ಮಾಹೆ ವಿ.ವಿ.-ನೊವೋ ನೊರ್‌ಡಿಸ್ಕ್ ಜಿಬಿಎಸ್ ನಡುವೆ ಒಡಂಬಡಿಕೆ
Team Udayavani, Aug 6, 2023, 12:16 AM IST
ಮಣಿಪಾಲ : ಇಲ್ಲಿನ ಮಾಹೆ ವಿ.ವಿ. ಮತ್ತು ನೊವೋ ನೊರ್‌ಡಿಸ್ಕ್ ಗ್ಲೋಬಲ್ ಬಿಜಿನೆಸ್ ಸರ್ವೀಸಸ್ (ಜಿಬಿಎಸ್) ನಡುವೆ ಹೆಲ್ತ್‌ಕೇರ್ ಇಕೋಸಿಸ್ಟಮ್ ಅಪ್ಲಿಕೇಶನ್ ಮತ್ತು ಫಾರ್ಮಾ ವ್ಯಾಲ್ಯೂ ಚೈನ್‌ಗಳಲ್ಲಿನ ಹೊಸ ಅವಕಾಶಗಳ ಕುರಿತು ಒಡಂಬಡಿಕೆಗೆ ಸಹಿ ಹಾಕಲಾಗಿದೆ.
ಎರಡು ಸಂಸ್ಥೆಗಳು ಒಟ್ಟಾಗಿ ಈ ವಿಷಯವಾಗಿ ಇನ್ನೋವೇಶನ್ ಪ್ರಾಜೆಕ್ಟ್, ಹ್ಯಾಕಥಾನ್ಸ್, ಕೇಸ್ ಕಾಂಪಿಟೇಶನ್ಸ್, ಗೆಸ್ಟ್ ಲೆಕ್ಚರ್, ಎಜುಕೇಶನ್ ಪ್ರೋಗ್ರಾಮ್, ಇಂಟರ್ನ್ ಶಿಪ್, ಪ್ಲೇಸ್‌ಮೆಂಟ್ಸ್, ಎಂಪ್ಲಾಯಿ ಡೆವಲಪ್‌ಮೆಂಟ್, ಸಾಮಾಜಿಕ ಬದ್ಧತೆಯ ಕಾರ್ಯಗಳನ್ನು ನಡೆಸಲಿವೆ. ಆ. 3ರಂದು ಮಾಹೆ ಮಣಿಪಾಲ ಕ್ಯಾಂಪಸ್‌ನಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಗಿದ್ದು ಮುಂದಿನ ಎರಡು ವರ್ಷ ಈ ಒಪ್ಪಂದ ಇರಲಿದೆ.
ನೊವೋ ನೊರ್‌ಡಿಸ್ಕ್ ಜಿಬಿಎಸ್ ವ್ಯವಸ್ಥಾಪಕ ನಿರ್ದೇಶಕ ಜಾನ್ ಡವೆರ್, ಉಪಾಧ್ಯಕ್ಷ ಡಾ| ಪ್ರಸನ್ನ ಕುಮಾರ್ ಮಾತನಾಡಿ, ಈ ಒಡಂಬಡಿಕೆಯು ಉಭಯ ಸಂಸ್ಥೆಗಳ ನಡುವೆ ಇನ್ನಷ್ಟು ಫಾರ್ಮಾ ವ್ಯಾಲ್ಯೂ ಚೈನ್‌ನಲ್ಲಿ ಅವಕಾಶಗಳನ್ನು ಹೆಚ್ಚಿಸಲಿದೆ ಮತ್ತು ಹೊಸ ಸಂಶೋಧನೆಗೂ ಅನುಕೂಲವಾಗಲಿದೆ ಎಂದರು.
ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್, ಸಹ ಕುಲಪತಿ ಡಾ| ಶರತ್ ರಾವ್, ಕುಲಸಚಿವ ಡಾ| ಗಿರಿಧರ ಪಿ. ಕಿಣಿ, ಪ್ಲಾನಿಂಗ್ ಆ್ಯಂಡ್ ಮಾನಿಟರಿಂಗ್ ನಿರ್ದೇಶಕ ಡಾ| ರವಿರಾಜ್ ಎನ್.ಎಸ್., ಕಾರ್ಪೋರೆಟ್ ರಿಲೇಶನ್ಸ್ ನಿರ್ದೇಶಕ ಡಾ| ಹರೀಶ್ ಕುಮಾರ್, ಮಣಿಪಾಲ ಕಾಲೇಜ್ ಆಫ್ ಫಾರ್ಮಾಸುಟಿಕಲ್ ಸೈನಸ್ ಪ್ರಾಂಶುಪಾಲ ಡಾ| ಸಿ. ಮಲ್ಲಿಕಾರ್ಜುನ ರಾವ್ ಮಾತನಾಡಿ, ಹೊಸ ಒಡಂಬಡಿಕೆಯಿಂದ ಆಗಲಿರುವ ಅನುಕೂಲ ಮತ್ತು ಅದರ ಉದ್ದೇಶಗಳನ್ನು ವಿವರಿಸಿದರು.
ಮಾಹೆ ಪಿ.ಆರ್. ಡೆಪ್ಯೂಟಿ ಡೈರೆಕ್ಟರ್ ಸಚಿನ್ ಕಾರಂತ, ಎಂಕಾಪ್ಸ್ ಅಡಿಶನಲ್ ಪ್ರಾಧ್ಯಾಪಕ ಡಾ| ಡಿ. ಶ್ರೀಧರ್, ನೊವೋ ನೊರ್‌ಡಿಸ್ಕ್ನ ಹಿರಿಯ ಯೋಜನ ನಿರ್ದೇಶಕ ಮಾದಪ್ಪ ಅಶಿಕ್ ಅಪ್ಪರಂದ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್’ನಲ್ಲಿ ಪಲಿಮಾರು ಶ್ರೀ ಅಭಿಮತ
Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ
Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.