ಸಕಲ ಕಲಾ ವಲ್ಲಭ ಎಬಿಡಿ ವಿಲಿಯರ್ಸ್


Team Udayavani, Jun 6, 2020, 4:30 PM IST

ಸಕಲ ಕಲಾ ವಲ್ಲಭ ಎಬಿಡಿ ವಿಲಿಯರ್ಸ್

ಕ್ರಿಕೆಟ್‌ ಅಭಿಮಾನಿಗಳಿಂದ ಮಿ.360 ಡಿಗ್ರಿ ಎಂದು ಕರೆಯಿಸಿಕೊಳ್ಳುವ ಎಬಿಡಿ ವಿಲಿಯರ್ಸ್ ದಕ್ಷಿಣ ಅಫ್ರಿಕಾ ಕ್ರಿಕೆಟ್‌ ತಂಡದ ದೈತ್ಯ ಅಟಗಾರ. ಅಷ್ಟೇ ಅಲ್ಲದೇ ಐಪಿಎಲ್‌ ಪಂದ್ಯಾವಳಿಯಲ್ಲಿ ಭಾಗವಹಿಸುವ ಆರ್‌ಸಿಬಿ ತಂಡದ ಮುಖ್ಯ ಆಟಗಾರದಲ್ಲಿ ಒಬ್ಬರು. ಎಬಿಡಿ ವಿಲಿಯರ್ಸ್ ಬ್ಯಾಟ್‌ ಹಿಡಿದು ಕ್ರೀಸ್‌ಗೆ ಬಂದರೆ ಸಾಕು, ಕ್ರಿಕೆಟ್‌ ಅಭಿಮಾನಿಗಳಲ್ಲಿ ಅದೇನೂ ರೋಚಕತೆ, ಉತ್ಸಾಹ. ಎಬಿಡಿ, ಎಬಿಡಿ ಎಂಬ ಚೀರಾಟ ಇಡೀ ಕ್ರೀಡಾಂಗಣದ ಮುಗಿಲು ಮುಟ್ಟುತ್ತದೆ.

ಎಡಬಿಡದೇ ಫೋರ್ ‌- ಸಿಕ್ಸರ್‌ ಮೂಲಕ ಬೌಲರ್‌ಗಳನ್ನು ದಂಡಿಸುವ ಇವರು ಕ್ರೀಡಾಂಗಣದ ಯಾವ ಮೂಲೆಯನ್ನೂ ಬಿಡುವುದಿಲ್ಲ. ಈ ದೈತ್ಯ ಆಟಗಾರ 360 ಡಿಗ್ರಿಯಲ್ಲಿ ಬಾರಿಸುವ ಬೌಂಡರಿಗಳು ಕ್ರೀಡಾಭಿಮಾನಿಗಳನ್ನು ಮತ್ತಷ್ಟು ರೊಚ್ಚಿಗೇಳಿಸುತ್ತವೆ.

ಎಬಿಡಿ ವಿಲಿಯರ್ಸ್ ಕೇವಲ ಕ್ರಿಕೆಟ್‌ ಆಟಗಾರ ಮಾತ್ರವಲ್ಲ, ಬಹುಮುಖ ಪ್ರತಿಭೆ. ಕ್ರಿಕೆಟ್‌ನಲ್ಲಿ ಬೌಂಡರಿ ಬಾರಿಸುವುದಷ್ಟೇ ಅಲ್ಲ. ಫುಟ್‌ಬಾಲ್‌ನಲ್ಲಿ ಗೋಲ್‌ ಕೂಡ ಹೊಡೆಯುತ್ತಾರೆ. ರಗ್ಬಿ, ಈಜು, ಬ್ಯಾಡ್ಮಿಂಟನ್‌ ಹೀಗೆ ಹತ್ತಾರು ಕ್ರೀಡೆಗಳನ್ನು ಚುರುಕಾಗಿ ಆಡಬಲ್ಲವರಾಗಿದ್ದಾರೆ.

ಎಲ್ಲ ವಿಧದಲ್ಲೂ ಬಹುಮುಖವಾಗಿ ಕಾಣುವ ಇವರು ಸಕಲ ವಲ್ಲಭ ಎಂದೆನಿಸಿಕೊಳ್ಳುತ್ತಾರೆ. ಇವರ ಬಗ್ಗೆ ಇರುವ ಕುತೂಹಲ ಅಂಶಗಳನ್ನು ತಿಳಿದುಕೊಳ್ಳೋಣ ಬನ್ನಿ…

1. ಕ್ರಿಕೆಟ್‌ನಲ್ಲಿ ದಾಖಲೆಗಳ ಸರದಾರ
ಮಿ. 360 ಖ್ಯಾತಿಯ ಎಬಿಡಿ ವಿಲಿಯರ್ಸ್ ಕ್ರಿಕೆಟ್‌ನಲ್ಲಿನ ದಾಖಲೆಗಳನ್ನು ಬಿಡಿಸಿ ಹೇಳುತ್ತಾ ಹೋದರೆ ಮುಗಿಯದ ಕಥೆಯಾಗುತ್ತದೆ. ಪ್ರತಿ ಪಂದ್ಯಕ್ಕೆ ಏನಾದರೂ ಒಂದು ದಾಖಲೆ ನಿರ್ಮಿಸುವ ಎಬಿಡಿ ಕ್ರಿಕೆಟ್‌ನಲ್ಲಿ ಕೇವಲ ಬ್ಯಾಟ್ಸ್‌ಮನ್‌ ಮಾತ್ರವಲ್ಲ, ಉತ್ತಮ ವಿಕೇಟ್‌ ಕೀಪರ್‌, ಬೌಲರ್‌, ಉತ್ತಮ ಕ್ಷೇತ್ರ ರಕ್ಷಕನೂ ಹೌದು. ಏಕದಿನ ಕ್ರಿಕೆಟ್‌ನಲ್ಲಿ  31 ಎಸೆತಗಳಲ್ಲಿ ಶತಕ ಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೇ ಟಿ-20, ಏಕದಿನ, ಟೆಸ್ಟ್‌ ಸರಣಿಗಳಿರಲಿ ಎಲ್ಲ ವಿಭಾಗದಲ್ಲಿ ಕೂಡ ಅದ್ಭುತ ಪ್ರದರ್ಶನ ನೀಡುವ ಉತ್ತಮ ಆಟಗಾರ. ಮೂರು ಬಾರಿ ಐಸಿಸಿ ವರ್ಷದ ಕ್ರಿಕಟಿಗ ಎಂಬ ಗೌರವಕ್ಕೆ ಭಾಜನನಾಗಿದ್ದಾರೆ.

2. ಕ್ರೀಡಾ ಲೋಕದ ದೈತ್ಯ ಪ್ರತಿಭೆ
ಒಬ್ಬ ಕ್ರೀಡಾಳು ತನ್ನ ಕ್ರೀಡಾ ಕ್ಷೇತ್ರದಲ್ಲಿ ಮಾತ್ರ ಸಾಧನೆ ಮಾಡುತ್ತಾರೆ. ಆದರೆ ಎಬಿಡಿ ಹಾಗಲ್ಲ. ಈತ ಬಹುಮುಖ ಪ್ರತಿಭೆ. ಹಲವಾರು ಮಾದರಿ ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದಾರೆ. ಕೇವಲ ಕ್ರಿಕೆಟ್‌ ಮಾತ್ರವಲ್ಲ, ದ. ಅಫ್ರಿಕಾದ ಜೂನಿಯರ್‌ ಆ್ಯಥ್ಲೀಟ್‌ನಲ್ಲಿ 100 ಮೀ. ಓಟದಲ್ಲಿ ದಾಖಲೆ ನಿರ್ಮಿಸಿದ್ದಾರೆ. 19 ವರ್ಷದೊಳಗಿನ ರಾಷ್ಟ್ರೀಯ ಬ್ಯಾಡ್ಮಿಂಟನ್‌ ತಂಡದ ಆಟಗಾರನಾಗಿದ್ದರು, ರಗ್ಬಿ ತಂಡದ ನಾಯಕನಾಗಿದ್ದರು. ಜತೆಗೆ ಈಜಿನಲ್ಲಿ 6 ದಾಖಲೆಗಳನ್ನು ನಿರ್ಮಿಸಿದ್ದಾರೆ. ಕಿರಿಯರ ಡೇವಿಸ್‌ ಕಪ್‌ ತಂಡಕ್ಕೆ ದ. ಅಫ್ರಿಕಾದಿಂದ ಆಯ್ಕೆಗೊಂಡಿದ್ದು ಮಾತ್ರವಲ್ಲದೆ ಗಾಲ್ಫ್, ಹಾಕಿ ಮತ್ತು ಫುಟ್ ಬಾಲ್‌ ತಂಡದ ಸಕ್ರಿಯ ಆಟಗಾರನಾಗಿದ್ದರು. ಎಲ್ಲ ಮಾದರಿಯ ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದಾರೆ.

3. ಗಾಯಕ, ಲೇಖಕ
ಕ್ರಿಕೆಟ್‌ನಲ್ಲಿ ತನಗೆ ಯಾರು ಸಾಟಿಯಿಲ್ಲದ ಪ್ರದರ್ಶನ ನೀಡುವ ಎಬಿಡಿ ವಿಲಿಯರ್ಸ್‌ ಒಬ್ಬ ಅದ್ಭುತ ಗಾಯಕ, ಲೇಖಕ ಹಾಗೂ ಗಿಟಾರ್‌ ವಾದಕರೂ ಹೌದು. ಇವರು ಮ್ಯಾಕ್‌ಜೋ ಡ್ರೋಮ್‌ ವಾರ್‌ ಎಂಬ ಅಲ್ಬಂನ್ನು 2010ರಲ್ಲಿ ಬಿಡುಗಡೆಗೊಳಿಸಿದ್ದರು. ಅಲ್ಲದೇ ತನ್ನ ಆತ್ಮಕಥೆಯನ್ನು ಬರೆದು ಖ್ಯಾತ ಲೇಖಕರ ಪಟ್ಟಿಯಲ್ಲೂ ಗುರುತಿಸಿಕೊಂಡಿದ್ದಾರೆ.

– ಭೀರಪ್ಪ ಉಪ್ಪಲದೊಡ್ಡಿ, ಸಿಂಧನೂರು

ಟಾಪ್ ನ್ಯೂಸ್

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Human Relations: ಆಧುನಿಕ ಯುಗದ ಮಾನವ ಸಂಬಂಧ…

19-uv-fusion

Photography: ಬದುಕಿನ ಹಲವು ಮುಖಗಳ ಸಂಗ್ರಹ ಫೋಟೋಗ್ರಫಿ

11

UV Fusion: ನನ್ನ ನೆನಪಿನ ಬುಟ್ಟಿಯಲ್ಲಿ…

18-uv-fusion

School of Experience: ಅನುಭವವೆಂಬ ಪಾಠಶಾಲೆ

17-1

Superbugs: ಸೂಪರ್‌ ಬಗ್‌-ಸೂಕ್ಷ್ಮಾಣು ಜೀವಿ ಲೋಕದ ಟೆರರಿಸ್ಟ್‌

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

POlice

Puttur: ಅನಾಥ ಸ್ಥಿತಿಯಲ್ಲಿ ಎರಡು ಬೈಕ್‌; ವಶಕ್ಕೆ ಪಡೆದುಕೊಂಡ ಪೊಲೀಸರು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.