ಸ್ತ್ರೀಯರಿಗೆ ಮಾತ್ರ ಪ್ರವೇಶ
Team Udayavani, Jun 10, 2020, 4:30 AM IST
ಯದುವಂಶದ ಕುಲಗುರು ಗರ್ಗಾಚಾರ್ಯರು, ಶ್ರೀಕೃಷ್ಣನ ರಾಸಕ್ರೀಡೆಗೆ ಸಂಬಂಧಿಸಿದಂತೆ ವಿಚಿತ್ರ ಘಟನೆಯೊಂದನ್ನು ವಿವರಿಸಿದ್ದಾರೆ. ಕೃಷ್ಣ ಭಕ್ತರೂ, ಮಹಾತಪ ಸ್ವಿಯೂ ಆದ ಮಹರ್ಷಿಗಳೊಬ್ಬರು ಶ್ರೀಕೃಷ್ಣನ ದರ್ಶನಕ್ಕಾಗಿ ಹಾತೊರೆಯುತ್ತ ಮಹಾದೇವನೊಡನೆ ಬೃಂದಾವನಕ್ಕೆ ತೆರಳುತ್ತಾ ರೆ. ರಾಸಕ್ರೀಡೆಯನ್ನು ನೋಡಿ ಆನಂದಿಸಲೆಂದು ಬಂದವರಿಗೆ ಅಚ್ಚರಿ ಕಾದಿತ್ತು. ಅಲ್ಲಿಯ ವೃಕ್ಷಗಳು ಗೋಪಿಕೆಯರ ರೂಪ ತಳೆದು ಕಾವಲಿಗೆ ನಿಂತಿದ್ದರು.
ಇವರಿಬ್ಬರನ್ನೂ ಒಳಗೆ ಪ್ರವೇಶಿಸಲು ಅನುಮತಿಸಲಿಲ್ಲ. “ಬೃಂದಾವನದಲ್ಲಿ ಸ್ತ್ರೀಯರಿಗೆ ಮಾತ್ರವೇ ಪ್ರವೇಶವುಂಟು. ಶ್ರೀಕೃಷ್ಣನೊಬ್ಬನೇ ಇಲ್ಲಿ ಪುರುಷ. ಆದ್ದರಿಂದ ನೀವು ಸ್ತ್ರೀರೂಪ ತಳೆದರೆ ಮಾತ್ರ ಒಳಗೆ ಪ್ರವೇಶಿಸಬಹುದು’ ಎನ್ನುತ್ತಾರೆ. ಮತ್ತೆ ಮುಂದುವರಿಸುತ್ತಾ “ಮಾನಸ ಸರೋವರ ದಲ್ಲಿ ಮುಳುಗಿ, ಸ್ತ್ರೀರೂಪ ತಳೆದು ಬನ್ನಿ’ ಎಂದು ಸಲಹೆ ನೀಡುತ್ತಾರೆ. ಅವರಿಬ್ಬರೂ ಮಾನಸ ಸರೋವರದಲ್ಲಿ ಮುಳುಗಿ ಸ್ತ್ರೀರೂಪ ತಳೆದು, ಬೃಂದಾವನವನ್ನು ಪ್ರವೇಶಿಸಿ, ರಾಸಕ್ರೀಡೆಯ ವೈಭವವನ್ನು ಕಂಡು ಆನಂದತುಂದಿಲರಾದರು. ಮೇಲಿನ ಘಟನೆ ವಿಚಿತ್ರವಾಗಿ ಕಾಣುತ್ತಿದೆ.
ಮಾನಸಸರೋವರಕ್ಕೆ ತೀರ್ಥಯಾತ್ರೆ ಮಾಡಿಬಂ ದ ಅನೇಕ ಪುರುಷರುಂಟು. ಅವರಲ್ಲಿ ಯಾರೂ ಸ್ತ್ರೀಯಾಗಿ ಬದಲಾದ ಸುದ್ದಿ ಇಲ್ಲಿವರೆಗೆ ತಿಳಿದುಬಂದಿಲ್ಲ. ಆದ್ದರಿಂದ, ಮೇಲಿನ ಘಟನೆ ಕಾಲ್ಪನಿಕವೇ ಹೌದು ಎಂದೆನಿ ಸುತ್ತದೆ. ಪುರಾಣಗಳು ಮುಂತಾದ ಋಷಿ ಪ್ರಣೀತ ವಾದ ಗ್ರಂಥಗಳಲ್ಲಿ, ಅನೇಕ ಘಟನೆಗಳು ತತ್ತ್ವಾರ್ಥಗರ್ಭಿತವಾಗಿರುತ್ತವೆ. ಮೇಲಿನ ಘಟನೆಯೂ ಉತ್ಕೃಷ್ಟ ವಿಚಾರವ ನ್ನೇ ತಿಳಿಸುತ್ತಿದೆ. ಇಲ್ಲಿ ಸ್ತ್ರೀರೂಪವೆನ್ನುವುದು ಬಾಹ್ಯರೂಪವಲ್ಲ. ಸೃಷ್ಟೀಶನಾದ ಭಗವಂತ ನೊ ಬ್ಬನೇ ಪುರುಷ- ಪರಮಪುರುಷ.
ಇತರರೆಲ್ಲರೂ ಶ್ರೀಪತಿಯಾದ ಆತನನ್ನೇ ತಮ್ಮ ಪತಿ/ ಸ್ವಾಮಿಯಾಗಿ ಭಾವಿಸಿ, ಆತನಲ್ಲಿ ತನ್ಮಯ ರಾಗುವುದನ್ನು, ಸ್ತ್ರೀಭಾವವೆಂಬುದಾಗಿ ಹೇಳಬಹುದು. ಅಂತಹ ಸ್ತ್ರೀರೂಪ- ಭಾವವ ನ್ನು ತಾಳಿದಾಗ, ಅಂತರಂಗದಲ್ಲಿ ರಮಿಸುವ ಭಗವಂತನ ದರ್ಶನ ಸಾಧ್ಯವೆಂಬ ಸತ್ಯವನ್ನೇ ಸಾರುತ್ತಿದೆ ಈ ಕಥೆ. ಮಾನಸಸರೋವರ ಎಂಬುದು ಹಿಮಾಲಯ ಪ್ರಾಂತ್ಯದಲ್ಲಿನ ಒಂದು ಸರೋವರ. ಪವಿತ್ರವಾದ ಯಾತ್ರಾಸ್ಥಳ. ಈ ಹೊರ ಸರೋವರವು ನಮ್ಮ ಮನಸ್ಸಿನಾಳದಲ್ಲಿನ ಪವಿತ್ರಸ್ನಾನದ ಹೊರನಕ್ಷೆ. ಇಂತಹ ಸ್ತ್ರೀಭಾವವನ್ನು ಎಲ್ಲರೂ ತಳೆದು, ಭಗವಂತನನ್ನು ಅನುಭವಿಸಬಹುದಾಗಿದೆ.
* ಮೈಥಿಲೀ ರಾಘವನ್, ಸಂಸ್ಕೃತಿ ಚಿಂತಕಿ, ಅಷ್ಟಾಂಗಯೋಗ ವಿಜ್ಞಾನಮಂದಿರಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.