ಬಡ್ಡೀಸ್‌ಗೆ ಸಿರಿ ನಾಯಕಿ : ಶಿಕಾರಿ ಹುಡುಗಿಯ ಸಿನಿಶಿಕಾರಿ
Team Udayavani, Jan 12, 2021, 1:23 PM IST
“ಕಿನ್ನರಿ’, “ಕನ್ನಡತಿ’ ಮೊದಲಾದ ಧಾರವಾಹಿಗಳಲ್ಲಿ ಮುಖ್ಯ ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದ ಕಿರಣ್ ರಾಜ್
“ಬಡ್ಡೀಸ್’ ಚಿತ್ರದ ಮೂಲಕ ನಾಯಕ ನಟನಾಗಿ ಪರಿಚಯವಾಗುತ್ತಿರೋದು ನಿಮಗೆ ಗೊತ್ತೇ ಇದೆ.
ಇತ್ತೀಚೆಗಷ್ಟೇ ಈ ಚಿತ್ರದ ಟೈಟಲ್ ಅನ್ನು ಸಿನಿಮಾ ಪಿಆರ್ ಓಗಳು ಸೇರಿ ಬಿಡುಗಡೆ ಮಾಡಿದ್ದರು. ಈಗ ಈ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ಆಕೆ ಸಿರಿ ಪ್ರಹ್ಲಾದ್. ಈ ಹಿಂದೆ “ಒಂದು ಶಿಕಾರಿಯ ಕಥೆ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ, ಸಿರಿ ಈಗ “ಬಡ್ಡೀಸ್’ ಚಿತ್ರಕ್ಕೆ ನಾಯಕಿಯಾಗಿದ್ದಾರೆ.
ಈ ಹಿಂದೆ ತುಳು ಚಿತ್ರವೊಂದನ್ನು ನಿರ್ಮಿಸಿದ್ದ ರಾಮಕೃಷ್ಣ ಶೆಟ್ಟಿ ಹಾಗೂ ಭಾರತಿ ಶೆಟ್ಟಿ “ತವಿಶ್ ಎಂಟರ್‌ಪ್ರೈಸರ್’
ಬ್ಯಾನರ್ ಅಡಿಯಲ್ಲಿ “ಬಡ್ಡೀಸ್’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕನ್ನಡದ ಹಲವು ಚಿತ್ರಗಳಿಗೆ ಸಂಭಾಷಣೆಕಾರ ಹಾಗೂ ಬರಹಗಾರನಾಗಿ ಕೆಲಸ ಮಾಡಿರುವ, ಈ ಹಿಂದೆ “5ಜಿ’ ಚಿತ್ರವನ್ನು ನಿರ್ದೇಶಿಸಿದ್ದ ಗುರುವೇಂದ್ರ ಶೆಟ್ಟಿ ಈ ಚಿತ್ರವನ್ನು
ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ:ರಿಯಲ್ ಹೀರೋ ವೀರಪ್ಪ : ವೃತ್ತಿ, ರೈಲ್ವೆ ಸಹಾಯಕ ಪ್ರವೃತ್ತಿ ಶಿಕ್ಷಕ!
ಹೆಸರೇ ಹೇಳುವಂತೆ “ಬಡ್ಡೀಸ್’ ಆತ್ಮೀಯ ಸ್ನೇಹಿತರ ಕಥೆಯನ್ನು ಹೊಂದಿದ ಚಿತ್ರವಾಗಿದ್ದು, ಸ್ನೇಹದ ಮಹತ್ವವನ್ನು ಮನರಂಜನಾತ್ಮಕವಾಗಿ ಚಿತ್ರಕಥೆಯಲ್ಲಿ ಹೇಳಲಾಗಿದೆ ಎಂದಿದೆ ಚಿತ್ರತಂಡ. ಸದ್ಯ “ಬಡ್ಡೀಸ್’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರೀಕರಣಕ್ಕೆ ಅಣಿಯಾಗಿದೆ. ಚಿತ್ರಕ್ಕೆ ನಿಭಾ ಶೆಟ್ಟಿ ಛಾಯಾಗ್ರಹಣವಿದೆ. ಈ ಮೂಲಕ ಛಾಯಾಗ್ರಾಹಕಿಯೊಬ್ಬರು ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಂತಾಗುತ್ತದೆ. ಜ್ಯೂಡಾ ಸ್ಯಾಂಡಿ ಸಂಗೀತವಿದೆ.
ಉಳಿದಂತೆ ಗೋಪಾಲ್ ದೇಶಪಾಂಡೆ, ಅರವಿಂದ್ ಬೋಳಾರ್ ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.