Actor ಧ್ರುವ ಸರ್ಜಾ ಮ್ಯಾನೇಜರ್ ಬಂಧನ; ಏನಿದು ಪ್ರಕರಣ?
Team Udayavani, Sep 11, 2024, 8:31 AM IST
ಬೆಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಟ ಧ್ರುವ ಸರ್ಜಾ(Dhruva Sarja) ಮ್ಯಾನೇಜರ್ ಅಶ್ವಿನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಟ ಧ್ರುವ ಸರ್ಜಾಗೆ ಆಪ್ತರಾಗಿರುವ, ಜಿಮ್ ತರಬೇತುದಾರ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಅಶ್ವಿನ್‌ನನ್ನು ಬಂಧಿಸಲಾಗಿದೆ.
ಮೇ 26 ರಂದು ಕನಕಪುರ ಮೂಲದ ಹರ್ಷ ಹಾಗೂ ಸುಭಾಷ್ ಎಂಬುವರು ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ಮಾಡಿದ್ದರು. ದೂರಿನ ಬಳಿಕ ಅವರಿಬ್ಬರನ್ನು ಬಂಧಿಸಲಾಗಿತ್ತು. ತನಿಖೆ ವೇಳೆ ಹಲ್ಲೆ ಹಿಂದಿನ ಮಾಸ್ಟರ್ ಮೈಂಡ್ ನಟ ಧ್ರುವ ಸರ್ಜಾ ಮ್ಯಾನೇಜರ್ ಆಗಿರುವ ಅಶ್ವಿನ್ ಎಂಬುದು ಗೊತ್ತಾಗಿದೆ.
ಹಲ್ಲೆಗೊಳಗಾದ ಪ್ರಶಾಂತ್ ಪೂಜಾರಿ ಕೂಡ ಧ್ರುವ ಸರ್ಜಾಗೆ ಜಿಮ್ ಟ್ರೈನರ್ ಆಗಿದ್ದರು. ಧ್ರುವ ಅವರಿಗೆ ಪ್ರಶಾಂತ್ ಒಳ್ಳೆತನ ಕಂಡು ದುಬಾರಿ ಬೆಲೆಯ ಕಾರನ್ನು ಗಿಫ್ಟ್ ಕೊಟ್ಟಿದ್ದರು. ಇದರಿಂದ ಅಸೂಯೆಗೊಂಡ ಅಶ್ವಿನ್ ಧ್ರುವ ಜತೆಗಿನ ಆತ್ಮೀಯತೆ ಮುರಿಯಬೇಕು ಎಂದು ನಿರ್ಧರಿಸಿ ಧ್ರುವ ಕಾರು ಚಾಲಕನ ಜತೆ ಸೇರಿ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ
Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.