಿ ಸಿಗುತ್ತವೆ. ಅವುಗಳಲ್ಲಿ, ಸ್ಮಾರ್ಟ್ ಎಂದು ಕರೆಯಬಹುದಾದ ಆ್ಯಪ್ ಒಂದಿದ್ದರೆ ಅದು- “ಪಿಕಾಯ್’.
ಬಹುತೇಕ ಫಿಲ್ಟರ್‌ಗಳನ್ನು, ಫೋಟೋ ಹೊಡೆದ ನಂತರ ಅಪ್ಲೆ„ ಮಾಡಬೇಕಾಗುತ್ತದೆ. ಆದರೆ ಪಿಕಾಯ್, ರಿಯಲ್ ಟೈಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಂದರೆ, ಫೋಟೋ ತೆಗೆಯುವಾಗಲೇ, ಬಳಕೆದಾರರು ತಮ್ಮ ನೆಚ್ಚಿನ ಫಿಲ್ಟರ್ ಅನ್ನು ಆರಿಸಿಕೊಳ್ಳಬಹುದು. ಈ ಆ್ಯಪ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನು ಹೊಂದಿದೆ. ಬಳಕೆದಾರ, ಯಾವ ವಸ್ತುವನ್ನು ಸೆರೆ ಹಿಡಿಯಲು ಯತ್ನಿಸುತ್ತಿದ್ದಾನೆ ಎಂಬುದನ್ನು ಲೆಕ್ಕಾಚಾರ ಮಾಡಿ, ಅದೇ ಹೇಳುತ್ತದೆ. ಉದಾಹರಣೆಗೆ, ಬಳಕೆದಾರ ಮರವನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದರೆ, ಈ ಆಪ್ “ಟ್ರೀ’ ಎಂದು ಪರದೆ ಮೇಲೆ ಹೇಳುತ್ತೆ. ಅಷ್ಟೇ ಅಲ್ಲ,
ಮರವನ್ನು ಸೆರೆಹಿಡಿಯಲು ಯಾವ ಫಿಲ್ಟರ್ ಸೂಕ್ತ ಎನ್ನುವುದನ್ನು, ಅದೇ ಆಯ್ಕೆ ಮಾಡಿ ನಮ್ಮ ಮುಂದಿರಿಸುತ್ತದೆ. ಆ ದೃಶ್ಯ ನಮಗೆ ಸೂಕ್ತ ಎಂದೆನಿಸಿದರೆ, ಆ ಫಿಲ್ಟರ್ ಅನ್ನು ಆರಿಸಿಕೊಳ್ಳಬಹುದು. ಒಂದೇ ಸಲಕ್ಕೆ ಸ್ಕ್ರೀನನ್ನು ಆರ್ಧರ್ಧ ಮಾಡಿ, ಎರಡು ಫಿಲ್ಟರ್ ಪ್ರಭಾವವನ್ನು ತೋರಿಸುತ್ತದೆ. ಆ ಫಿಲ್ಟರ್ ಇಷ್ಟವಾಗದಿದ್ದರೆ, ಮೇಲೆ ಕೆಳಗೆ ಸ್ವೈಪ್ ಮಾಡಬೇಕು. ಆಗ ಬೇರೆ ಫಿಲ್ಟರ್ ಆಯ್ಕೆ ಮೂಡುತ್ತದೆ. ಯಾವ ಫಿಲ್ಟರ್ ಇಷ್ಟವಾಗುತ್ತದೋ ಅದನ್ನು, ಎಡದಿಂದ ಬಲಕ್ಕೆ ಸ್ವೈಪ್ ಮಾಡಿದರೆ, ಆ ಫಿಲ್ಟರ್ ಪೂರ್ತಿಯಾಗಿ ಎದುರಿನ ದೃಶ್ಯಾವಳಿಯನ್ನು ಆವರಿಸಿಕೊಳ್ಳುತ್ತದೆ. ತರ ಬಳಕೆದಾರ ಫೋಟೋ ಕ್ಲಿಕ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.