ಬೆಂಕಿ ವೀರರಲ್ಲಿ ವಿಶ್ವಕ್ಕೇ ವಿಶ್ವಗುರು ಬಿಜೆಪಿಯವರು: ದೊಡ್ಡೂರು
Team Udayavani, Jun 26, 2022, 12:56 PM IST
ಶಿರಸಿ: ಅಗ್ನಿ ಪಥದಲ್ಲಿ ಬೆಂಕಿವೀರರು ಕಾಂಗ್ರೆಸ್ಸಿನವರು ಎಂದಿರುವ ಬಿಜೆಪಿ ವಕ್ತಾರ ನಾಗರಾಜ್ ನಾಯ್ಕ ಅವರಿಗೆ ಅವರ ಬುಡದಲ್ಲೇ ಬೆಂಕಿ ಇಟ್ಟು ಮಾತಾಡಿಕೊಂಡಿದ್ದಾರೆ. ಬೆಂಕಿ ವೀರರಲ್ಲಿ ವಿಶ್ವಕ್ಕೇ ವಿಶ್ವಗುರು ಬಿಜೆಪಿಯವರು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ದೀಪಕ್ ದೊಡ್ಡೂರು ವಾಗ್ದಾಳಿ ನಡೆಸಿದರು.
ಅವರು ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ, ಪರೇಶ ಮೇಸ್ತಾ ಅವರ ಸಾವು ಆಗಬಾರದಿತ್ತು. ಆದರೆ ಕುಮಟಾ ಗಲಾಟೆ, ಶಿರಸಿ ಅನಾಹುತ ಬಿಜೆಪಿಯವರು ನೆನಪು ಮಾಡಿಕೊಳ್ಳಬೇಕಿತ್ತು ಎಂದರು.
ಕೇಂದ್ರ, ರಾಜ್ಯ ಸರಕಾರ ಅನುಷ್ಟಾನದಲ್ಲಿ ಅನೇಕ ಯೋಜನೆ ವಿಫಲ ಆಗಿದೆ. ಬೆಳೆ ಸಾಲ, ಬೆಳೆ ವಿಮೆ ಸಮಸ್ಯೆ ಇದೆ. ಪಹಣಿ ಪತ್ರದಲ್ಲಿ ಸರ್ವೆ ನಂಬರ್, ಹೆಸರು ತಪ್ಪಿದೆ. ಸರಿಪಡಿಸಲು ಬೆಂಗಳೂರಿಗೇ ಪೈಲ್ ಹೋಗಬೇಕು. ಬೆಳೆ ಸಾಲ, ಬೆಳೆ ವಿಮೆ ದಿನಾಂಕ ಕೂಡ ಮುಗಿಯುತ್ತಿದೆ. ಎಷ್ಟೋ ಮಂದಿಗೆ ಬೆಳೆ ಸಾಲ ಬೆಂಗಳೂರುಲ್ಲಿದೆ. ಬೆಳೆಸಾಲ ಯಾವಾಗ ಪಡೆಯಬೇಕು, ಅನೇಕ ಗೊಂದಲ ಘೋಷಣೆ ಯೋಜನೆ ನೀಡಬಾರದು. ಅನುಷ್ಠಾನ ಸಮಸ್ಯೆ ನೋಡಬಾರದು. ಬೆಳೆ ವಿಮೆಗೂ ಬೆಳೆ ಸಾಲಕ್ಕೂ ಹೊಂದಾಣಿಕೆ ಇದೆ. ಆದರೆ, ಅದರಿಂದಲೂ ರೈತರು ವಂಚಿತರಾಗುವ ಆತಂಕ ಇದೆ ಎಂದರು.
ರಾಜ್ಯ, ಕೇಂದ್ರ ಸರಕಾರಕ್ಕೆ ಯೋಜನೆಯ ಭದ್ರ ಬುನಾದಿ ಇದ್ದರೆ ಮಾತ್ರ ಯೋಜನೆ ತರಬೇಕಿದೆ. ಸದನದ ಒಳಗೂ, ಹೊರಗೂ ಚರ್ಚೆ ಆಗಬೇಕು ಎಂದರು.
ಕೇಂದ್ರ, ರಾಜ್ಯ ಅನೇಕ ಯೋಜನೆ ವಿಫಲ ಆಗಿದೆ. ಜನರಿಗೂ ಸಮಸ್ಯೆ ಆಗುತ್ತಿದೆ. ಕೇಂದ್ರದ ಅಗ್ನಿಪಥ ಯೋಜನೆ ವಿಶೇಷವಾಗಿ ಯುವಕರಲ್ಲಿ ವಿರೋಧಾಭ್ಯಾಸ ಮಾಡುತ್ತಿದೆ. ಈ ದೇಶದ ಯುವಕರಿಗೆ ಎಂಟು ವರ್ಷದಲ್ಲಿ ಬಿಜೆಪಿ ಉದ್ಯೋಗ ಸೃಷ್ಟಿ ಮಾಡದೇ ಹೊಸತಾದ ಅಗ್ನಿಪಥ ಯೋಜನೆ ಮುಂದಿಟ್ಟಿದೆ. ರಾಷ್ಟ್ರದ ಸೇವೆ ಮಾಡುವುದು ಪ್ರಜೆಯ ಕರ್ತವ್ಯ. ಯೋಧರಿಗೆ ಪ್ರಾಧಾನ್ಯತೆ ನೀಡಬೇಕು. ಕೇಂದ್ರ ಸರಕಾರ ಯೋಜನೆ ತರುವಾಗ ವ್ಯಾಪಕ ಚರ್ಚೆ ಅಗತ್ಯವಿತ್ತು. ಕೇಂದ್ರ ಸರಕಾರ ಮೊಂಡತನ ಪ್ರದರ್ಶನ ಮಾಡುತ್ತಿದೆ ಎಂದರು.
ಸೈನ್ಯದಲ್ಲಿ ಕೆಲಸ ಮಾಡಿದವರಿಗೆ ನಿವೃತ್ತ ಪಿಂಚಣಿ, ಕೃಷಿ ಭೂಮಿ ಕೊಡಬೇಕಿದೆ. ಅದನ್ನು ಕೊಡಬೇಕು ಎಂದರು. ಗೊಂದಲ ಸೃಷ್ಟಿಸುವ ಯೋಜನೆಯಿಂದ ಮುಂದೆ ಪರ್ವತದಂತಹ ಸಮಸ್ಯೆ ತರಬಾರದು. ಭದ್ರ ಬುನಾದಿ ಇಲ್ಲದೇ ಯೋಜನೆ ಎಳೆಯ ಮನಸ್ಸಿನ ಯುವಕರನ್ನು ಅಗ್ನಿಪಥದಲ್ಲಿ ಅಗ್ನಿಗೆ ಆಹುತಿ ಮಾಡಬಾರದು ಎಂದೂ ಹೇಳಿದರು.
ಈ ವೇಳೆ ಬಸವರಾಜ್ ದೊಡ್ಮನಿ, ಗಣೇಶ ದಾವಣಗೆರೆ, ಪ್ರದೀಪ ಶೆಟ್ಟಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ
ಶಿರಸಿ: ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ
Karate: ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಿಂಚಿದ ದಾಂಡೇಲಿಯ ಕರಾಟೆ ಪಟುಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.