![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 21, 2021, 9:25 PM IST
ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಅಬ್ಬರದ ಮಧ್ಯೆ ಕಪ್ಪು ಶಿಲೀಂದ್ರ (ಬ್ಲ್ಯಾಕ್ ಫಂಗಸ್) ಕಾಯಿಲೆ ಕೂಡ ಹೆಚ್ಚಿನ ಭೀತಿ ಹುಟ್ಟಿಸಿದೆ. 30 ಜನ ಶಂಕಿತ ರೋಗಿಗಳು ಇದ್ದು, ಶುಕ್ರವಾರ 68 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ.
ಜೇವರ್ಗಿ ತಾಲೂಕಿನ ಕಾಸಬೋಸಗಾ ಗ್ರಾಮದ ಪ್ರಮಿಳಾ ಅಯ್ಯಣ್ಣ ಎಂಬಾಕೆಯೇ ಮೃತ ವೃದ್ಧೆ. ಕಳೆದ ಐದು ದಿನಗಳ ಹಿಂದೆ ಬ್ಯ್ಲಾಕ್ ಫಂಗಸ್ ಶಂಕೆಯಿಂದ ಜಿಮ್ಸ್ ಆಸ್ಪತ್ರೆಗೆ ವೃದ್ಧೆ ದಾಖಲಾಗಿದ್ದರು. ಆದರೆ, ಖಚಿತ ವರದಿ ಬಾರದ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ನಡದೇ ವೈದ್ಯರು ನಿರ್ಲಕ್ಷ್ಯ ವಹಿಸಿದ್ದರು. ಈಗ ಬ್ಯ್ಲಾಕ್ ಫಂಗಸ್ ನಿಂದಲೇ ಆಕೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ಕುಟುಂಬಬಸ್ಥರು ದೂರಿದ್ದಾರೆ.
ಇದನ್ನೂ ಓದಿ :ದಾವಣಗೆರೆ: ಜಿಲ್ಲೆಯಲ್ಲಿ 525 ಮಂದಿ ಗುಣಮುಖ, 681 ಹೊಸ ಪ್ರಕರಣ ಪತ್ತೆ
ಜಿಮ್ಸ್ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ 30 ಜನ ಶಂಕಿತ
ಬ್ಯ್ಲಾಕ್ ಫಂಗಸ್ ರೋಗಿಗಳು ದಾಖಲಾಗಿದ್ದಾರೆ. ಆದರೆ, ಇರ‍್ಯಾರ ವರದಿಗಳು ಕೂಡ ಇನ್ನೂ ಪ್ರಯೋಗಾಲಯದಿಂದ ಬಂದಿಲ್ಲ. ವರದಿ ಬಂದ ನಂತರವೇ ಬ್ಯ್ಲಾಕ್ ಫಂಗಸ್ ಬಗ್ಗೆ ಖಚಿತವಾಗಿ ಹೇಳಬಹುದು ಎಂದು ಜಿಪಂ ಸಿಇಓ ಡಾ.ದಿಲೀಷ್ ಸಸಿ ತಿಳಿಸಿದ್ದಾರೆ.
ಬ್ಯ್ಲಾಕ್ ಫಂಗಸ್ ರೋಗಿಗಳಿಗೆ ಎಂಫೋಟೆರೆಸಿನ್ ಇಂಜೆಕ್ಷನ್‌ಗಳ ಅಗತ್ಯ ಇದೆ. ಆದರೆ, ಶಂಕಿತ ರೋಗಿಗಳು ಏಕಾಏಕಿ ಆಸ್ಪತ್ರೆಗಳಿಗೆ ದಾಖಲಾದ ಕಾರಣ ಇಂಜೆಕ್ಷನ್ ಕೊರತೆ ಕಂಡು ಬರುತ್ತಿದೆ ಎಂದೂ ಅವರು ಹೇಳಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.