Dakshina Kannada; ಪೋಡಿ ಮುಕ್ತ ಗ್ರಾಮ ಅಭಿಯಾನಕ್ಕೆ ಕ್ರಿಯಾ ಯೋಜನೆ: ಜಿಲ್ಲಾಧಿಕಾರಿ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತ ಮುಖಂಡರ ಸಭೆ

Team Udayavani, Aug 14, 2024, 12:57 AM IST

Dakshina Kannada; ಪೋಡಿ ಮುಕ್ತ ಗ್ರಾಮ ಅಭಿಯಾನಕ್ಕೆ ಕ್ರಿಯಾ ಯೋಜನೆ: ಜಿಲ್ಲಾಧಿಕಾರಿ

ಮಂಗಳೂರು: ದ.ಕ.ಜಿಲ್ಲೆಯನ್ನು ಪೋಡಿ (ಅಳತೆ) ಮುಕ್ತವಾಗಿ ಮಾಡುವ ದಿಶೆಯಲ್ಲಿ ಶೀಘ್ರವೇ ಒಂದು ಗ್ರಾಮವನ್ನು ಪ್ರಾಯೋಗಿಕವಾಗಿ ತೆಗೆದುಕೊಳ್ಳಮುಲ್ಲೈ ಮುಗಿಲನ್‌ ತಿಳಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ರೈತ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದ.ಕ. ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಸ್ತಿಗಳ ಕ್ರಮಬದ್ಧ ಅಳತೆ (ಪೋಡಿ)ಆಗುತ್ತಿಲ್ಲ. ಸಾಕಷ್ಟು ಅರ್ಜಿಗಳು ಬಾಕಿಯಾಗಿವೆ ಎಂಬ ದೂರು ಇವೆ. ಆಸ್ತಿಗಳ ಪ್ಲಾಟಿಂಗ್‌ ಆಗದಿರುವುದೇ ಜಿಲ್ಲೆಯ ದೊಡ್ಡ ಸಮಸ್ಯೆ. ಶೇ.90ರಷ್ಟು ಆಸ್ತಿಗಳು ಬಳುವಳಿಯಿಂದ ಬಂದಿ ರುತ್ತವೆ. ಇವುಗಳನ್ನು ಹಿಡುವಳಿ ದಾರರು ಅಳತೆ ಮಾಡಿಸದೆ ಬಾಕಿ ಇರಿಸಿದ್ದಾರೆ. ಏಕಮುಕ್ತಿ ಪೋಡಿ ಬದಲು ಸಂಪೂರ್ಣ ಜಮೀನು ಅಳತೆಗೆ ಅವಕಾಶ ನೀಡುತ್ತಿಲ್ಲ. ಒಮ್ಮೆ ಅಳತೆ ಮಾಡಿಸಿದರೆ ಮತ್ತೆ ಸಮಸ್ಯೆ ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತುಂಬೆ ಡ್ಯಾಂ: 15 ದಿನಗಳಲ್ಲಿ ಪರಿಹಾರ ಒದಗಿಸಲು ಸೂಚನೆ
ತುಂಬೆ ವೆಂಟೆಡ್‌ ಡ್ಯಾಂ ಅಣೆಕಟ್ಟನ್ನು 4 ಮೀಟರ್‌ನಿಂದ 6 ಮೀಟರ್‌ವರೆಗೆ ಏರಿಕೆ ಮಾಡುವ ಸಂದರ್ಭ ಮುಳುಗಡೆ ಯಾಗುವ ಭೂಮಿಯ ಪರಿಹಾರ ಬಾಕಿ ಇರುವ ಬಗ್ಗೆ ರೈತರು ಸಭೆಯಲ್ಲಿ ಗಮನ ಸೆಳೆದಾಗ, ಸಂತ್ರಸ್ತರಿಗೆ ಪ್ರಕರಣವಾರು ಚರ್ಚಿಸಿ ಮುಂದಿನ 15 ದಿನಗಳಲ್ಲಿ ಸಮಸ್ಯೆ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ಮನಪಾ ಭೂಸ್ವಾಧೀನ ಅಧಿಕಾರಿ ರವಿ ಕುಮಾರ್‌ ಮಾತನಾಡಿ, 5ರಿಂದ 6 ಮೀ. ಏರಿಕೆಯ ವೇಳೆ ಮುಳುಗಡೆಯಾಗುವ ಒಟ್ಟು ಭೂಮಿಗೆ 14.88 ಕೋಟಿ ರೂ. ಪರಿಹಾರ ನಿಗದಿಪಡಿಸಿ 8.26 ಕೋಟಿ ರೂ. ಪರಿಹಾರವನ್ನು ದಾಖಲೆ ಸರಿ ಇದ್ದ ರೈತರಿಗೆ ವಿತರಿಸಲಾಗಿದೆ. ಕೆಲವರ ದಾಖಲೆ ಸರಿ ಇಲ್ಲದೆ ಪರಿಹಾರ ನೀಡಲು ಬಾಕಿಯಾಗಿದೆ ಎಂದರು.
ಅಡಿಕೆಗೆ ಬೆಂಬಲ ಬೆಲೆ ಕುರಿತಂತೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸ ಲಾಗುವುದು ಎಂದು ಡಿಸಿ ಹೇಳಿದರು.

ಶುಲ್ಕ ರಹಿತ ಆಧಾರ್‌ ಲಿಂಕ್‌
ಕೃಷಿ ಪಂಪುಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಮಾಡಿಲ್ಲ. ಆದರೂ ಮೆಸ್ಕಾಂ ನವರು ಕೃಷಿ ಪಂಪ್‌ಸೆಟ್‌ಗೆ ಆಧಾರ್‌ ಲಿಂಕ್‌ ಕಡ್ಡಾಯ ಗೊಳಿಸಿರುವುದು ಖಂಡನೀಯ. ಆಧಾರ್‌ ಲಿಂಕ್‌ಗೆ ಕೆಲವೆಡೆ 500 ರೂ. ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ದರು.

ಜಿಲ್ಲಾಧಿಕಾರಿ ಮಾತನಾಡಿ, ಆಧಾರ್‌ ಲಿಂಕ್‌ಗೆ ಶುಲ್ಕ ವಸೂಲಿ ಅನಗತ್ಯ ಎಂದು ತಿಳಿಸಿದರು. ಈ ನಡುವೆ ಮೆಸ್ಕಾಂ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆಧಾರ್‌ ಜೋಡಣೆ ಕಾರ್ಯ ಪ್ರಗತಿಯಲ್ಲಿದೆ. ಆದರೆ ಇದಕ್ಕೆ ಮೆಸ್ಕಾಂ ಯಾವುದೇ ಶುಲ್ಕ ವಿಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ರೈತ ಮುಖಂಡರಾದ ಶ್ರೀಧರ ಶೆಟ್ಟಿ ಬೈಲುಗುತ್ತು, ರವಿಕಿರಣ ಪುಣಚ, ಮನೋಹರ ಶೆಟ್ಟಿ, ಭಾರತೀಯ ಕಿಸಾನ್‌ ಸಂಘ ಪುತ್ತೂರು ಅಧ್ಯಕ್ಷ ಸುಬ್ರಾಯ ಶೆಟ್ಟಿ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ರೈತರ ಅಹವಾಲುಗಳು
– ಹೊರ ರಾಜ್ಯ-ದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಅಡಿಕೆಯನ್ನು ನಮ್ಮ ಜಿಲ್ಲೆಯ ಉತ್ತಮ ಗುಣಮಟ್ಟದ ಅಡಿಕೆಯ ಜತೆ ಕಲಬೆರಕೆ ಮಾಡಿಕೊಂಡು ಹೊರ ದೇಶಗಳಿಗೆ ರಫ್ತು ಮಾಡುವ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು.
-ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಜಲವಿದ್ಯುತ್‌ ಯೋಜನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು.
-ದ.ಕ.ಜಿಲ್ಲೆಯ ಅರಣ್ಯದಂಚಿನ ಗ್ರಾಮಗಳಲ್ಲಿ ಮಂಗನ ಹಾವಳಿ ವಿಪರೀತವಾಗಿವೆ. ಆದ್ದರಿಂದ “ಮಂಕಿ ಪಾರ್ಕ್‌’ ಸ್ಥಾಪನೆಯಾಗಬೇಕು. ಮಂಗನ ಉಪಟಳದಿಂದ ಬೆಳೆ ಹಾನಿಗೆ ಒಳಗಾದರೆ ಸೂಕ್ತ ಪರಿಹಾರ ನೀಡಬೇಕು.
– ರೈತರ ಕೋವಿಗೆ ಈ ಹಿಂದಿನಂತೆ ತಾಲೂಕು ಮಟ್ಟದಲ್ಲೇ ತಹಶೀಲ್ದಾರ್‌ರಿಂದ ಒಪ್ಪಿಗೆ ಸಿಗಬೇಕು.

ವಿದ್ಯುತ್‌ ಲೈನ್‌ಗೆ ವಿರೋಧ
ಉಡುಪಿಯ ಯುಪಿಸಿಎಲ್‌ನಿಂದ ಕಾಸರಗೋಡಿಗೆ 440 ಕೆ.ವಿ. ವಿದ್ಯುತ್‌ ಲೈನ್‌ ಅಳವಡಿಕೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಯೋಜನೆಯನ್ನು ಬೇಕಿದ್ದರೆ, ಸಮುದ್ರ ಮಾರ್ಗ, ಹೆದ್ದಾರಿ ಅಥವಾ ರೈಲ್ವೇ ಮಾರ್ಗದ ಮೂಲಕ ಮಾಡಲಿ ಎಂದು ಸಭೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡರು ವಿರೋಧಿಸಿದರು.

ಡಿಸಿಯವರು ಮಾತನಾಡಿ, ಇದು ಸರಕಾರದ ಯೋಜನೆ ಯಾಗಿದೆ. ರೈತರ ಹೋರಾಟಕ್ಕೆ ವಿರೋಧವಿಲ್ಲ. ಆದರೆ ರೈತರ ಸಮಸ್ಯೆಗಳನ್ನು ಅರಿತು ಅದಕ್ಕೆ ಪರಿಹಾರ ಕಂಡುಕೊಳ್ಳುವ ಯೋಜನೆಯನ್ನು ಕೈಗೆತ್ತಿ ಗೊಂಡಿರುವ ಸಂಸ್ಥೆಯ ಜತೆ ಚರ್ಚೆ ನಡೆಸಲು ಸಭೆಯ ವ್ಯವಸ್ಥೆ ಮಾಡುತ್ತೇನೆ ಎಂದರು.

ಟಾಪ್ ನ್ಯೂಸ್

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

ssa

Mangaluru: ಮಾದಕವಸ್ತು ಸಹಿತ ಮೂವರ ಬಂಧನ

bjpMangaluru City Corporation: ಸೆ.19ರಂದು ಮೇಯರ್‌, ಉಪ ಮೇಯರ್‌ ಚುನಾವಣೆ

Mangaluru City Corporation: ಸೆ.19ರಂದು ಮೇಯರ್‌, ಉಪ ಮೇಯರ್‌ ಚುನಾವಣೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.