ಪಾಸ್ ಇದ್ದರಷ್ಟೇ ಬಂದರಿನೊಳಗೆ ಪ್ರವೇಶ
ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ ಮೀನುಗಾರಿಕೆ
Team Udayavani, May 19, 2020, 5:40 AM IST
ಮಲ್ಪೆ : ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಯಾಂತ್ರಿಕ ಮೀನುಗಾರಿಕೆ ವಾರದ ಹಿಂದೆ ಆರಂಭಗೊಂಡಿದ್ದರೂ ಇದುವರೆಗೆ ಶೇ. 10ರಷ್ಟು ಬೋಟುಗಳು ಮಾತ್ರ ಮೀನುಗಾರಿಕೆಗೆ ತೆರಳಿವೆ.
ಬೋಟ್ ತೆರಳಲು ಇಲಾಖೆಯ ಪಾಸ್ ವ್ಯವಸ್ಥೆ ಮತ್ತು ಕಾರ್ಮಿಕರ ಕೊರತೆಯಿಂದಾಗಿ ಯಾಂತ್ರೀಕೃತ ದೋಣಿಗಳು ನಿರೀಕ್ಷಿತ ಪ್ರಮಾಣದಲ್ಲಿ ಕಡಲಿಗೆ ಇಳಿದಿಲ್ಲ. ಇನ್ನು ಕೆಲವರು ಬೋಟುಗಳನ್ನು ತೆರವುಗೊಳಿಸಲು ಸಾಧ್ಯವಾಗದ ಹಿನ್ನೆಲೆ ಮತ್ತು ಮೇ 31ಕ್ಕೆ ಮೀನುಗಾರಿಕೆ ಋತು ಅಂತ್ಯಗೊಳ್ಳುವ ಕಾರಣದಿಂದಲೂ ಮೀನುಗಾರಿಕೆಗೆ ತೆರಳಲು ಮನಸ್ಸು ಮಾಡಿಲ್ಲ ಎನ್ನಲಾಗಿದೆ.
ಮಲ್ಪೆ ಬಂದರಿನಲ್ಲಿರುವ 2000 ದೋಣಿಗಳಲ್ಲಿ ಕೇವಲ 250ರಿಂದ 300ರಷ್ಟು ಬೋಟುಗಳು ತೆರಳಿದ್ದು ಲಾಕ್‌ಡೌನ್ ನಿಯಮಾನುಸಾರ ಮೀನುಗಾರಿಕೆ ಚಟುವಟಿಕೆಗಳು ನಡೆಯುತ್ತಿದೆ. ಮೀನು ಗಾರ ಸಂಘದ ಜತೆಯಲ್ಲಿ ಕರಾವಳಿ ಪೊಲೀಸರು, ಮೀನುಗಾರಿಕೆ ಇಲಾಖಾ ಅಧಿಕಾರಿಗಳು ಜನಸಂದಣಿ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.
ಮಂಜುಗಡ್ಡೆ ಕೊರತೆ
ಬಂದರಿನಲ್ಲಿ ಯಾಂತ್ರಿಕ ದೋಣಿಗಳಿಗೆ ಬೇಕಾಗುವಷ್ಟು ಮಂಜುಗಡ್ಡೆ ಸಿಗುತ್ತಿಲ್ಲ.ಕೆಲವು ಮಂಜುಗಡ್ಡೆ ಸ್ಥಾವರಗಳು ಮಾತ್ರ ಕಾರ್ಯನಿರ್ವಹಿಸುತ್ತಿರುವುದರಿಂದ ಕೊರತೆ ಉಂಟಾಗಿದೆ. ಲಾಕ್‌ಡೌನ್ ನಂತರ ದೋಣಿಗಳು ಮೀನುಗಾರಿಕೆಗೆ ತೆರಳದಿದ್ದರಿಂದ ಮತ್ತು ಕಾರ್ಮಿಕರ ಕೊರತೆಯಿಂದ ಬಹುತೇಕ ಸ್ಥಾವರಗಳು ಸ್ಥಗಿತಗೊಂಡಿವೆ.
ಬೆಳಗ್ಗೆ 5ರಿಂದ ಸಂಜೆ 5ರವರೆಗೆ ಇಲ್ಲಿ ಮೀನುಗಾರಿಕೆ ಚಟುವಟಿಕೆಗೆ ಅವಕಾಶ ನೀಡಲಾಗಿದ್ದು ಬೋಟು ಮಾಲಕರಿಗೆ, ಉಡುಪಿ ಜಿಲ್ಲೆಯೊಳಗಿನ ನಿಗದಿತ ಮಹಿಳಾ ಹಸಿಮೀನು ಮಾರಾಟಗಾರರಿಗೆ, ಒಣಮೀನು ಮಾರಾಟ ಮಹಿಳೆಯರಿಗೆ, ವ್ಯಾಪಾರಸ್ಥರಿಗೆ, ಫಿಶ್‌ಮೀಲ್, ಫೀÅಜಿಂಗ್ ಪ್ಲಾಂಟ್, ಮೀನು ಇಳಿಸುವವರು ಸೇರಿದಂತೆ ಕೆಲವೇ ವರ್ಗಕ್ಕೆ ಮಾತ್ರ ಪಾಸ್‌ಗಳನ್ನು ನೀಡಲಾಗಿದೆ.
ಎಲ್ಲರಿಗೂ ಪಾಸ್ ಅಸಾಧ್ಯ
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮೀನುಗಾರ ಸಂಘ ಪಾಸ್ ವ್ಯವಸ್ಥೆ ಮಾಡಿದೆ. ಎಲ್ಲರಿಗೂ ಪಾಸ್ ಕೊಡಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಪಾಸ್ ದುರುಪಯೋಗ, ನಿಯಮವನ್ನು ಉಲ್ಲಂಘನೆ ಮಾಡುವುದು ಕಂಡು ಬಂದಲ್ಲಿ ತತ್‌ಕ್ಷಣ ಮೀನುಗಾರಿಕೆ ಸ್ಥಗಿತಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗುವುದು.
– ಕೃಷ್ಣ ಎಸ್.ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರ ಸಂಘ
ಜೂನ್15ರವರೆಗೆ ಅವಕಾಶಕ್ಕಾಗಿ ಬೇಡಿಕೆ
ಈ ಋತುವಿನಲ್ಲಿ 5 ತಿಂಗಳು ಮಾತ್ರ ಮೀನುಗಾರಿಕೆ ನಡೆದಿತ್ತು. ಜೂನ್ 30ರ ವರೆಗೆ ಹೆಚ್ಚುವರಿ ಅವಧಿ ಮೀನುಗಾರಿಕೆ ಅವಕಾಶ ನೀಡಬೇಕೆಂದು ಈಗಾಗಲೇ ಸರಕಾರಕ್ಕೆ ಒತ್ತಡವನ್ನು ತಂದಿದೇªವೆ. ಕನಿಷ್ಠ ಜೂ. 15ರವರೆಗಾದರೂ ಸರಕಾರ ನಮಗೆ ಅವಕಾಶ ನೀಡಬೇಕು.
-ಸುಭಾಸ್ ಮೆಂಡನ್,
ಮೀನುಗಾರ ಸಂಘದ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.