“ಆರಾಟ’ ಕನ್ನಡ ಸಿನೆಮಾ ಬಿಡುಗಡೆ: “ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಸಿನೆಮಾ’
Team Udayavani, Jun 21, 2024, 11:38 PM IST
ಮಂಗಳೂರು: ಪಿ.ಎನ್.ಆರ್. ಪ್ರೊಡಕ್ಷನ್ ಬ್ಯಾನರ್‌ನಲ್ಲಿ ತಯಾರಾದ ಪುಷ್ಪರಾಜ್ ರೈ ಮಲಾರಬೀಡು ನಿರ್ದೇಶನದ “ಆರಾಟ’ ಕನ್ನಡ ಸಿನೆಮಾದ ಬಿಡುಗಡೆ ಸಮಾರಂಭ ಮಂಗಳೂರು ಬಿಜೈಯ ಭಾರತ್ ಸಿನೆಮಾಸ್‌ನಲ್ಲಿ ನಡೆಯಿತು.
ಶಾಸಕ ರಾಜೇಶ್ ನಾೖಕ್ ಉದ್ಘಾಟಿಸಿ ಶುಭ ಹಾರೈಸಿದರು. ಕಟೀಲು ಮೇಳದ ಮುಖ್ಯಸ್ಥ ದೇವಿ ಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಪ್ರಮುಖರಾದ ಶಿವಪ್ರಸಾದ್ ಕಂಡೆಲ್‌ಕಾರ್, ಶಿವಪ್ರಸಾದ್ ಆಳ್ವ, ವಿಜಯಕುಮಾರ್ ಕೊಡಿಯಾಲ ಬೈಲು, ಪ್ರಕಾಶ್ ಪಾಂಡೇಶ್ವರ್, ಜಗನ್ ಪವಾರ್ ಬೇಕಲ್, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ತಮ್ಮ ಲಕ್ಷಣ್, ಸಂತೋಷ್ ಶೆಟ್ಟಿ ಕುಂಬ್ಳೆ, ಶ್ರೀಕಾಂತ್ ಶೆಟ್ಟಿ, ಜ್ಯೋತಿಷ್ ಶೆಟ್ಟಿ, ಸುನಿಲ್ ನೆಲ್ಲಿಗುಡ್ಡೆ, ಅನಿಲ್ ಉಪ್ಪಳ, ಪುಷ್ಪರಾಜ್ ರೈ, ರಾಘವೇಂದ್ರ ಹೊಳ್ಳ, ಮಲ್ಲಿಕಾ ಪ್ರಸಾದ್, ದಿನೇಶ್ ಶೆಟ್ಟಿ ಮಲಾರಬೀಡು, ರಾಮ್ ಪ್ರಸಾದ್, ಭಾಸ್ಕರ ಚಂದ್ರ ಶೆಟ್ಟಿ, ಕಿರಣ್ ಶೆಟ್ಟಿ, ಪ್ರೇಮ್ ಶೆಟ್ಟಿ ಸುರತ್ಕಲ್, ಉದಯ ಶೆಟ್ಟಿ ಇಡ್ಯಾ, ಅನಿಲ್‌ರಾಜ್ ಉಪಸ್ಥಿತರಿದ್ದರು. ಲಕ್ಷಿ$¾àಶ ಸುವರ್ಣ ನಿರೂಪಿಸಿದರು.
ಮಂಗಳೂರಿನ ಭಾರತ್ ಸಿನೆಮಾಸ್, ಪಿ.ವಿ.ಆರ್., ಸಿನಿಪೊಲಿಸ್, ಮಣಿ ಪಾಲದ ಐನಾಕ್ಸ್, ಭಾರತ್ ಸಿನೆಮಾಸ್, ಪಡುಬಿದ್ರಿಯ ಭಾರತ್ ಸಿನೆಮಾಸ್, ಪುತ್ತೂರಿನ ಭಾರತ್ ಸಿನೆಮಾಸ್, ಕುಂದಾಪುರದ ಭಾರತ್ ಸಿನೆಮಾಸ್, ಉಡುಪಿಯ ಭಾರತ್ ಸಿನೆಮಾಸ್, ಸುರತ್ಕಲ್ ಸಿನಿ ಗ್ಯಾಲಕ್ಸಿ, ಕಾಸರಗೋಡು ಸಿನಿಕೃಷ್ಣ ಟಾಕೀಸ್‌ಗಳಲ್ಲಿ ತೆರೆಕಂಡಿದೆ.
ಚಿತ್ರದ ಕುರಿತು: ಸಿನೆಮಾದ ಮೂಲಕಥೆ ರಾಘವೇಂದ್ರ ಹೊಳ್ಳ ಅವರದ್ದು. ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಪುಷ್ಪರಾಜ್ ರೈ ಅವರದ್ದು. ನಿರ್ದೇಶನ ತಂಡದಲ್ಲಿ ಜಯರಾಜ್ ಹೆಜಮಾಡಿ, ರೋಷನ್ ಆಳ್ವ, ಹರ್ಷ ರಾಜ್ ಬಂಟ್ವಾಳ, ಅಭಿ ಬೋಳ್ಯರ್, ಸುಶಿನ್ ಕೆಲಸ ಮಾಡಿದ್ದಾರೆ. ಛಾಯಾಗ್ರಹಣ ರವಿ ಸುವರ್ಣ, ಸಂಕಲನ ದಾಮು ಕನ್ಸೂರ್, ಸಂಗೀತ ರಾಘವೇಂದ್ರ ಬೀಜಾಡಿ ಹಾಗೂ ಶಮೀರ್ ಮುಡಿಪು, ಸಾಹಿತ್ಯ ಎಚ್. ಎಸ್. ವೆಂಕಟೇಶ್ ಮೂರ್ತಿ ಹಾಗೂ ಯೋಗೀಶ್. ತಾರಾಗಣದಲ್ಲಿ ಸರಕಾರಿ ಹಿ.ಪ್ರಾ.ಶಾಲೆ ದಡ್ಡ ಪ್ರವೀಣ ಖ್ಯಾತಿಯ ರಂಜನ್ ಕಾಸರಗೋಡು, ವೆನ್ಯ ರೈ, ಜ್ಯೋತಿಶ್ ಶೆಟ್ಟಿ, ಸುನಿಲ್ ನೆಲ್ಲಿಗುಡ್ಡೆ, ಅನಿಲ್‌ರಾಜ್ ಉಪ್ಪಳ, ಚೇತನ್ ರೈ ಮಾಣಿ, ರವಿ ರಾಮಕುಂಜ ಮೊದಲಾದವರಿದ್ದಾರೆ. ರಾಘವೇಂದ್ರ ಹೊಳ್ಳ, ರಾಂಪ್ರಸಾದ್, ನಿತೇಶ್ ಮಾಡಮ್ಮೆ ಹಾಗೂ ಇತರರು ಬಂಡವಾಳ ಹೂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.