ಬೋಧನಾ ಗುಣಮಟ್ಟಕ್ಕಾಗಿ ಪ್ರವೇಶ ಪರೀಕ್ಷೆ ಅವಶ್ಯ
ಪದವಿ ಪ್ರವೇಶ ಪರೀಕ್ಷೆ ಸಾಧಕ ಬಾಧಕ
Team Udayavani, Apr 18, 2022, 6:00 AM IST
ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ (ಯುಜಿಸಿ) ವಿಶ್ವವಿದ್ಯಾನಿಲಯಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ) ನಡೆಸುತ್ತಿದೆ. ಪದವಿ ಕೋರ್ಸ್‌ಗಳಿಗೆ ಜೀವಂತಿಕೆ, ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳುವಿಕೆ ಮತ್ತು ಪಾರದರ್ಶಕತೆ ತರಲು ಪ್ರವೇಶ ಪರೀಕ್ಷೆ ಆವಶ್ಯಕತೆ ಎನ್ನುತ್ತಾರೆ ತಜ್ಞರು.
ಕಾಲೇಜುಗಳಲ್ಲಿನ ಬೋಧನೆ ಗುಣಮಟ್ಟ ಹೆಚ್ಚಳ
ಪ್ರೊ| ಎಂ.ಕೆ ಶ್ರೀಧರ್, ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಸದಸ್ಯ
ಸಾಮಾನ್ಯ ಪದವಿ ತರಗತಿಗಳಿಗೂ ಪ್ರವೇಶ ಪರೀಕ್ಷೆ ಜಾರಿ ಗೊಳಿಸಿದರೆ ಪದವಿಗೆ ಜೀವಂತಿಕೆ ಬರ ಲಿದೆ. ಅಭಿರುಚಿ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಆಯ್ಕೆ ನೀಡು ವು ದರಿಂದ ಆಸಕ್ತಿ ಹೆಚ್ಚಳವಾಗಲಿದೆ. ಶೈಕ್ಷಣಿಕವಾಗಿ ಪಾರ ದರ್ಶಕತೆ ಕಾಯ್ದುಕೊಳ್ಳಬಹುದು. ಒಟ್ಟಾರೆಯಾಗಿ ಕೋರ್ಸ್ ಹಾಗೂ ಕಾಲೇಜುಗಳಲ್ಲಿನ ಬೋಧನೆಯಲ್ಲಿ ಗುಣಮಟ್ಟ ಹೆಚ್ಚಳವಾಗಲಿದೆ.
ಯುಜಿಸಿ ಈಗ ಕೇವಲ ಐಚ್ಛಿಕ ಕೋರ್ಸ್‌ಗಳಿಗೆ ಮಾತ್ರ ಪ್ರವೇಶ ಆರಂಭ ಮಾಡಿದೆ. ಸಿಯುಇಟಿ ನಡೆಸುತ್ತಿದ್ದೇವೆ. ತಾವು ಇಚ್ಛಿಸಿದಲ್ಲಿ ನೋಂದಣಿ ಮಾಡಿಕೊಳ್ಳಿ ಎಂದು ವಿಶ್ವ ವಿದ್ಯಾನಿಲ ಯಗಳಿಗೆ ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳು ಅಳವಡಿಸಿಕೊಂಡಂತಹ ಸಂದರ್ಭದಲ್ಲಿ ಆಯಾ ವಿಶ್ವವಿದ್ಯಾನಿಲಯವಾರು, ರಾಜ್ಯವಾರು ಮೀಸಲಾತಿ ನೀಡು ವುದು ಸೇರಿ ಇನ್ನಿತರ ನಿಯಮಗಳನ್ನು ಅಳವಡಿಸಿ ಕೊಳ್ಳುವುದು ಸೂಕ್ತ. ಬದಲಾವಣೆ ಎಂದಾಗ ಸವಾಲುಗಳು ಇದ್ದೇ ಇರುತ್ತವೆ. ತಪ್ಪುಗಳಿದ್ದರೆ, ತಿದ್ದುಪಡಿ ಮಾಡಿಕೊಂಡು ಸರಿ ಪಡಿಸಬಹುದು. ಇಲ್ಲವಾದಲ್ಲಿ ಬದಲಾವಣೆ ಸಾಧ್ಯವಾಗುವುದಿಲ್ಲ.
ಎನ್‌ಇಪಿಯಲ್ಲಿಯೂ ಪ್ರಸ್ತಾಪ
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ 1ರಿಂದ 12ನೇ ತರಗತಿ ವರೆಗೂ ಶಾಲಾ ಶಿಕ್ಷಣ ವಾಗಲಿದೆ. ಪಿಯುಸಿ ಕಲ್ಪನೆ ಇರುವುದಿಲ್ಲ. ಶಾಲೆಯಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಎಂಬ ವಿಭಾಗಗಳೂ ಇರುವುದಿಲ್ಲ. ಶಾಲಾ ಶಿಕ್ಷಣ ಮುಗಿಸಿ ನೇರವಾಗಿ ವೃತ್ತಿಪರ ಅಥವಾ ಪದವಿ ಕೋರ್ಸ್ ಗಳಿಗೆ ಬರುತ್ತಾರೆ. ಅಂತಹ ಸಮಯದಲ್ಲಿ ಇದಕ್ಕೆ ಬೇಕಾದ ಗುಣ ಮಟ್ಟ ಪರಿಶೀಲಿಸಲು ಪ್ರವೇಶ ಪರೀಕ್ಷೆ ನಡೆಸಬೇಕಾಗುತ್ತದೆ. ಪ್ರವೇಶ ಪರೀಕ್ಷೆ ಸೇರಿ ಮುಂದಿನ ಶಿಕ್ಷಣಕ್ಕೆ ಅನುಗುಣವಾಗಿ ಶಾಲಾ ಶಿಕ್ಷಣದ ಹಂತದಲ್ಲಿ ಕೂಡ ಪಠ್ಯ ಕ್ರಮದ ಚೌಕಟ್ಟು ಬದಲಾಗಿ ಗುಣ ಮಟ್ಟದ ಸುಧಾರಣೆಯಾದರೆ ಹಂತ ಹಂತವಾಗಿ ಜಾರಿ ಗೊಳಿಸಿದರೆ ಪರಿಣಾಮ ಬೀರುವುದಿಲ್ಲ.
ಪ್ರವೇಶ ಪರೀಕ್ಷೆ ಬೇಕು
ಪ್ರಸ್ತುತ ವಿವಿಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವೃತ್ತಿಪರತೆ, ಕೌಶಲ ತರುವುದಕ್ಕಾಗಿ ಎನ್‌ಇಪಿನಲ್ಲಿ ಪದವಿ ಕೋರ್ಸ್‌ಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ವೈದ್ಯಕೀಯ, ಎಂಜಿನಿಯರಿಂಗ್, ಕಾನೂನು ಪದವಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದೆ. ಪ್ರವೇಶವೆಂದಾಗ ಅದರದ್ದೇ ಆದ ತಯಾರಿ ನಡೆಸಲಾಗುತ್ತದೆ. ಗಂಭೀರತೆ ಬರಲಿದೆ, ಮಾಪನ ಮಾಡಲಾಗುತ್ತದೆ. ಕನಿಷ್ಠ ಮತ್ತು ಗರಿಷ್ಠ ಗುಣಮಟ್ಟ ಕಂಡು ಹಿಡಿಯಬಹುದು. ಹೀಗಾಗಿ,ಯಾವುದೇ ಪದವಿಗೂ ಪ್ರವೇಶ ಪರೀಕ್ಷೆ ಬೇಕು.
ಚರ್ಚೆ ಬಳಿಕ ಜಾರಿಯಾಗಲಿ
ಪ್ರೊ| ಬಿ. ತಿಮ್ಮೇಗೌಡ, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ
ಬೇಡಿಕೆ ಇರುವ ಕೋರ್ಸ್‌ಗಳಿಗೆ ಸೂಕ್ತ ನ್ಯಾಯ ಸಿಗುವಂತೆ ಮಾಡಲು ಸಿಯುಇಟಿ ಅಗತ್ಯ. ಇದನ್ನು ಅಳವಡಿಸಿ ಕೊಳ್ಳುವ ಕುರಿತು ರಾಜ್ಯ ಸರಕಾರವು ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಅದಕ್ಕೂ ಮೊದಲು ರಾಜ್ಯದ ಎಲ್ಲ ಸರಕಾರಿ ಮತ್ತು ಖಾಸಗಿ ವಿಶ್ವ ವಿದ್ಯಾನಿಲಯಗಳ ಕುಲಪತಿ ಗಳೊಂದಿಗೆ ಚರ್ಚಿಸಬೇಕಿದೆ. ಇದರಲ್ಲಿ ಕಂಡುಬರುವ ಸಮಸ್ಯೆ, ಸವಾಲುಗಳ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಬೇಕಿದೆ.
ಒಂದು ವೇಳೆ ರಾಜ್ಯದಲ್ಲಿ ಅಳವಡಿಸಿಕೊಂಡರೆ, ವಿಶ್ವವಿದ್ಯಾನಿಲಯದಲ್ಲಿರುವ ಎಲ್ಲ ಕೋರ್ಸ್ ಗಳಿಗೂ ಅಳವಡಿಸಿಕೊಳ್ಳಬೇಕೇ ಅಥವಾ ಬೇಡಿಕೆ ಇರುವ ಕೋರ್ಸ್ ಗಳಿಗೆ ಮಾತ್ರ ಅಳವಡಿಸಿ ಕೊಳ್ಳಬೇಕೇ ಎಂಬುದು ಮೊದಲ ಪ್ರಶ್ನೆ. ಯಾವ ಕೋರ್ಸ್‌ಗಳಿಗೆ ಬೇಡಿಕೆ ಇದೆ ಎಂಬುದು ಹಿಂದಿನ ವರ್ಷದ ಪ್ರವೇಶಾತಿ ಮೇಲೆ ನಿರ್ಧಾರವಾಗಲಿದೆ. ಪ್ರಸ್ತುತ ಬೇಡಿಕೆ ಇರುವ ವೃತ್ತಿಪರ ಕೋರ್ಸ್ ಗಳಿಗೆ ಮಾತ್ರ ಸಿಇಟಿ ಅಥವಾ ನೀಟ್ ಮಾಡಲಾಗುತ್ತಿದೆ. ಸಿಯುಇಟಿ ಅಳವಡಿಸಿಕೊಳ್ಳಲು ಹೊಸ ಮಾನದಂಡಗಳನ್ನು ರೂಪಿಸಬೇಕು.
ಪ್ರಸ್ತುತ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿರುವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಶೇ. 85ರಷ್ಟು, ಇತರೆ ವಿವಿಗಳಿಗೆ ಶೇ. 15ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ. ಸಿಯುಇಟಿ ಅಳವಡಿಸಿ ಕೊಂದರೆ ಈ ನಿಯಮಗಳನ್ನು ಕೈಬಿಡಬೇಕಾಗುತ್ತದೆ. ಇದನ್ನು ವಿವಿ, ಇತರೆ ವಿವಿ ವ್ಯಾಪ್ತಿ, ರಾಜ್ಯ ಮತ್ತು ಅಂತಾರಾಜ್ಯಗಳು ಸೇರಿ ನಿಯಮಗಳನ್ನು ರೂಪಿಸಬೇಕಾಗುತ್ತದೆ. ಇಲ್ಲವಾದಲ್ಲಿ ಯಾವುದೋ ಒಂದು ವಿಶ್ವವಿದ್ಯಾನಿಲಯದಲ್ಲಿ ಬೇರೆ ರಾಜ್ಯದ ವಿದ್ಯಾರ್ಥಿಗಳೇ ತುಂಬಿ ಕೊಂಡರೆ ಪರಿಸ್ಥಿತಿ ಏನಾಗುತ್ತದೆ ಎಂಬುದೂ ಗಮನದಲ್ಲಿರಬೇಕು.
ಇನ್ನು ಪ್ರವೇಶಾತಿಯಲ್ಲಿ ಪಾರದರ್ಶಕತೆ ತರಲು ಇಂತಹ ಪ್ರವೇಶ ಪರೀಕ್ಷೆಗಳು ಸಹಕಾರಿಯಾಗಲಿವೆ. ಕೆಲವು ವಿವಿಗಳಲ್ಲಿ ಅಕ್ರಮವಾಗಿ ವಿದ್ಯಾರ್ಥಿಗಳಿಗೆ ಸೀಟು ನೀಡಲಾಗುತ್ತಿದೆ ಎಂಬ ಆರೋಪವಿದೆ. ಇಂತಹ ಅಕ್ರಮಗಳನ್ನು ತಡೆಯಲು ಸಿಯುಇಟಿ ಆವಶ್ಯಕತೆ ಎನಿಸುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.