ಮಾನಸಿಕ ಆರೋಗ್ಯದ ಸಮತೋಲನದಿಂದ ಸಾಧನೆ ಸಾಧ್ಯ: ಡಾ| ಡಿ. ವೀರೇಂದ್ರ ಹೆಗ್ಗಡೆ
ಅರ್ಕುಳದಲ್ಲಿ ಡಾ| ತುಂಗಾಸ್ ಮನಸ್ವಿನಿ ಆಸ್ಪತ್ರೆ ಉದ್ಘಾಟನೆ
Team Udayavani, Jun 9, 2024, 11:25 PM IST
ಬಂಟ್ವಾಳ: ಆಧ್ಯಾತ್ಮಿಕ ಜ್ಞಾನ ಮನುಷ್ಯನ ವ್ಯಕ್ತಿತ್ವವನ್ನು ಶುದ್ಧ ಮಾಡಲಿದ್ದು, ಮಾನಸಿಕ ಆರೋಗ್ಯದ ಅಸಮತೋಲನವನ್ನು ಸರಿಪಡಿಸಿದಾಗ ಸಾಧನೆ ಮಾಡಲು ಅನುಕೂಲವಾಗುತ್ತದೆ. ಧರ್ಮಸ್ಥಳ ಕ್ಷೇತ್ರದ ವತಿಯಿಂದ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ವೇದಿಕೆ ಸ್ಥಾಪನೆ, ಮದ್ಯವರ್ಜನ ಶಿಬಿರಗಳನ್ನು ಆರಂಭಿಸಿದಾಗ ಡಾ| ರವೀಶ ತುಂಗ ಸಾಕಷ್ಟು ಪ್ರೇರಣೆ ನೀಡಿದ್ದರು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ರವಿವಾರ ಫರಂಗಿಪೇಟೆಯ ಅರ್ಕುಳದಲ್ಲಿ ಮಾನಸಿಕ ರೋಗ ಚಿಕಿತ್ಸಾ ತಜ್ಞ ಡಾ| ರವೀಶ ತುಂಗ ಐರೋಡಿ ನೇತೃತ್ವದ ಡಾ| ತುಂಗಾಸ್ ಮನಸ್ವಿನಿ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ವ್ಯಕ್ತಿಯು ದೈಹಿಕವಾಗಿ ಸದೃಢನಾಗುವ ಜತೆಗೆ
ಮಾನಸಿಕವಾಗಿಯೂ ಸದೃಢನಾಗಬೇಕು. ನಾನು ಆರೋಗ್ಯ ಸಚಿವನಾಗಿದ್ದಾಗ ಮಾನಸಿಕ ಆರೋಗ್ಯ ಸೇವೆಗೆ ವಿಶೇಷ ಗಮನ ನೀಡಿದ್ದೆ ಎಂದರು.
ಮುಖ್ಯಅತಿಥಿಗಳಾಗಿ ತಮಿಳು ನಾಡಿನ ಮಾಜಿ ಆರೋಗ್ಯ ಸಚಿವ ಡಾ| ಎಚ್.ವಿ. ಹಂದೆ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಶಾಸಕರಾದ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ. ರಮಾನಾಥ ರೈ, ಪಲ್ಸ್ ಪೋಲಿಯೊ ಅಂತಾರಾಷ್ಟ್ರೀಯ ನಿರ್ದೇಶಕ ಡಾ| ಪಿ. ನಾರಾಯಣ, ಮಾನಸಿಕ ಆರೋಗ್ಯದ ಉಪನಿರ್ದೇಶಕಿ ಡಾ| ರಜನಿ ಪಾರ್ಥಸಾರಥಿ, ಮಂಗಳೂರು ವಿನಯ ಆಸ್ಪತ್ರೆಯ ನಿರ್ದೇಶಕ ಡಾ| ಹನ್ಸರಾಜ್ ಆಳ್ವ, ಮಂಗಳೂರು ವೈಟ್‌ಡೌಸ್‌ನ ನಿರ್ದೇಶಕ ಫಾ| ಆಲ್ವಿನ್ ಡಿಕುನ್ಹಾ, ದ.ಕ. ಡಿಎಚ್‌ಒ ಡಾ| ಎಚ್.ಆರ್.ತಿಮ್ಮಯ್ಯ, ಟಿಎಚ್‌ಒ ಡಾ| ಸುಜಯ ಭಂಡಾರಿ, ಮಾನಸಿಕ ಆರೋಗ್ಯದ ಸಂಯೋಜಕ ಡಾ| ಸುದರ್ಶನ್, ಪ್ರಮುಖರಾದ ಕೆ. ಕೃಷ್ಣಕುಮಾರ್ ಪೂಂಜ, ಉಮ್ಮರ್ ಫಾರೂಕ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ರವೀಂದ್ರ ಕಂಬಳಿ, ಸುರೇಂದ್ರ ಕಂಬಳಿ, ರಶೀದಾ ಬಾನು, ಅಬ್ದುಲ್ ಜಲೀಲ್, ಶಿವಪ್ಪ ಸುವರ್ಣ, ರಮ್ಲಾನ್ ಮಾರಿಪಳ್ಳ, ವೃಂದಾ ಪೂಜಾರಿ ಭಾಗವಹಿಸಿದ್ದರು.
ಅಂತಾರಾಷ್ಟ್ರೀಯ ಒಪ್ಪಂದ
ಆಸ್ಪತ್ರೆಯ ಅಧ್ಯಕ್ಷ ಡಾ| ರವೀಶ ತುಂಗ ಹಾಗೂ ಹೊಸದಿಲ್ಲಿಯ ಲ್ಯಾಟಿನ್ ಅಮೆರಿಕನ್ ಕ್ಯಾರಿಬಿನ್ ಟ್ರೇಡ್ ಕೌನ್ಸಿಲ್‌ನ ಟ್ರೇಡ್ ಕಮಿಷನರ್ ಡಾ| ಸೆನೊರಿಟಾ ಐಸಾಕ್ ಅವರು ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿದರು. ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಹಾಗೂ ಆಸ್ಪತ್ರೆಯ ನಿರ್ಮಾಣಕ್ಕೆ ದುಡಿದವರನ್ನು ಸಮ್ಮಾನಿಸಲಾಯಿತು.
ಆಸ್ಪತ್ರೆಯ ಉಪಾಧ್ಯಕ್ಷೆ ಡಾ| ಸುಚಿತ್ರಾ ತುಂಗ, ಕೋಶಾಧಿಕಾರಿ ಎ. ವಿಶ್ವನಾಥ ತುಂಗ, ಕಾರ್ಯದರ್ಶಿ ನಾಗರಾಜ ತುಂಗ, ಟ್ರಸ್ಟಿ ಪ್ರೇರಣಾ ತುಂಗ, ವೈದ್ಯಕೀಯ ಅಧೀಕ್ಷಕ ಡಾ| ಅನಿರುದ್ಧ ಶೆಟ್ಟಿ ಉಪಸ್ಥಿತರಿದ್ದರು. ಆಸ್ಪತ್ರೆಯ ಅಧ್ಯಕ್ಷ ಡಾ| ರವೀಶ್ ತುಂಗ ಸ್ವಾಗತಿಸಿದರು. ಸುಮಂಗಲಾ ತುಂಗಾ ವಂದಿಸಿದರು. ಪ್ರಸನ್ನ ಹಾಗೂ ಲವಿಟಾ ಅವರು ಕಾರ್ಯಕ್ರಮ ನಿರ್ವಹಿಸಿದರು.
ಒಳ್ಳೆಯ ಸಂಸ್ಕಾರದಿಂದ ಸಮೃದ್ಧಿ
ಕರಿಂಜೆ ಶ್ರೀ ಜಗದ್ಗುರು ರಾಘವೇಂದ್ರ ಪೀಠದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ವ್ಯಕ್ತಿಗೆ ಒಳ್ಳೆಯ ಸಂಸ್ಕಾರ ಸಿಕ್ಕಾಗ ಸಮೃದ್ಧಿಯ ಜತೆಗೆ ಉತ್ತಮ ಆರೋಗ್ಯ ಸಿಗಲಿದ್ದು, ಪ್ರಕೃತಿಗೆ ಪೂರಕವಾಗಿ ನಿರ್ಮಾಣಗೊಂಡ ಮನಸ್ವಿನಿ ಆಸ್ಪತ್ರೆಯು ಅಮೃತ ಕಲಶದಂತೆ ಶೋಭಿಸುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.