Ram Mandir: “ಟೆಂಟ್‌ನೊಳಗೆ ಬೊಂಬೆ ಇಟ್ಟು ರಾಮ ಅಂದಿದ್ರು” ಎಂಬ ಹೇಳಿಕೆಗೆ ಬದ್ಧ: ರಾಜಣ್ಣ

ರಾವಣ ಅಂತ ಅನಿಸಿಕೊಳ್ಳಲೂ ಸಿದ್ಧ- ಅವನಂತ ದೈವ ಭಕ್ತ ಯಾರೂ ಇರಲಿಲ್ಲ

Team Udayavani, Jan 19, 2024, 10:54 PM IST

rajanna

ತುಮಕೂರು (ಗ್ರಾಮಾಂತರ): “ಬಾಬ್ರಿ ಮಸೀದಿ ಬೀಳಿಸಿದಾಗ ನಾನೂ ಹೋಗಿದ್ದೆ. ಟೆಂಟ್‌ನೊಳಗೆ ಬೊಂಬೆ ಇಟ್ಟು ರಾಮ ಅಂದಿದ್ರು’ ಎಂಬ ಹೇಳಿಕೆಗೆ ನಾನು ಬದ್ಧ ಎಂದು ಸಚಿವ ಕೆ.ಎನ್‌.ರಾಜಣ್ಣ ಸ್ಪಷ್ಟಪಡಿಸಿದರು.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, 90ರ ದಶಕದಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದಾಗ, ನಾನು ಭೇಟಿ ಕೊಟ್ಟಾಗ ಕಂಡ ಚಿತ್ರಣವನ್ನು ಅವತ್ತು ಹೇಳಿಕೊಂಡಿದ್ದೇನೆ ಅಷ್ಟೇ. ಬೊಂಬೆಯನ್ನು ದೇವರು ಅಂತಾ ಹೇಳಿದ್ರೆ ಏನು ತಪ್ಪು? ಬೊಂಬೆಯಲ್ಲಿ ದೈವತ್ವ ಇರೋದಿಲ್ವ ಎಂದು ಪ್ರಶ್ನೆ ಮಾಡಿದರು.

ರಾವಣ ಎನಿಸಿಕೊಳ್ಳಲು ಸಿದ್ಧ
ಬಿಜೆಪಿಯವರು ನನ್ನನ್ನು ರಾವಣ ಎಂದಿದ್ದಾರೆ. ಅದರಿಂದ ನನಗೆ ಬೇಸರವಿಲ್ಲ. ರಾವಣ ಎನಿಸಿಕೊಳ್ಳಲು ಸಿದ್ಧನಿದ್ದೇನೆ. ಅವನಂಥ ದೈವ ಭಕ್ತ ಯಾರೂ ಇರಲಿಲ್ಲ. ಇವರೆಲ್ಲ ಡೋಂಗಿ ದೈವ ಭಕ್ತರು. ಹಿಂದೆ ಅಣ್ಣಾದೊರೈ ರಾಮಾಯಣಕ್ಕೆ ಬದಲಾಗಿ ರಾವಯಾಣಾವಣ ನಾಟಕ ಆಡಿದ್ರು. ಈ ನಾಟಕದಲ್ಲಿ ರಾವಣ ಸೀತೆ ಮೇಲೆ ಬಲಾತ್ಕಾರ ಮಾಡುವುದಿಲ್ಲ. ಇದು ರಾವಣನ ದೊಡ್ಡ ಗುಣ ಅಲ್ವೇ ಎಂದು ಪ್ರಶ್ನಿಸಿದರು.

ಸಚಿವ ಕೆ.ಎನ್‌.ರಾಜಣ್ಣ ವಾಲ್ಮೀಕಿ ಸಮಾಜದವರು. ಆ ಸಮುದಾಯಕ್ಕೆ ಸೇರಿದವರು ರಾಮನ ಬಗ್ಗೆ ಗೌರವ ಭಾವವನ್ನು ಎದೆಗೂಡಿನಲ್ಲಿ ಇಟ್ಟುಕೊಂಡಿರುತ್ತಾರೆ ಎಂದು ಭಾವಿಸಿದ್ದೆ. ಆದರೆ ಟಿಪ್ಪು ಜಯಂತಿ ಆಚರಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಓಲೈಸಿ ಡಿಸಿಎಂ ಸ್ಥಾನ ಪಡೆಯಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ಅವರಿಗೆ ಉತ್ತರ ನೀಡುತ್ತಾರೆ.     -ಪ್ರತಾಪ ಸಿಂಹ, ಸಂಸದ

ರಾಜಣ್ಣರದ್ದು ವೈಯಕ್ತಿಕ ಹೇಳಿಕೆ: ಸಚಿವ ನಾಗೇಂದ್ರ
ಬಳ್ಳಾರಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಂಬಂಧ ಸಚಿವ ರಾಜಣ್ಣ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದು ಸಚಿವ ಬಿ.ನಾಗೇಂದ್ರ ಸಮರ್ಥಿಸಿಕೊಂಡರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಯನ್ನು ಕೇಂದ್ರ ಸರಕಾರ ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಅನಿಸುತ್ತಿದೆ. ಹಾಗೆ ಸಚಿವ ರಾಜಣ್ಣ ಅವರಿಗೆ ಅಯೋಧ್ಯೆಗೆ ಹೋದಾಗ ಕಂಪನ ಆಗಿಲ್ಲದಿರ ಬಹುದು. ನನಗೆ ದೇವಸ್ಥಾನಕ್ಕೆ ಹೋದಾಗ ಕಂಪನ ಆಗುತ್ತದೆ. ಅವರಿಗೆ ಆಗಿಲ್ಲ. ಅದರಲ್ಲಿ ತಪ್ಪೇನಿದೆ. ಹಾಗಂತ ರಾಜಣ್ಣ ಅವರು ರಾಮ ಮಂದಿರವನ್ನು ನಿಂದನೆ ಮಾಡಿದಂತಲ್ಲ ಎಂದರು.

ಸದ್ಯ ನನ್ನ ಕಲ್ಪನೆಯ ಮಂದಿರ ಬೇರೆ ಇದೆ ಎಂದ ಸಚಿವ ನಾಗೇಂದ್ರ ಅವರು, ನಮ್ಮ ಕಲ್ಪನೆಗೆ ಮೀರಿದ ರೀತಿಯಲ್ಲಿ ಮಂದಿರ ಇದ್ದರೆ ಚೆನ್ನಾಗಿರುತ್ತದೆ. ಇಲ್ಲ ಎಂದರೆ ಹಾಗೆ ಅನಿಸುತ್ತದೆ. ನಮ್ಮ ಸರಕಾರ ಇದ್ದರೆ ಇನ್ನು ಅದ್ದೂರಿಯಾಗಿ ಉದ್ಘಾಟನೆ ಮಾಡುತ್ತಿದ್ದೆವು ಎಂದು ತಿಳಿಸಿದರು.

ಟಾಪ್ ನ್ಯೂಸ್

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.