Aditya-L1: ಸೌರ ಮಾರುತ ಕಣಗಳ ಅಧ್ಯಯನ ಆರಂಭ
- ಆದಿತ್ಯ-ಎಲ್1 ನೌಕೆಯ ಪೇಲೋಡ್ ಕಾರ್ಯಾಚರಣೆ ಆರಂಭ
Team Udayavani, Dec 2, 2023, 10:20 PM IST
ಹೊಸದಿಲ್ಲಿ: ಸೂರ್ಯನ ಅಧ್ಯಯನಕ್ಕೆಂದು ಸತತ 3 ತಿಂಗಳ ಕಾಲ ದೀರ್ಘ ಪಯಣ ಬೆಳೆಸಿದ್ದ ಭಾರತದ ಆದಿತ್ಯ-ಎಲ್1 ನೌಕೆಯು ಶನಿವಾರ ಮಹತ್ವದ ಮೈಲುಗಲ್ಲನ್ನು ಸಾಧಿಸಿದ್ದು, ಸೌರ ಮಾರುತಗಳ ಅಧ್ಯಯನ ಆರಂಭಿಸಿದೆ.
ಆದಿತ್ಯ ಎಲ್1 ನೌಕೆಯಲ್ಲಿರುವ ಆದಿತ್ಯ ಸೌರ ಮಾರುತ ಕಣಗಳ ಪ್ರಯೋಗದ ಪೇಲೋಡ್(ಎಎಸ್‌ಪಿಇಎಕ್ಸ್) ತನ್ನ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಇಡೀ ವ್ಯವಸ್ಥೆ ಸುಸ್ಥಿತಿಯಲ್ಲಿದೆ ಎಂದು ಇಸ್ರೋ ತಿಳಿಸಿದೆ.
ಅಯಾನುಗಳನ್ನು ಅಳೆದ ಸ್ವಿಸ್
ಎಎಸ್‌ಪಿಇಎಕ್ಸ್ ಒಟ್ಟು ಎರಡು ಸಾಧನಗಳನ್ನು ಒಳಗೊಂಡಿದೆ. ಅವೆಂದರೆ ಸೋಲಾರ್ ವಿಂಡ್ ಅಯಾನ್ ಸ್ಪೆಕ್ಟ್ರೋಮೀಟರ್(ಸ್ವಿಸ್) ಮತ್ತು ಸುಪ್ರಾ ಥರ್ಮಲ್ ಆ್ಯಂಡ್ ಎನರ್ಜೆಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್(ಸ್ಟೆಪ್ಸ್). ಈ ಪೈಕಿ ಸ್ಟೆಪ್ಸ್ ಸಾಧನವು ಸೆ.10ರಂದೇ ತನ್ನ ಕಾರ್ಯಾಚರಣೆ ಆರಂಭಿಸಿದ್ದರೆ ಸ್ವಿಸ್ ಸಾಧನವು ಶನಿವಾರ ಸಕ್ರಿಯಗೊಂಡಿದ್ದು, ಅತ್ಯುತ್ತಮ ಕಾರ್ಯಕ್ಷಮತೆಯನ್ನು ತೋರಿದೆ. ಈ ಸಾಧನವು ಸೌರ ಮಾರುತದ ಅಯಾನುಗಳನ್ನು ಅಂದರೆ ಪ್ರೊಟಾನುಗಳು ಮತ್ತು ಆಲ್ಫಾ ಕಣಗಳನ್ನು ಯಶಸ್ವಿಯಾಗಿ ಅಳೆದಿದೆ.
ಇದರಿಂದಾಗಿ ಸೌರ ಮಾರುತದ ಕಣಗಳ ವರ್ತನೆಯ ಸಮಗ್ರ ಚಿತ್ರಣವನ್ನು ಪಡೆಯಲು ಸಾಧ್ಯವಾಗಲಿದೆ. ಜತೆಗೆ ಸೌರ ಮಾರುತದ ಗುಣಲಕ್ಷಣಗಳು, ಅಂತರ್ಗತ ಪ್ರಕ್ರಿಯೆಗಳು ಹಾಗೂ ಭೂಮಿಯ ಮೇಲೆ ಅವುಗಳ ಪ್ರಭಾವದ ಕುರಿತ ದೀರ್ಘಕಾಲದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ಗಮನಾರ್ಹ ಕೊಡುಗೆಯನ್ನು ಇದು ನೀಡಲಿದೆ ಎಂದು ಇಸ್ರೋ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
MUST WATCH
ಹೊಸ ಸೇರ್ಪಡೆ
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.