Aditya L-1: ರವಿಮರ್ಮ ಅರಿಯಲು- ಭುವಿಯಿಂದ ಭಾನುವಿನ ಕಡೆಗೆ ಆದಿತ್ಯನ ಪ್ರವಾಸ ಆರಂಭ…
Team Udayavani, Sep 2, 2023, 11:57 PM IST
ಸೂರ್ಯ ಒಂದು ನಕ್ಷತ್ರ. ಇದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಇದುವರೆಗೆ ನಮಗೆ ಸೂರ್ಯ ದೂರದರ್ಶಕಗಳಲ್ಲಿ ಮಾತ್ರ ಕಾಣಿಸುತ್ತಿದ್ದ. ಹಾಗೆಯೇ, ಅಮೆರಿಕ, ಇಂಗ್ಲೆಂಡ್, ಐರೋಪ್ಯ ಒಕ್ಕೂಟ, ಜಪಾನ್ ದೇಶಗಳು ಸೂರ್ಯನ ಕುರಿತಾಗಿ ಅಧ್ಯಯನ ಮಾಡಿ ಸಂಗ್ರಹಿಸಿದ್ದ ಮಾಹಿತಿಗಳನ್ನೇ ನಾವೂ ಅವಲಂಬಿಸಬೇಕಾಗಿತ್ತು. ಹೀಗಾಗಿಯೇ, ಈಗ ಇಸ್ರೋ ವಿಜ್ಞಾನಿಗಳು ನೇರವಾಗಿ ಸೂರ್ಯನ ಅಧ್ಯಯನಕ್ಕೆ ಇಳಿದಿದ್ದಾರೆ. ಶನಿವಾರ ಬೆಳಗ್ಗೆ ಆದಿತ್ಯ-ಎಲ…1 ಹೊತ್ತ ರಾಕೆಟ್ ಉಡ್ಡಯನ ಮಾಡಿದ್ದಾರೆ.
ಎಲೈಟ್ ಕ್ಲಬ್‌ಗ ಭಾರತ
ಶನಿವಾರ ಉಡಾವಣೆಯಾದ ಆದಿತ್ಯ-ಎಲ್ 1 ಮಿಷನ್‌ನಿಂದಾಗಿ ಸೂರ್ಯನನ್ನು ಅಧ್ಯ ಯನ ಮಾಡಲು ಶೋಧಕಗಳನ್ನು ಕಳುಹಿ ಸಿದ ರಾಷ್ಟ್ರಗಳ ಗಣ್ಯ ಗುಂಪಿಗೆ ಭಾರತವೂ ಸೇರಿತು. ಈ ಹಿಂದೆ ಉಪಗ್ರಹಗಳನ್ನು ಬಳಸಿಕೊಂಡು ಸೂರ್ಯನನ್ನು ಅಧ್ಯಯನ ಮಾಡಲು ಪ್ರಯೋಗಗಳನ್ನು ನಡೆಸಿದ್ದರೆ, ಬಾಹ್ಯಾಕಾಶದ “ಎಲ್ 1′ ಸ್ಥಳದಲ್ಲಿ ವೀಕ್ಷಣಾಲಯವನ್ನು ನಿಲ್ಲಿಸುವ ಗುರಿಯನ್ನು ಹೊಂದಿರುವ ಆದಿತ್ಯ -ಎಲ್ 1 ದೇಶದ ಮೊದಲ ಸೂರ್ಯನಿಗೇ ಮೀಸಲಾದ ಸೌರ ಮಿಷನ್ ಆಗಿದೆ. ಆಸ್ಟ್ರೋಸ್ಯಾಟ್ (2015) ನಂತರ ಆದಿತ್ಯ-ಎಲ್ 1 ಇಸ್ರೋದ 2ನೇ ಖಗೋಳ ವೀಕ್ಷಣಾಲಯ ವರ್ಗದ ಕಾರ್ಯಾಚರಣೆಯಾಗಿದೆ.
ವಿಶೇಷ ಕಾರ್ಯಾಚರಣೆ
ಇದುವರೆಗೆ ಭಾರತವು ನೆಲ ಆಧಾರಿತ ದೂರದರ್ಶಕಗಳನ್ನು ಮಾತ್ರ ಬಳಸಿಕೊಂಡು ಸೂರ್ಯನನ್ನು ಗಮನಿಸುತ್ತಿತ್ತು. ಈಗ ಇದು ಹಳೆಯದಾಗಿದ್ದು, ದೊಡ್ಡ ಪ್ರಮಾಣದ ಆಧು ನಿಕ ವೀಕ್ಷಣಾ ಸೌಲಭ್ಯದ ಕೊರತೆಯಿಂದಾಗಿ, ಸೌರ ದತ್ತಾಂಶಕ್ಕಾಗಿ ನಾವು ಇತರ ಮೂಲಗಳನ್ನು ಅವಲಂಬಿಸಿದ್ದೇವೆ. ಆದಿತ್ಯ-ಎಲ್ 1 ಸೌರ ಭೌತಶಾಸ್ತ್ರದಲ್ಲಿ ಬಗೆಹರಿಸಲಾಗದ ಸಮಸ್ಯೆಗಳನ್ನು ಪರಿಹರಿಸಲು ಹೊಸ ಡೇಟಾದೊಂದಿಗೆ ಪೂರಕವಾದ ಅನನ್ಯ ಅವಕಾಶವನ್ನು ಒದಗಿಸುತ್ತದೆ ಎಂದು ನೈನಿತಾಲ್‌ನಲ್ಲಿರುವ ಆರ್ಯಭಟ ರಿಸರ್ಚ್ ಇನ್ ಸ್ಟಿಟ್ಯೂಟ್ ಆಫ್ ಅಬ್ಸರ್ವೇಷನಲ್ ಸೈನ್ಸ್‌ನ ನಿರ್ದೇಶಕ ಪೊ›ಫೆಸರ್ ದೀಪಂಕರ್ ಬ್ಯಾನರ್ಜಿ ಹೇಳಿದ್ದಾರೆ.
ಬಾಹ್ಯಾಕಾಶದಲ್ಲಿ ಕಣ್ಣುಗಳು
ಸೌರ ಜ್ವಾಲೆಗಳು, ಕರೋನಲ್ ಮಾಸ್ ಎಜೆಕ್ಷನ್ ಅಥವಾ ಭೂಮಿಯ ಕಡೆಗೆ ನಿರ್ದೇಶಿಸಲಾದ ಸೌರ ಮಾರುತಗಳ ರೂಪದಲ್ಲಿನ ಅಡಚಣೆಗಳು ಬಾಹ್ಯಾಕಾಶ ಹವಾಮಾನದ ಮೇಲೆ ಪ್ರತಿಕೂಲ ಪರಿಣಾಮ ಬೀರಬ ಹುದು; ಆದ್ದರಿಂದ ಸೂರ್ಯನ ಅಧ್ಯಯನ ಅತ್ಯಂತ ಮಹತ್ವದ್ದಾಗಿದೆ. ಕ್ಷ-ಕಿರಣ, ಆಪ್ಟಿಕಲ್ ಮತ್ತು ಯುವಿ ಸ್ಪೆಕ್ಟ್ರಲ್ ಬ್ಯಾಂಡ್‌ಗಳಲ್ಲಿ ಆಕಾಶ ಮೂಲಗಳನ್ನು ಏಕಕಾ ಲದಲ್ಲಿ ಅಧ್ಯಯನ ಮಾಡುವ ಗುರಿ ಹೊಂದಿರುವ ಭಾರತದ ಮೊದಲ ಮೀಸಲಾದ ಖಗೋಳಶಾಸ್ತ್ರ ಮಿಷನ್ ಆಸ್ಟ್ರೋಸ್ಯಾಟ್ ಉಡಾವಣೆಯಾದ ಸುಮಾರು 8 ವರ್ಷಗಳ ನಂತರವೂ ಕಾರ್ಯನಿರ್ವಹಿ ಸುತ್ತಿದ್ದರೆ, ಆದಿತ್ಯ-ಎಲ್ 1 ಭವಿಷ್ಯದ ಖಗೋಳಶಾಸ್ತ್ರ ಕಾರ್ಯಾಚರಣೆಗಳಿಗೆ ದಾರಿ ಮಾಡಿಕೊಡುತ್ತದೆ.
1,475 ಕೆಜಿ ತೂಕದ ಆದಿತ್ಯ-ಎಲ್ 1 ಏಳು ಪೇಲೋ ಡ್‌ಗಳನ್ನು ಹೊತ್ತೂಯ್ಯಲಿದ್ದು, ಅವುಗಳಲ್ಲಿ 4 ನೇರ ವಾಗಿ ಸೂರ್ಯನ ಬಗ್ಗೆ ಅಧ್ಯಯನ ಮಾಡಿದರೆ, ಇತರ 3 ಎಲ್ 1 ಬಿಂದುವಿನಲ್ಲಿ ಮತ್ತು ಸುತ್ತಮುತ್ತಲಿನ ಕಣ ಗಳು ಮತ್ತು ಕಾಂತೀಯ ಕ್ಷೇತ್ರಗಳ ಸೈಟ್ ಅಧ್ಯಯನ ನಡೆಸುತ್ತವೆ. ಇದರಲ್ಲಿನ 4 ರಿಮೋಟ್ ಸೆನ್ಸಿಂಗ್ ಉಪಕರಣಗಳು ಸೌರ ಮೂಲಗಳನ್ನು ಶೋಧಿಸುತ್ತವೆ. ಈ ಮಿಷನ್‌ನಿಂದಾಗಿ ಸೌರಸ್ಫೋಟ, ಜ್ವಾಲೆಗಳ ಮೂಲ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ.
ಬಾಹ್ಯಾಕಾಶ ಹವಾಮಾನ ಎಚ್ಚರಿಕೆಗಳು
ದೂರಸಂಪರ್ಕ, ಮೊಬೈಲ್ ಆಧಾರಿತ ಇಂಟರ್ನೆಟ್ ಸೇವೆ, ನ್ಯಾವಿಗೇಷನ್, ಪರ್ವ ಗ್ರಿಡ್‌ಗಳು ಮುಂತಾದ ಉಪಗ್ರಹ-ಅವಲಂಬಿತ ಕಾರ್ಯಾಚರಣೆಗಳ ವ್ಯಾಪ್ತಿಯನ್ನು ರಕ್ಷಿಸಲು ಸಹಾಯ ಮಾಡುವ ಬಳಕೆದಾರ ಸ್ನೇಹಿ ಮಾಹಿತಿ ಉತ್ಪಾದಿಸಲು ಮಿಷನ್ ಆಶಿಸಿದೆ. ಒಮ್ಮೆ ಪರೀಕ್ಷಿಸಿದ ನಂತರ, ಡೇಟಾದಿಂದ ಪಡೆದ ಮಾಹಿತಿಯನ್ನು ಬಾಹ್ಯಾಕಾಶ ಹವಾಮಾನ ಎಚ್ಚರಿಕೆಗಳನ್ನು ನೀಡಲು ಬಳಸಬಹುದು.
ಆದಿತ್ಯ ಎಲ್ -1ನ ಉದ್ದೇಶಗಳೇನು?
ಸೂರ್ಯನ ಬಗ್ಗೆ ನಮ್ಮ ಜ್ಞಾನದ ವಿಸ್ತರಣೆ, ಅದರ ವಿಕಿರಣ, ಶಾಖ, ಕಣಗಳ ಹರಿವು ಮತ್ತು ಕಾಂತೀಯ ಕ್ಷೇತ್ರಗಳು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಅಧ್ಯಯನವು ಈ ಮಿಷನ್‌ನ ಮುಖ್ಯ ಉದ್ದೇಶ. ಇದರ ಇತರೆ ಉದ್ದೇಶಗಳ ಪಟ್ಟಿ ಈ ಕೆಳಗಿನಂತಿದೆ:
ವರ್ಣಗೋಳ ಮತ್ತು ಕರೋನಾ ಎಂದು ಕರೆಯಲ್ಪಡುವ ಸೂರ್ಯನ ಮೇಲಿನ ವಾತಾವರಣದ ಪದರಗಳನ್ನು ಅಧ್ಯಯನ ಮಾಡುವುದು. ಕರೋನಾ ಅತ್ಯಂತ ಹೊರಗಿನ ಪದರವಾಗಿದ್ದರೂ, ವರ್ಣಗೋಳವು ಅದರ ಕೆಳಗೆ ಇದೆ.
ಸೂರ್ಯನ ಕರೋನಾದಿಂದ ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಹೊರಹಾಕುವ ಕರೋನಲ್ ಮಾಸ್ ಎಜೆಕ್ಷನ್ (ಸಿಎಮ…ಇ)ನ ಪರೀಕ್ಷೆ.
ಕರೋನಾದ ಕಾಂತೀಯ ಕ್ಷೇತ್ರ ಮತ್ತು ಬಾಹ್ಯಾಕಾಶ ಹವಾಮಾನದ ಚಾಲಕದ ವಿಶ್ಲೇಷಣೆ.
ಸೂರ್ಯನ ಮೇಲ್ಮೆçಯಲ್ಲಿ ತಾಪಮಾನವು ಕೇವಲ 5,500 ಡಿಗ್ರಿ ಸೆಲ್ಸಿಯಸ್ ಇರುವಾಗ ಸೂರ್ಯನ ಅಷ್ಟು ಪ್ರಕಾಶಮಾನವಲ್ಲದ ಕರೋನಾ ಏಕೆ ಮಿಲಿಯನ್ ಡಿಗ್ರಿ ಸೆಲ್ಸಿಯಸ್ ಬಿಸಿಯಾಗಿರುತ್ತದೆ ಎಂಬುದರ ಅಧ್ಯಯನ.
ಸೌರ ಮಾರುತಕ್ಕೆ ಕಾರಣವಾಗುವ ಸೂರ್ಯನ ಮೇಲೆ ಕಣಗಳ ವೇಗೋತ್ಕರ್ಷದ ಹಿಂದಿನ ಕಾರಣಗಳನ್ನು ತಿಳಿಯಲು ಈ ಮಿಷನ್ ಕೈಗೊಳ್ಳಲಾಗಿದೆ.
ಬೆ.11.50 ಆದಿತ್ಯ ಎಲ್-1 ಹೊತ್ತ ಪಿಎಸ್‌ಎಲ್‌ವಿ -ಸಿ57 ರಾಕೆಟ್ ಉಡಾವಣೆಗೆ ಅಂತಿಮ ಕ್ಷಣಗಣನೆ.
ಬೆ.11.52 ಶ್ರೀಹರಿಕೋಟದಿಂದ ಆದಿತ್ಯ-ಎಲ್1 ಯಶಸ್ವಿ ಉಡಾವಣೆ
ಬೆ.11.58 ರಾಕೆಟ್‌ನ ಮೊದಲ ಹಂತದ ಬೇರ್ಪಡಿಸುವಿಕೆ ಯಶಸ್ವಿ. ಪ್ರತ್ಯೇಕಗೊಂಡ ಹೀಟ್ ಶೀಲ್ಡ್
ಮ.12.01ರಾಕೆಟ್‌ನಿಂದ ಬೇರ್ಪಟ್ಟ ಮೂರನೇ ಹಂತ.
ಮ.12.04 ಭೂಮಿಯ ವಾತಾವರಣದಿಂದ ಹೊರಪ್ರವೇಶಿಸಿದ ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆ ಒಳಗೊಂಡ ಪೇಲೋಡ್
ಮ.12.55 ರಾಕೆಟ್‌ನ ಸ್ಟೇಜ್ 4 ಬೇರ್ಪಡುವ ಮೂಲಕ ಉಡಾವಣೆಯ ಪ್ರಮುಖ ಹಂತಗಳು ಪೂರ್ಣ ಎಂದು ಘೋಷಣೆ.
ಸೂರ್ಯನ ಬಗ್ಗೆ ನಿಮಗೆಷ್ಟು ಗೊತ್ತು?
ಸೂರ್ಯ ಎಂದರೇ ಸೌರವ್ಯೂಹ
ಸೌರವ್ಯೂಹದಲ್ಲಿ ನಾವು ಸಮಾನ ಸದಸ್ಯರಲ್ಲ. ಏಕೆಂದರೆ, ಸೂರ್ಯನ ದ್ರವ್ಯರಾಶಿ ಸೌರವ್ಯೂಹದ ದ್ರವ್ಯರಾಶಿಯ ಶೇ.99.8ರಷ್ಟಿದ್ದರೆ, ಶೇ.0.2ರಷ್ಟು ಗುರುವಿನಿಂದ ಬರುತ್ತದೆ. ಆದರೆ, ಭೂಮಿಯ ದ್ರವ್ಯರಾಶಿ ಸೌರವ್ಯೂಹದ ದ್ರವ್ಯರಾಶಿಯ ಒಂದು ಭಾಗದಲ್ಲಿ ಒಂದು ಭಾಗ. ಹೀಗಾಗಿ, ನಾವು ತೀರಾ ಕಡಿಮೆ ಎಂಬ ರೂಪದಲ್ಲಿ ಅಲ್ಲಿ ಅಸ್ತಿತ್ವದಲ್ಲಿದ್ದೇವೆ.
ಹೈಡ್ರೋಜನ್ ಮತ್ತು ಹೀಲಿಯಂ ಹೆಚ್ಚು
ಸೂರ್ಯನನ್ನು ಬೇರ್ಪಡಿಸಿ ಅದರ ವಿವಿಧ ಮೂಲವಸ್ತುಗಳನ್ನು ರಾಶಿ ಹಾಕಿದರೆ, ಅದರ ದ್ರವ್ಯರಾಶಿಯ ಶೇ.74 ಹೈಡ್ರೋಜನ್ ನಿಂದ ಬರುತ್ತದೆ. ಶೇ.24 ಹೀಲಿಯಂನೊಂದಿಗೆ. ಉಳಿದ ಶೇ.2 ಕಬ್ಬಿಣ, ನಿಕ್ಕಲ…, ಆಕ್ಸಿಜನ್ ಮತ್ತು ಸೌರವ್ಯೂಹದಲ್ಲಿನ ಇತರ ಎಲ್ಲಾ ಅಂಶಗಳನ್ನು ಒಳಗೊಂಡಿದೆ.
ಸೂರ್ಯ ಪ್ರಕಾಶಮಾನ
ಎಟಾ ಕ್ಯಾರಿನಾ ಮತ್ತು ಬೆಟೆಲೌಸ್ ಎಂಬ ಪ್ರಕಾಶಮಾನ ನಕ್ಷತ್ರಗಳ ಬಗ್ಗೆ ಕೇಳಿರಬಹುದು. ಇವು ದೊಡ್ಡವು ಮತ್ತು ತುಂಬಾ ಪ್ರಕಾಶಮಾನವಾಗಿವೆ. ಆದರೆ ಇವು ಪರಿಗಣನೆಗೆ ತೆಗೆದುಕೊಳ್ಳಲಾಗದಷ್ಟು ದೂರದಲ್ಲಿವೆ. ಹೀಗಾಗಿ ಹತ್ತಿರದಲ್ಲಿರುವ ಸೂರ್ಯನೇ ನಮಗೆ ಹೆಚ್ಚು ಪ್ರಕಾಶಮಾನ.
ಸೂರ್ಯ ದೊಡ್ಡ ನಕ್ಷತ್ರ
ಭೂಮಿಯ ಗಾತ್ರಕ್ಕಿಂತ 109 ಪಟ್ಟು ವ್ಯಾಸವನ್ನು ಹೊಂದಿರುವ ಸೂರ್ಯನು ನಿಜವಾಗಿಯೂ ದೊಡ್ಡ ನಕ್ಷತ್ರ. ಸೂರ್ಯನೊಳಗೆ 1.3 ಮಿಲಿಯನ್ ಭೂಮಿಯನ್ನು ಹೊಂದಿಸಬಹುದು. ಆದರೆ ಕೆಲವು ನಕ್ಷತ್ರಗಳಿಗೆ ಹೋಲಿಕೆ ಮಾಡಿದರೆ, ಸೂರ್ಯ ತುಂಬಾ ಚಿಕ್ಕದೇ ಆಗಿದೆ.
ಸೂರ್ಯ ಮಧ್ಯವಯಸ್ಕ
ಖಗೋಳಶಾಸ್ತ್ರಜ್ಞರು ಸೂರ್ಯ (ಮತ್ತು ಗ್ರಹಗಳು) ಸುಮಾರು 4.59 ಬಿಲಿಯನ್ ವರ್ಷಗಳ ಹಿಂದೆ ಸೌರ ನೆಬ್ಯುಲಾದಿಂದ ರೂಪುಗೊಂಡಿದ್ದಾನೆ ಎಂದಿದ್ದಾರೆ. ಸೂರ್ಯನು ಈಗ ಮುಖ್ಯ ಅನುಕ್ರಮದ ಹಂತದಲ್ಲಿದ್ದು, ನಿಧಾನವಾಗಿ ತನ್ನ ಹೈಡ್ರೋಜನ್ ಇಂಧನ ಬಳಸುತ್ತಿದ್ದಾನೆ. ಮುಂದಿನ 5 ಶತಕೋಟಿ ವರ್ಷಗಳಲ್ಲಿ, ಸೂರ್ಯ ಕೆಂಪು ದೈತ್ಯ ಹಂತ ಪ್ರವೇಶಿಸುತ್ತಾನೆ.
ಸೂರ್ಯನಲ್ಲಿ ಪದರಗಳಿವೆ
ಸೂರ್ಯ ಉರಿಯುತ್ತಿರುವ ಬೆಂಕಿಯ ಚೆಂಡಿನಂತೆ ಕಾಣುತ್ತಾನೆ. ಆದರೆ ವಾಸ್ತವವಾಗಿ ಆಂತರಿಕ ರಚನೆಯನ್ನು ಹೊಂದಿದೆ. ನಾವು ನೋಡಬಹುದಾದ ಗೋಚರ ಮೇಲ್ಮೆçಯನ್ನು ದ್ಯುತಿಗೋಳ ಎಂದು ಕರೆಯಲಾಗುತ್ತದೆ. ಸುಮಾರು 6,000 ಡಿಗ್ರಿ ಕೆಲ್ವಿನ್ ತಾಪಮಾನದವರೆಗೆ ಬಿಸಿಯಾಗುತ್ತದೆ. ಅದರ ಕೆಳಗೆ ಸಂವೇದನಾ ವಲಯವಿದೆ, ಅಲ್ಲಿ ಶಾಖವು ಆಂತರಿಕ ಸೂರ್ಯನಿಂದ ಮೇಲ್ಮೆçಗೆ ನಿಧಾನವಾಗಿ ಚಲಿಸುತ್ತದೆ.
ಎಲ್ 1 ಮತ್ತು ಅನಂತರ
ಇಲ್ಲಿಂದ ಎಲ್1ಗೆ 1.5 ದಶಲಕ್ಷ ಕಿ.ಮೀ. ದೂರವಿದ್ದು, ಈ ಗುರಿ ಮುಟ್ಟಲು ಆದಿತ್ಯ-ಎಲ್ 1 ಸುಮಾರು 100 ದಿನ ಪ್ರಯಾಣಿಸಲಿದೆ. 2014ರಲ್ಲಿ ಮಂಗಳನ ಕಕ್ಷೆಯನ್ನು ತಲುಪಲು ಇಸ್ರೋ ನೌಕೆ 298 ದಿನ ತೆಗೆದುಕೊಂಡಿದ್ದರೆ, ಈಗ ಅದಕ್ಕಿಂತಲೂ ಕಡಿಮೆ ಸಮಯದಲ್ಲಿ ಸೂರ್ಯನ ಹತ್ತಿ ರಕ್ಕೆ ಹೋಗಲಾಗುತ್ತಿದೆ. ಚಂದ್ರಯಾನ -3 ಮಿಷನ್‌ನಂತೆ, ಆದಿತ್ಯ-ಎಲ್ 1 ಸಹ ಹಂತ ಹಂತವಾಗಿ ಕಕ್ಷೆ ಎತ್ತರಿಸುವ ಪ್ರಕ್ರಿಯೆಗೆ ಒಳಗಾಗುತ್ತದೆ. ಅನಂತರ ಭೂಮಿ ಕಕ್ಷೆಯಿಂದ ನಿರ್ಗಮಿಸಲಿದೆ.
ಆರು ಪೇ ಲೋಡ್‌ಗಳು
ಮಿಷನ್‌ನಲ್ಲಿ 6 ಪೇಲೋಡ್‌ಗಳಿವೆ. ಅವುಗಳೆಂದರೆ ವಿಇಎಲ್ ಸಿ, ಸೂಟ್, ಸೋಲೆಕ್ಸ್, ಎಚ್‌ಇಎಲ್ 1ಒಎಸ್, ಪಿಎಪಿಎ ಮತ್ತು ಮ್ಯಾಗ್. 2024 ಜ.6ರವರೆಗೆ ಇವೆಲ್ಲವೂ “ಆಫ್’ ಮೋಡ್‌ನಲ್ಲಿ ಉಳಿಯುತ್ತವೆ. ಅಂದರೆ ಈ ಜ.6ರಂದು ನೌಕೆಯು ಹ್ಯಾಲೋ ಆರ್ಬಿಟ್‌ಗೆ ಪ್ರವೇಶಿಸಲಿದೆ. ಭೌತಿಕ ಸಂಶೋಧನಾ ಪ್ರಯೋಗಾಲಯವು ನಿರ್ಮಿಸಿದ ಆದಿತ್ಯ ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪೆರಿಮೆಂಟ್(ಎಎಸ್ಪಿಇಎಕ್ಸ್) ಮಾತ್ರ ಸಂಚರಿಸುವಾಗಲೇ ಆನ್ ಆಗುತ್ತದೆ. ನೇರಳಾತೀತ ಬ್ಯಾಂಡ್‌ನ 200-400 ನ್ಯಾನೊಮೀಟರ್‌ನಲ್ಲಿ ಸೂರ್ಯನನ್ನು ಚಿತ್ರಿಸಲು ವಿನ್ಯಾಸಗೊಳಿಸಲಾದ ಸೂಟ್‌ನ ಇಮೇಜರ್ 11 ಫಿಲ್ಟರ್‌ಗಳ ಮೂಲಕ ಸೂರ್ಯನ ಚಿತ್ರಗಳನ್ನು ತೆಗೆಯಲಾಗುತ್ತದೆ. ಈ ಪದರಗಳ ಸೂಟ್‌ನ ಚಿತ್ರಗಳು ಸೂರ್ಯನ ತತ್‌ಕ್ಷಣದ ವಾತಾವರಣದ ಬಗ್ಗೆ ನಮ್ಮ ತಿಳಿವಳಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. 2024ರ ಆರಂಭದಲ್ಲಿ, ವಿಜ್ಞಾನಿಗಳು ಗುಣಮಟ್ಟದ ವೈಜ್ಞಾ ನಿಕ ಡೇಟಾ ಸಿಗಲು ಪ್ರಾರಂಭಿಸುವ ಮೊದಲು ಉಪಕರಣಗಳನ್ನು ಮಾಪನಾಂಕ ಮಾಡಲು 2-3 ತಿಂಗಳ ಕಾಲ ಸರಣಿ ಪ್ರಯೋಗ ನಡೆಸಲು ಸಾಧ್ಯವಾಗುತ್ತದೆ ಎಂಬ ಭರವಸೆ ವ್ಯಕ್ತಪಡಿಸಿ¨ªಾರೆ.
ಎಲ್ 1: ಮಿಷನ್ ಗಮ್ಯಸ್ಥಾನ
ಬಾಹ್ಯಾಕಾಶ ನೌಕೆಯು ತನ್ನನ್ನು ತಾನು ನಿಲ್ಲಿಸುವ ಸೂರ್ಯ ಮತ್ತು ಭೂಮಿಯ ನಡುವಿನ ಸ್ಥಳವನ್ನು ಎಲ್ 1, ಅಥವಾ ಲ್ಯಾಗ್ರೇಂಜ್ ಪಾಯಿಂಟ್ 1 ಎಂದು ಕರೆಯಲಾಗುತ್ತದೆ. ಇದು ಬಾಹ್ಯಾಕಾಶದಲ್ಲಿ ಚಲಿಸುವ ಯಾವುದೇ ಎರಡು-ಆಕಾಶಕಾಯಗಳ ನಡುವೆ ಅಸ್ತಿತ್ವದಲ್ಲಿರುವ ಐದು ಲ್ಯಾಗ್ರೇಂಜ್ ಬಿಂದುಗಳಲ್ಲಿ ಒಂದಾಗಿದೆ. ಈ ಮಿಷನ್ ಅನ್ನು “ಆದಿತ್ಯ-ಎಲ್ 1′ ಎಂದು ಕರೆಯಲು ಈ ಗಮ್ಯಸ್ಥಾನವೇ ಕಾರಣ.
ಈ ಐದು ಬಿಂದುಗಳಿಗೆ ಲ್ಯಾಂಗ್ರೇಂಜ್ ಎಂಬ ಹೆಸರು ಬರಲು ಕಾರಣವೂ ಇದೆ. ಇವುಗಳನ್ನು ಖ್ಯಾತ ಗಣಿತಜ್ಞ ಜೋಸಿಫಿ ಲೂಯಿಸ್ ಲ್ಯಾಗೇಗ್ರೇಂಜ್ ಅವರು ಕಂಡು ಹಿಡಿದರು. ಅವರ ನೆನಪಿನಲ್ಲಿಯೇ ಇವುಗಳಿಗೆ ಹೆಸರಿಸಲಾಯಿತು.
ಆದಿತ್ಯ ಎಲ್-1 ಅನ್ನು ಲ್ಯಾಗ್ರೇಂಜ್ ಬಿಂದುವಿನಲ್ಲಿ ನಿಲ್ಲಿಸುವುದಕ್ಕೂ ಕಾರಣ ಇದೆ. ಇಲ್ಲಿ ಅಂತರಿಕ್ಷ ವೀಕ್ಷಣಾಲಯಕ್ಕೆ ಕೇವಲ ಉಳಿಯಲು ಮತ್ತು ನಿರಂತರ ವೀಕ್ಷಣೆಗಳನ್ನು ಮಾಡಲು ಬಹಳ ಕಡಿಮೆ ಶಕ್ತಿ ಬೇಕಾಗುತ್ತದೆ. ಬೇರೆ ಯಾವುದೇ ಸ್ಥಳದಲ್ಲಿ ನಿಲ್ಲಿಸಬೇಕಾದರೆ ವೀಕ್ಷಣಾಲಯಕ್ಕೆ ಹೆಚ್ಚುವರಿ ಶಕ್ತಿ ಬೇಕು. ಜತೆಗೆ ಭೂಮಿ ಮತ್ತು ಸೂರ್ಯ ಎರಡಕ್ಕೂ ಹೋಲಿಸಿದರೆ ಸ್ಥಿರವಾಗಿ ಉಳಿಯಲು ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ.
ಐದು ಬಿಂದುಗಳಲ್ಲಿ ಕೇವಲ ಎಲ್1 ಮಾತ್ರ ಏಕೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಏಕೆಂದರೆ, ಎಲ್ 1ರಲ್ಲಿ ಸೂರ್ಯನನ್ನು ಅಡೆತಡೆಯಿಲ್ಲದೆ ನೋಡ ಬಹುದು. ಎಲ್ 2 ಭೂಮಿಯ ಹಿಂದೆ ಇದ್ದು, ಸೂರ್ಯನ ನೋಟವನ್ನು ತಡೆಯುತ್ತದೆ. ಆದರೆ ಎಲ್ 3 ಸೂರ್ಯನ ಹಿಂದೆ ಇದ್ದು, ಭೂಮಿಯೊಂದಿಗೆ ಸಂವಹನ ನಡೆಸಲು ಉತ್ತಮ ಸ್ಥಾನವಲ್ಲ. ಎಲ್4 ಮತ್ತು ಎಲ್ 5 ಉತ್ತಮ ಮತ್ತು ಸ್ಥಿರ ಸ್ಥಳಗಳಾಗಿದ್ದರೂ, ಎಲ್ 1ಗೆ ಹೋಲಿಸಿದರೆ ಭೂಮಿಯಿಂದ ಬಹಳ ದೂರದಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.