17 ವರ್ಷ ಹಿಂದಿನ ತನ್ನದೇ ಆದೇಶಕ್ಕೆ ಉಲ್ಟಾ ಹೊಡೆದ ರೈಲ್ವೇ ಮಂಡಳಿ!

ಮಂಗಳೂರು ಭಾಗ ನೈಋತ್ಯ ವಲಯಕ್ಕೆ ಸೇರ್ಪಡೆ ಪ್ರಸ್ತಾವಕ್ಕೆ ಭಾರೀ ಹಿನ್ನಡೆ

Team Udayavani, Dec 20, 2021, 7:00 AM IST

17 ವರ್ಷ ಹಿಂದಿನ ತನ್ನದೇ ಆದೇಶಕ್ಕೆ ಉಲ್ಟಾ ಹೊಡೆದ ರೈಲ್ವೇ ಮಂಡಳಿ!

ಮಂಗಳೂರು: ಮಂಗಳೂರು ಭಾಗವನ್ನು ನೈಋತ್ಯ ರೈಲ್ವೇ ವಲಯಕ್ಕೆ ಸೇರ್ಪಡೆಗೊಳಿಸುವ ಪ್ರಸ್ತಾವವನ್ನು ರೈಲ್ವೇ ಮಂಡಳಿ ತಿರಸ್ಕರಿಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಈ ಮೂಲಕ ಕರಾವಳಿಗರ ದಶಕದ ಬೇಡಿಕೆ ಈಡೇರಿಕೆಗೆ ಹಿನ್ನಡೆಯಾಗಿದೆ.

ಗಮನಾರ್ಹ ವಿಚಾರವೆಂದರೆ, ಆಡಳಿತಾತ್ಮಕ ಹಾಗೂ ಪ್ರಯಾಣಿಕರ ಅನುಕೂಲದ ದೃಷ್ಟಿ ಇಟ್ಟುಕೊಂಡು ದಕ್ಷಿಣ ರೈಲ್ವೇ ವಲಯಕ್ಕೆ ಒಳಪಟ್ಟಿರುವ ಮಂಗಳೂರು ಭಾಗವನ್ನು ನೈಋತ್ಯ ರೈಲ್ವೇ ವಲಯಕ್ಕೆ ಸೇರಿಸುವಂತೆ ಸುಮಾರು 17 ವರ್ಷಗಳ ಹಿಂದೆ ರೈಲ್ವೇ ಮಂಡಳಿಯೇ ಆದೇಶ ಹೊರಡಿಸಿತ್ತು. ಈಗ ತನ್ನದೇ ಹಳೆಯ ಆದೇಶಕ್ಕೆ ಮಂಡಳಿ ಉಲ್ಟಾ ಹೊಡೆದಿರುವುದು ವಿಪರ್ಯಾಸವೇ ಸರಿ.

ಮಂಗಳೂರು ವಿಭಾಗ ರಚನೆಗೆ ಪ್ರಸ್ತುತ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಮುಂದೂಡುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಠ ನೈಋತ್ಯ ರೈಲ್ವೇ ವಲಯಕ್ಕೆ ಸೇರ್ಪಡೆಯಾಗಿ ಇಲ್ಲಿನ ತ್ರಿಶಂಕು ಸ್ಥಿತಿಗೆ ಮುಕ್ತಿ ಸಿಗಬಹುದು ಎಂಬ ಈ ಭಾಗದ ಜನರ ಬಹುಕಾಲದ ನಿರೀಕ್ಷೆಗೆ ರೈಲ್ವೇ ಮಂಡಳಿ ಇದೀಗ ತಣ್ಣೀರು ಎರಚಿದೆ.

ಮಂಗಳೂರು ಹಾಗೂ ತೋಕೂರು ಭಾಗವನ್ನು ನೈಋತ್ಯ ರೈಲ್ವೇ ವಲಯಕ್ಕೆ ಸೇರಿಸುವಂತೆ 2020ರ ಫೆಬ್ರವರಿ 10ರಂದು ವಲಯ ಮಹಾಪ್ರಬಂಧಕರು ಬರೆದಿದ್ದ ಪತ್ರಕ್ಕೆ ಈ ವರ್ಷದ ಫೆಬ್ರವರಿಯಲ್ಲಿ ಉತ್ತರಿಸಿದ ರೈಲ್ವೇ ಮಂಡಳಿ ನೈಋತ್ಯ ರೈಲ್ವೆಯ ವಲಯ ಪ್ರಬಂಧಕರು ಬರೆದಿರುವ ಪತ್ರವನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಮಂಗಳೂರು ಕಾಂಪ್ಲೆಕ್ಸ್‌ (ಮಂಗಳೂರು ಸೆಂಟ್ರಲ್‌ ಹಾಗೂ ಮಂಗಳೂರು ಜಂಕ್ಷನ್‌) ವ್ಯಾಪ್ತಿ ದಕ್ಷಿಣ ರೈಲ್ವೇ ಹಾಗೂ ತೋಕೂರು ರೈಲ್ವೇ ನಿಲ್ದಾಣ ವ್ಯಾಪ್ತಿ ಕೊಂಕಣ ರೈಲ್ವೇ ನಿಗಮದಲ್ಲೇ ಮುಂದುವರಿಸಲು ಮಂಡಳಿ ನಿರ್ಧರಿಸಿದೆ ಎಂದು ತಿಳಿಸಿದೆ.

ಇದನ್ನೂ ಓದಿ:ರಾಜ್ಯದಲ್ಲಿಂದು 300 ಕೋವಿಡ್‌ ಪಾಸಿಟಿವ್‌ ಪತ್ತೆ: ಓರ್ವ ವ್ಯಕ್ತಿ ಸಾವು

ತನ್ನದೇ ಆದೇಶವನ್ನು ಕೈಬಿಟ್ಟ ಮಂಡಳಿ
ರೈಲ್ವೇ ಮಂಡಳಿಯು ಈ ಆದೇಶವನ್ನು 2004ರಲ್ಲಿ ಮಾಡಿದ್ದು, ಸುಮಾರು 17 ವರ್ಷಗಳಿಂದ ಕಾರ್ಯಾನುಷ್ಠಾನ ಗೊಳ್ಳದೆ ಬಾಕಿ ಉಳಿದಿದೆ. ರೈಲ್ವೇ ಸಚಿವ ನಿತೀಶ್‌ ಕುಮಾರ್‌ 2003ರ ಡಿ. 28ರಂದು ಮಂಗಳೂರಿಗೆ ಬಂದಿದ್ದ ಸಂದರ್ಭ ಮಂಗಳೂರು ರೈಲ್ವೇ ನಿಲ್ದಾಣವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆ ಗೊಳಿಸುವಂತೆ ಸೂಚಿಸಿದ್ದರು. ಈ ಸಂಬಂಧ ರೈಲ್ವೇ ಮಂಡಳಿ 2004ರ ಡಿ. 27ರಂದು ಆದೇಶ ಹೊರಡಿಸಿತ್ತು. ಈ ಸಂದರ್ಭ ಮಂಗಳೂರು-ಹಾಸನ ನಡುವೆ ಹಳಿ ಪರಿವರ್ತನೆ ಕಾಮಗಾರಿ ನಡೆಯುತ್ತಿದ್ದ ಕಾರಣ ಗಜೆಟ್‌ ನೊಟೀಫಿಕೇಶನ್‌ ಬಾಕಿಯುಳಿದಿತ್ತು. ಇದರಿಂದಾಗಿ ಆದೇಶ ಜಾರಿಯಾಗಿರಲಿಲ್ಲ. 2008ರಲ್ಲಿ ಕಾಮಗಾರಿ ಮುಕ್ತಾಯಗೊಂಡಿದ್ದರೂ ಮಂಡಳಿ ತನ್ನ ಆದೇಶ ಜಾರಿಗೊಳಿಸಲು ಮುಂದಾಗಲಿಲ್ಲ.

ನೈಋತ್ಯ ರೈಲ್ವೆಯ ಮಹಾಪ್ರಬಂಧಕ ಅಜಯ
ಕುಮಾರ್‌ ಸಿಂಗ್‌ 2020ರ ಫೆ. 10ರಂದು ರೈಲ್ವೇ ಮಂಡಳಿಯ ಅಧ್ಯಕ್ಷರಿಗೆ ಮತ್ತೆ ಪತ್ರ ಬರೆದುಮಂಗಳೂರು ಹಾಗೂ ತೋಕೂರು ರೈಲ್ವೇನಿಲ್ದಾಣವನ್ನು ನೈಋತ್ಯ ರೈಲ್ವೆಗೆ ಸೇರ್ಪಡೆಗೊಳಿಸ ಬೇಕು ಹಾಗೂ ನೈಋತ್ಯ ರೈಲ್ವೆಯ ವ್ಯಾಪ್ತಿಯನ್ನು ಮರು ಹೊಂದಾಣಿಕೆ ಮಾಡಬೇಕು. ಆದುದರಿಂದ ರೈಲ್ವೇ ಮಂಡಳಿ ಮಂಗಳೂರು ಕಾಂಪ್ಲೆಕ್ಸ್‌ ಹಾಗೂ ತೋಕೂರು ನಿಲ್ದಾಣವನ್ನು ನೈಋತ್ಯ ರೈಲ್ವೆಗೆ ಹಸ್ತಾಂತರಿಸಲು ನಿರ್ಧಾರ ಕೈಗೊಳ್ಳಬೇಕು ಹಾಗೂ ಈ ಕುರಿತು ಶೀಘ್ರ ಅಧಿಸೂಚನೆಯನ್ನು ಹೊರಡಿಸಬೇಕು ಎಂದು ಕೋರಿದ್ದರು.

ಸೇರ್ಪಡೆ ಏಕೆ ಅನಿವಾರ್ಯ ?
ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆ ರೈಲು ಸೌಕರ್ಯ ಅಭಿವೃದ್ದಿಗೆ ಮೂರು ವಲಯಗಳಾದ ದಕ್ಷಿಣ ರೈಲ್ವೇ, ನೈಋತ್ಯ ರೈಲ್ವೇ ಮತ್ತು ಕೊಂಕಣ ನಿಗಮವನ್ನು ಆಶ್ರಯಿಸಬೇಕಾಗುತ್ತದೆ. ಮಂಗಳೂರು ಭಾಗ ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗುವುದರಿಂದ ಆಡಳಿತಾತ್ಮಕವಾಗಿ ಒಂದೇ ವ್ಯವಸ್ಥೆಯಡಿ ಬರುತ್ತದೆ. ಇದರಿಂದ ರೈಲ್ವೇ ಸೌಲಭ್ಯಗಳಿಗೆ ಸಂಬಂಧಪಟ್ಟಂತೆ ಇತರ ವಿಭಾಗಗಳ ಜತೆ ಸಮನ್ವಯತೆಯ ಸಮಸ್ಯೆ ನಿವಾರಣೆಯಾಗಿ ಮಂಗಳೂರು ವಲಯದ ತ್ರಿಶಂಕು ಸ್ಥಿತಿಗೆ ಪರಿಹಾರವಾಗಬಲ್ಲದು. ಮಂಗಳೂರಿನಲ್ಲಿ ಇಂಟರ್‌ಸಿಟಿ, ಮೆಟ್ರೊ ರೈಲು ಸಂಚಾರದ ಪ್ರಸ್ತಾವಗಳು ಕೇಳಿಬರುತ್ತಿವೆ. ಈ ದಿಶೆಯಲ್ಲೂ ಮಂಗಳೂರು ಪ್ರದೇಶ ಒಂದು ವ್ಯವಸ್ಥೆಯಡಿ ಒಟ್ಟು ಗೂಡುವುದು ಆವಶ್ಯ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಉದಯವಾಣಿಯು ಮಂಗಳೂರು ಭಾಗವನ್ನು ನೈಋತ್ಯ ರೈಲ್ವೇ ವಲಯಕ್ಕೆ ಸೇರಿಸುವ ಪ್ರಸ್ತಾವನೆ ಮುಂದಿಟ್ಟುಕೊಂಡು ಸುಮಾರು ಎರಡು ವಾರಗಳ ಸರಣಿ ಲೇಖನಗಳ ಅಭಿಯಾನವನ್ನು ಕೂಡ ಮಾಡಿತ್ತು.

ರೈಲ್ವೇ ಸಚಿವರೊಂದಿಗೆ ಚರ್ಚಿಸುವೆ
ರೈಲ್ವೇ ಮಂಡಳಿಯ ಪತ್ರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ. ಮಂಗಳೂರು ಭಾಗವನ್ನು ನೈಋತ್ಯ ವಿಭಾಗಕ್ಕೆ ಸೇರಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದ್ದು ಈ ಬಗ್ಗೆ ರೈಲ್ವೇ ಸಚಿವರ ಜತೆ ಮಾತನಾಡುತ್ತೇನೆ.
-ನಳಿನ್‌ ಕುಮಾರ್‌ ಕಟೀಲು,
ದ.ಕ. ಸಂಸದರು

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.