ಆಫ್ಘಾನ್ ಅರಾಜಕತೆಯಿಂದ ಗಗನಕ್ಕೇರಿದ ಡ್ರೈ ಫ್ರೂಟ್ಸ್ ಬೆಲೆ
ಶುಷ್ಕಫಲ ಆಮದು ಕುಸಿತ; ರಾಜಧಾನಿ ಡ್ರೈ ಫ್ರೂಟ್ಸ್ ಮಾರುಕಟ್ಟೆಗೆ ಹೊಡೆತ; ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ
Team Udayavani, Aug 22, 2021, 2:45 PM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ಆಫ್ಘಾನಿಸ್ತಾನದಲ್ಲಿ ಉಂಟಾಗಿರುವ ರಾಜಕೀಯ ಅರಾಜಕತೆ ರಾಜಧಾನಿ ಬೆಂಗಳೂರಿನ ಡ್ರೈ ಫ್ರೂಟ್ಸ್ ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಆಫ್ಘಾನ್‌ನಿಂದ ಪಾಕ್ ಗಡಿ ಮೂಲಕ ಭಾರತ ಪ್ರವೇಶಿಸುತ್ತಿದ್ದ ಒಣ ದ್ರಾಕ್ಷಿ, ಅಂಜೂರ ಸೇರಿದಂತೆ ಡ್ರೈ ಪ್ರೂಟ್ಸ್ ಸಾಗಣೆ ಸ್ಥಗಿತವಾಗಿದ್ದು, ಅದರ
ಪರಿಣಾಮ ಶುಷ್ಕಫಲಗಳ ಬೆಲೆ ದುಪ್ಪಟ್ಟಾಗಿದೆ.ಆಫ್ಘಾನಿಸ್ತಾನವು ಅಂಜೂರ, ಬಾದಾಮಿ, ಬ್ಲಾಕ್ ಗ್ರೇಪ್ಸ್ ಸೇರಿದಂತೆ ಮತ್ತಿತರ ಡ್ರೈ ಪ್ರೂಟ್ಸ್ ಭಾರತಕ್ಕೆರಫ್ತು ಮಾಡುತ್ತಿದೆ. ವಾಘಾ ಗಡಿ ಮೂಲಕ ಆಫ್ಘಾನಿಸ್ತಾನದಿಂದ ಒಣಹಣ್ಣುಗಳು ಬೆಂಗಳೂರು, ದೆಹಲಿ ಸೇರಿದಂತೆ ದೇಶದ ಪ್ರಮುಖ ಮಾರುಕಟ್ಟೆಗಳಿಗೆ ಪೂರೈಕೆಯಾಗುತ್ತಿತ್ತು. ಆದರೆಈಗ ಸಾಗಣೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ದರ ಏರಿಕೆ ಬಿಸಿ ತಾಕಿದೆ.
ಇದನ್ನೂ ಓದಿ:ತಮಿಳುನಾಡು : ಶ್ರೀಲಂಕಾ ನೌಕ ಪಡೆಯಿಂದ ಭಾರತೀಯ 60 ಮೀನುಗಾರಿಕಾ ಬೋಟ್ ಗಳ ಮೇಲೆ ಕಲ್ಲು ತೂರಾಟ
ಸಿಲಿಕಾನ್ ಸಿಟಿಗೆ 10 ಟನ್: ಆಫ್ಘಾನ್‌ನಿಂದ ಡ್ರೈ ಫ್ರೂಟ್ಸ್ ವಾರಕ್ಕೆ ಒಮ್ಮೆ ಸುಮಾರು 10 ಟನ್‌ನಷ್ಟು ಬೆಂಗಳೂರಿಗೆ ರವಾನೆ ಆಗುತ್ತದೆ. ಪ್ರಸ್ತುತ ಪೂರೈಕೆ ನಿಂತು ಹೋಗಿದೆ. ಅಂಜೂರ್, ಒಣದ್ರಾಕ್ಷಿ ಮತ್ತು ಕೇಸರಿ (ಸಾಫ್ರಾನ್) ಸೇರಿದಂತೆ ಇತರೆ ಪದಾರ್ಥಗಳಿಗೆ ಇಲ್ಲಿ ಬೇಡಿಕೆ ಹೆಚ್ಚಾಗಿದೆ. ಪ್ರಸ್ತುತ ಪೂರೈಕೆ ನಿಂತು ಹೋಗಿರುವುದರಿಂದ ಬೆಲೆ ಹೆಚ್ಚಾಗಿದೆ.
ಈ ಮಧ್ಯೆ, ಡ್ರೈ ಫ್ರೂಟ್ಸ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ಹೋಲ್‌ಸೇಲ್ ದಾಸ್ತಾನುದಾರರು ಸ್ಟಾಕ್ ಮಾರುಕಟ್ಟೆಗೆ ಬಿಡುತ್ತಿಲ್ಲ. ಇದುಕೃತಕ ಅಭಾವ ಹಾಗೂ ಬೆಲೆ ಏರಿಕೆಗೆಕಾರಣವಾಗಿದೆ. ಆಫ್ಘಾನಿಸ್ತಾನದಲ್ಲಿ ಉಂಟಾಗಿರುವ ಪರಿಸ್ಥಿಯ ಲಾಭ ಪಡೆಯುವಲ್ಲಿ ಕೆಲವು ಹೋಲ್‌ಸೇಲ್
ವ್ಯಾಪಾರಿಗಳು ನಿರತರಾಗಿದ್ದು, ಇದರಿಂದಾಗಿ ಬೆಲೆ ಏರಿಕೆಯಾಗಿದೆ ಎಂದು ಎಂದು ಕಂಟೋನ್ಮೆಂಟ್ ಡ್ರೈ ಫ್ರೂಟ್ಸ್ ವ್ಯಾಪಾರಿ ಜಾವೇದ್ ಹೇಳುತ್ತಾರೆ.ಆಫ್ಘಾನ್‌ನ ಈಗಿನ ಪರಿಸ್ಥಿತಿ ಎಷ್ಟು ದಿನ ಹೀಗೆ ಮುಂದುವರಿಯುತ್ತೆ ಎಂದು ಹೇಳಲಾಗದು. ಹೀಗಾಗಿ ಒಣಹಣ್ಣುಗಳ ಬೆಲೆಯಲ್ಲಿ ಮತ್ತಷ್ಟು ಏರಿಕೆ ಆಗುವ ನಿರೀಕ್ಷೆಯಿದೆ ಎಂದಿದ್ದಾರೆ.
ದೀಪಾವಳಿಗೂ ಹೊಡೆತ: ದೀಪಾವಳಿ ಹಬ್ಬವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಉಡುಗೊರೆ ರೂಪದಲ್ಲಿ ಒಣ ಹಣ್ಣಿನ ಪದಾರ್ಥಗಳನ್ನು ನೀಡುತ್ತಾರೆ. ದೊಡ್ಡ ದೊಡ್ಡ ಕಂಪನಿಗಳು ಮತ್ತು ರಾಜಕೀಯ ಮುಖಂಡರು,ಉದ್ಯಮಿಗಳು ಶುಭಾಷಯ ಕೋರಲು ಡ್ರೈ ಫ್ರೂಟ್ಸ್ ನೀಡುತ್ತಾರೆ.
ಆದರೆ ಈಗಿನ ಪರಿಸ್ಥಿತಿ ನೋಡಿದರೆ ದೀಪಾವಳಿ ವಹಿವಾಟಿಗೂ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ. ಇದು ಸಹಜವಾಗಿ ನಮ್ಮ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದು ಎಂದು ಡ್ರೈ ಫ್ರೂಟ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.
ಆಫ್ಘಾನಿಸ್ತಾನದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆ ಹಿನ್ನೆಲೆಯಲ್ಲಿ ಅಂಜೂರ, ಬಾದಾಮಿ, ಆಫ್ಘಾನ್‌ಕೇಸರಿ ಬೆಲೆದುಪ್ಪಟ್ಟಾಗಿದೆ. ದೀಪಾವಳಿ ಹಬ್ಬದ ವೇಳೆಗೆ ಈ ಪದಾರ್ಥಗಳ ಬೆಲೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಯಿದೆ.
–ಮಹಮ್ಮದ್ ಇದ್ರೀಸ್ ಚೌದ್ರಿ, ಅಧ್ಯಕ್ಷರು
ಕಂಟೋನ್ಮೆಂಟ್ ಡ್ರೈ ಫ್ರೂಟ್ಸ್ ಅಸೋಸಿಯೇಷನ್
– ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.