ಅದಮಾರು ಪರ್ಯಾಯ ವೈಭವದ ಹೊರೆಕಾಣಿಕೆ ಮೆರವಣಿಗೆ
Team Udayavani, Jan 16, 2020, 12:58 AM IST
ಉಡುಪಿ: ಅದಮಾರು ಶ್ರೀಗಳ ಪರ್ಯಾಯ ಮಹೋತ್ಸವಕ್ಕೆ ದಿನ ಬಾಕಿ ಇರುವಂತೆಯೇ ಬುಧವಾರ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಜೋಡು ಕಟ್ಟೆಯಿಂದ ರಥಬೀದಿ ತನಕ ವೈಭವದ ಹಸುರುವಾಣಿ ಮೆರವಣಿಗೆ ಸಾಗಿ ಬಂತು.
ಅದಮಾರು, ಮಲ್ಪೆ, ಮಟ್ಟು ಭಾಗ ದಿಂದ ಸಾಲುಗಟ್ಟಿದ ವಾಹನಗಳಲ್ಲಿ ಅಕ್ಕಿ, ಬೆಲ್ಲ, ತೆಂಗಿನಕಾಯಿ, ಮಟ್ಟುಗುಳ್ಳ, ಸೀಯಾಳ,ಎಣ್ಣೆ ಸಮರ್ಪಿಸಲ್ಪಟ್ಟಿತು. ಜೋಡುಕಟ್ಟೆ ಯಿಂದ ಹೊರಟ ಮೆರವಣಿಗೆ ಕೋರ್ಟ್ ರಸ್ತೆ, ಕೆ.ಎಂ. ಮಾರ್ಗ, ಸಂಸ್ಕೃತ ಕಾಲೇಜು ಮೂಲಕ ರಥಬೀದಿ ತಲುಪಿತು. ಪಾರ್ಕಿಂಗ್ ಪಕ್ಕದ ಉಗ್ರಾಣದಲ್ಲಿ ಸಾಮಗ್ರಿಗಳನ್ನು ಜಮಾವಣೆ ಮಾಡಲಾಯಿತು.
ವೈಶಿಷ್ಟéಪೂರ್ಣ ಮೆರವಣಿಗೆ
ಮಠದ ಬಿರುದಾವಳಿ, ನಾಸಿಕ್ ಬ್ಯಾಂಡ್ ನಿನಾದಗಳೊಂದಿಗೆ ಕೀಲುಕುದುರೆ ಸಹಿತ ವೇಷಭೂಷಣಗಳು ಮೆರವಣಿಗೆಯಲ್ಲಿದ್ದವು.ಇಸ್ಕಾನ್ ವೃಂದದವರ ಭಜನೆ, ಮಹಿಳೆ ಯರ ಚೆಂಡೆ ನಿನಾದದೊಂದಿಗೆ ಸಮವಸ್ತ್ರ ಧಾರಿ ಮಹಿಳೆಯರ ಸಹಿತ 2,000 ಮಂದಿ ಭಾಗವಹಿಸಿದ್ದರು.
ಬುಟ್ಟಿ, ಬೋಟ್‌ನಲ್ಲಿ ಬಂತು ಮಟ್ಟು ಗುಳ್ಳ
ಹೊರೆಕಾಣಿಕೆ ಮೆರವಣಿಗೆಯಲ್ಲಿ ಮಟ್ಟು ಲಕ್ಷ್ಮೀನಾರಾಯಣ ಮತ್ತು ಸಹೋದರರು ಮಿನಿ ಬೋಟ್‌ನಲ್ಲಿ ಮಟ್ಟುಗುಳ್ಳಗಳನ್ನು ತುಂಬಿ ತಂದಿದ್ದರು. ಬೆಳೆಗಾರ ಮಹಿಳೆಯರು ಮತ್ತು ಪುರುಷರು 50ಕ್ಕೂ ಅಧಿಕ ಅಲಂಕೃತ ಬುಟ್ಟಿಗಳಲ್ಲಿ ಗುಳ್ಳದ ಹೊರೆ ಹೊತ್ತು ತಂದರ್ಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Surathkal-ಗಣೇಶಪುರ ರಸ್ತೆಯಲ್ಲಿ ಟ್ಯಾಂಕರ್ ರಾಜ್ಯಭಾರ!
Mangaluru: ಕರಾವಳಿ ಉತ್ಸವ; ಮತ್ಸ್ಯ ಲೋಕದೊಳಗೆ ನಾವು!
Kundapura: ಮೆಟ್ಟಿಲು ಹತ್ತುವಾಗಲೇ ಶುಚಿಯಾಗುವ ಶೌಚಾಲಯ!
ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್ ನಕಾರ
ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.