ಒಮಾನ್‌ಗೆ ಬಂದು ತಪ್ಪು ಮಾಡಿದೆನೇನೋ ಅನಿಸಿತ್ತು: ಅಚಂತ ಶರತ್‌ ಕಮಲ್‌

Team Udayavani, Mar 17, 2020, 6:36 AM IST

ಒಮಾನ್‌ಗೆ ಬಂದು ತಪ್ಪು ಮಾಡಿದೆನೇನೋ ಅನಿಸಿತ್ತು: ಅಚಂತ ಶರತ್‌ ಕಮಲ್‌

ಮಸ್ಕತ್‌ (ಒಮಾನ್‌): ಅಕಸ್ಮಾತ್‌ ಕೊರೊನಾ ಭೀತಿಯಿಂದ “ಒಮಾನ್‌ ಓಪನ್‌’ ಟೇಬಲ್‌ ಟೆನಿಸ್‌ ಕೂಟ ನಡೆಯದೇ ಹೋಗಿದ್ದರೆ, ಅಥವಾ ಇದರಲ್ಲಿ ಪಾಲ್ಗೊಳ್ಳದೆ ಹೋಗಿದ್ದರೆ ತನಗೆ ಇದರಿಂದ ಭಾರೀ ನಷ್ಟವಾಗುತ್ತಿತ್ತು ಎಂದು ಅಚಂತ ಶರತ್‌ ಕಮಲ್‌ ಹೇಳಿದ್ದಾರೆ. ರವಿವಾರ ರಾತ್ರಿ ಇಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಬಳಿಕ ಅವರು ಇಂಥದೊಂದು ಹೇಳಿಕೆ ನೀಡಿದ್ದಾರೆ.

ತಾನು ಮಸ್ಕತ್‌ಗೆ ಆಗಮಿಸಿ ದೊಡ್ಡ ತಪ್ಪು ಮಾಡಿದೆನೇನೋ ಎಂಬ ಚಿಂತೆಯಲ್ಲಿದ್ದ ಶರತ್‌ಗೆ ಈಗ ದೊಡ್ಡದೊಂದು ರಿಲೀಫ್ ಸಿಕ್ಕಿದೆ. ಸೋಮವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್‌ಗೆ ಒಳಗಾದ ಬಳಿಕ ಅವರು ತಮ್ಮ ಕುಟುಂಬವನ್ನು ಸೇರಿಕೊಂಡರು.

ಚಿಂತೆ ಎದುರಾಗಿತ್ತು…
“ಕೊರೊನಾ ಕಾರಣದಿಂದ ಇದೇ ಅವಧಿಯಲ್ಲಿ ನಡೆಯಬೇಕಿದ್ದ ಪೋಲಿಶ್‌ ಓಪನ್‌ ಟೇಬಲ್‌ ಟೆನಿಸ್‌ ಕೂಟ ರದ್ದುಗೊಂಡ ಸುದ್ದಿ ತಿಳಿಯಿತು. ಆಗ ನಾನು ಮಸ್ಕತ್‌ಗೆ ಆಗಮಿಸಿಯಾಗಿತ್ತು. ಇಲ್ಲಿಗೆ ಬಂದು ತಪ್ಪು ಮಾಡಿದೆನೇನೋ ಅನಿಸಿತ್ತು. ನನಗೆ ಆಗ ಕುಟುಂಬದ ಚಿಂತೆ ಕಾಡಿತ್ತು. ಅವರಿಗೆ ನನ್ನ ಚಿಂತೆ ಎದುರಾಗಿತ್ತು. ಆದರೆ ನಾನು ಗಟ್ಟಿ ಮನಸ್ಸು ಮಾಡಿ ಗಮನವನ್ನೆಲ್ಲ ಆಟದಲ್ಲಿ ತೊಡಗಿಸಿಕೊಂಡೆ. ಹೀಗಾಗಿ ಪ್ರಶಸ್ತಿ ಎತ್ತಲು ಸಾಧ್ಯವಾಯಿತು’ ಎಂದು ಚೆನ್ನೈಗೆ ಬಂದ ಬಳಿಕ ಅವರು ಮಾಧ್ಯಮದವರಲ್ಲಿ ಹೇಳಿಕೊಂಡರು.

“ಇದು ಒಲಿಂಪಿಕ್ಸ್‌ ಅರ್ಹತಾ ಕಾರಣಕ್ಕಾಗಿ ನನಗೆ ಮಹತ್ವದ ಕೂಟವಾಗಿತ್ತು. ಆದರೆ ಈಗ ಎಲ್ಲ ಕೂಟಗಳೂ ರದ್ದಾಗಿವೆ. ಹೀಗಾಗಿ ಗೆಲುವಿನ ಸಂಭ್ರಮವನ್ನು ಹೇಗೆ ಆಚರಿಸಬೇಕೆಂಬುದೇ ತಿಳಿಯದು’ ಎಂದಿದ್ದಾರೆ ಶರತ್‌ ಕಮಲ್‌.
“ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಗಳು ಅತ್ಯಂತ ಕಠಿನವಾಗಿದ್ದವು.

ಫೈನಲ್‌ ಎದುರಾಳಿ ಫ್ರೀಟಸ್‌ ಜತೆ ಅಭ್ಯಾಸ ನಡೆಸುತ್ತಿದ್ದಾಗಲೆಲ್ಲ ನಾನು ಸೋಲುತ್ತಿದ್ದೆ. ಫೋರ್‌ಹ್ಯಾಂಡ್‌ ಆಟ ನನ್ನ ಹೆಚ್ಚುಗಾರಿಕೆಯಾಗಿತ್ತು. ಫ್ರೀಟಸ್‌ ನನ್ನ ಬ್ಯಾಕ್‌ಹ್ಯಾಂಡ್‌ನ‌ತ್ತ ಗಮನ ನೀಡಿದರು. ಹೀಗಾಗಿ ಗೆಲುವು ಸಾಧ್ಯವಾಯಿತು’ ಎಂದು ಶರತ್‌ ಕಮಲ್‌ ಅಭಿಪ್ರಾಯಪಟ್ಟರು.

ದಶಕದ ಬಳಿಕ ಪ್ರಶಸ್ತಿ
ರವಿವಾರ ರಾತ್ರಿ ಮಸ್ಕತ್‌ನಲ್ಲಿ ನಡೆದ “ಒಮಾನ್‌ ಓಪನ್‌’ ಫೈನಲ್‌ನಲ್ಲಿ ಅವರು ಪೋರ್ಚುಗೀಸ್‌ನ ಮಾರ್ಕೋಸ್‌ ಫ್ರೀಟಸ್‌ ವಿರುದ್ಧ 6-11, 11-8, 12-10, 11-9, 3-11, 17-15 ಅಂತರದ ರೋಚಕ ಜಯ ಸಾಧಿಸಿದರು.

ಅಚಂತ ಶರತ್‌ ಕಮಲ್‌ 2010ರ ಬಳಿಕ ಗೆದ್ದ ಮೊದಲ ಜಾಗತಿಕ ಟಿಟಿ ಪ್ರಶಸ್ತಿ ಇದಾಗಿದೆ. ಅಂದು ಅವರು ಈಜಿಪ್ಟ್ ಓಪನ್‌ ಚಾಂಪಿಯನ್‌ ಆಗಿದ್ದರು. ಅನಂತರ 2 ವಿಶ್ವ ಕೂಟಗಳಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದೇ ಅವರ ಅತ್ಯುತ್ತಮ ಸಾಧನೆಯಾಗಿತ್ತು. 2011ರ ಮೊರೊಕ್ಕೊ ಓಪನ್‌ ಮತ್ತು 2017ರ ಇಂಡಿಯಾ ಓಪನ್‌ ಪಂದ್ಯಾವಳಿಯಲ್ಲಿ ಅವರು ಉಪಾಂತ್ಯದಲ್ಲಿ ಪರಾಭವಗೊಂಡಿದ್ದರು.
4ನೇ ಶ್ರೇಯಾಂಕದ ಶರತ್‌ ಸೆಮಿಫೈನಲ್‌ನಲ್ಲಿ ರಶ್ಯದ ಕಿರಿಲ್‌ ಸ್ಕಶೊRàವ್‌ ವಿರುದ್ಧ 2 ಗೇಮ್‌ಗಳ ಹಿನ್ನಡೆಯ ಬಳಿಕವೂ ಗೆದ್ದು ಬಂದಿದ್ದರು.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.