ಆ್ಯಪ್ ಮಿತ್ರ: ಮನಿ ಮ್ಯಾನೇಜರ್
Team Udayavani, Jun 22, 2020, 4:53 AM IST
ಹಣದ ನಿರ್ವಹಣೆ ನಮ್ಮೆಲ್ಲರಿಗೂ ಸವಾಲಿನ ಸಂಗ ತಿಯೇ. ಈ ವಿಷಯದಲ್ಲಿ ಎಷ್ಟೇ ಪರಿಣತರಾಗಿದ್ದರೂ ಒಂದಲ್ಲಾ ಒಂದು ಹಂತದಲ್ಲಿ ಪರ್ನಸಲ್ ಅಕೌಂ ಟೆಂಟ್ ಇಲ್ಲವೇ, ಮ್ಯಾನೇಜರ್ ಇದ್ದಿದ್ದರೆ ಒಳ್ಳೆಯದಿತ್ತು ಎಂದೆನಿಸದೇ ಇರದು. ಈ ಸ್ಥಾನವನ್ನು ತುಂಬುತ್ತದೆ ಈ ಮನಿ ಮ್ಯಾನೇಜರ್ ಆ್ಯಪ್. ತಿಂಗಳಾಂತ್ಯದ ವೇಳೆಗೆ ನಮ್ಮಲ್ಲಿ ಬಹುತೇಕರ ಸಂಬಳ ಖಾಲಿಯಾಗಿರುತ್ತದೆ.
ನಮ್ಮ ಹಣ ಯಾವ್ಯಾ ವುದಕ್ಕೆ ಖರ್ಚಾಗಿದೆ, ನಾವು ಬ್ಯಾಂಕ್ ಟ್ರಾನ್ಸಾಕ್ಷನ್ ಮತ್ತಿತರ ಮಾಹಿತಿಗಳನ್ನು ಟ್ರ್ಯಾಕ್ ಮಾಡಲಾಗದೆ ಪರಿತಪಿಸುತ್ತೇವೆ. ಇಂಥ ಸಂದರ್ಭದಲ್ಲಿ ಈ ಆ್ಯಪ್ ನೆರವಿಗೆ ಬರುತ್ತದೆ. ಇದು ಫೈನಾನ್ಷಿಯಲ್ ಪ್ಲ್ಯಾನಿಂಗ್‌ನಲ್ಲಿ ಸಹಕರಿಸುವುದರ ಜೊತೆಗೆ, ನಮ್ಮ ಹಣಕಾಸು ನಡೆಗಳನ್ನು ಟ್ರ್ಯಾಕ್ ಮಾಡುವ ಸವಲತ್ತುಗಳನ್ನೂ ಒಳಗೊಂಡಿದೆ. ಇದರಿಂದ ತಿಂಗಳ ಬಜೆಟ್ ಅನ್ನೂ ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಬಹುದು. ಯಾವ ಯಾವ ವಿಷಯಗಳಿಗೆ ನಾವು ಖರ್ಚು ಮಾಡುತ್ತೇವೆ ಎಂದು ವಿಭಾಗಿಸುವ ಸವಲತ್ತೂ ಇದರಲ್ಲಿದೆ.
ಹಾಗಾಗಿ, ನಮ್ಮ ಖರ್ಚು ವೆಚ್ಚದ ಗ್ರಾಫ್ ಅನ್ನೂ ನೋಡಬಹುದು. ಬ್ಯಾಂಕು/ ಡೆಬಿಟ್ ಕಾರ್ಡ್ ಜೊತೆಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯೂ ಇಲ್ಲಿದೆ. ಪ್ರತಿ ತಿಂಗಳೂ ಕಟ್ಟಬೇಕಿರುವ ಲೋನ್ ಮೊತ್ತ, ಇನ್ಸುರೆನ್ಸ್ ಮೊತ್ತವನ್ನು ನಿಗದಿತ ದಿನಾಂಕದಂದು ಆಟೊಮ್ಯಾಟಿಕ್ ಆಗಿ ಕಟ್ ಆಗುವಂತೆಯೂ ಮಾಡಬಹುದು. ಹಣ ಪಾವತಿಯಾದ ನಂತರ ನೋಟಿಫಿಕೇಷನ್ ಬರುತ್ತದೆ. ಈ ಆ್ಯಪ್ ಪ್ಲೇ ಸ್ಟೋರಿನಲ್ಲಿ ಉಚಿತವಾಗಿ ಲಭ್ಯವಿದೆ. ಜೊತೆಗೆ ಪೇಯ್ಡ್ ಆವೃತ್ತಿಯೂ ಲಭ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.