H1-B ವೀಸಾ ವ್ಯವಸ್ಥೆ ರದ್ದು: ವಿವೇಕ್ ರಾಮಸ್ವಾಮಿ
Team Udayavani, Sep 17, 2023, 9:37 PM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಎಚ್1-ಬಿ ವೀಸಾ ವ್ಯವಸ್ಥೆ ರದ್ದುಪಡಿಸಲಾಗುವುದು ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಘೋಷಿಸಿದ್ದಾರೆ. “ಎಚ್-1ಬಿ ವೀಸಾ ಲಾಟರಿ ಆಧಾರಿತ ವ್ಯವಸ್ಥೆ ಆಗಿದ್ದು, ಇದನ್ನು ಕೌಶಲ್ಯಾಧರಿತ ವ್ಯವಸ್ಥೆಯಾಗಿ ಬದಲಾಯಿಸಬೇಕಿದೆ. ಇದರಿಂದ ಕಂಪನಿಗಳು ಮಾತ್ರ ಲಾಭ ಪಡೆದುಕೊಳ್ಳುತ್ತಿವೆ. ಇದು ಒಪ್ಪಂದದ ಜೀತ ಪದ್ಧತಿ. ಅಮೆರಿಕ ಅಧ್ಯಕ್ಷನಾದರೆ ಈ ವ್ಯವಸ್ಥೆಗೆ ಅಂತ್ಯ ಹಾಡಲಿದ್ದೇನೆ’ ಎಂದು ಹೇಳಿದ್ದಾರೆ. ವಿಶೇಷವೆಂದರೆ, ಸ್ವತಃ ವಿವೇಕ್ ಅವರೇ ಎಚ್-1ಬಿ ವೀಸಾದ ಪ್ರಯೋಜನವನ್ನು 29 ಬಾರಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಎಚ್-1ಬಿ ವಲಸಿಗರಲ್ಲದವರಿಗೆ ನೀಡುವ ವೀಸಾ ಆಗಿದೆ. ವಿಶೇಷ ತಾಂತ್ರಿಕ ಪರಿಣತಿಯ ವಿದೇಶಿಯರನ್ನು ಅಮೆರಿಕದ ಕಂಪನಿಗಳು ನೇಮಕ ಮಾಡಿಕೊಳ್ಳುತ್ತವೆ. ಅಮೆರಿದಲ್ಲಿ ಕೆಲಸ ಮಾಡಲು ಎಚ್-1ಬಿ ವೀಸಾ ಹೊಂದಿರುವುದು ಕಡ್ಡಾಯ. ಅಮೆರಿಕ ಸರ್ಕಾರವು ವಾರ್ಷಿಕವಾಗಿ 65,000 ಎಚ್1-ಬಿ ವೀಸಾ ವಿತರಿಸುವ ಗುರಿ ನಿಗದಿಪಡಿಸಿದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಭಾರತೀಯರು ಮತ್ತು ಚೀನೀಯರು ಈ ವೀಸಾದ ಫಲಾನುಭವಿಗಳಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.