ಅಲ್ಪಾವಧಿ ಕೃಷಿ ಸಾಲ ಯೋಜನೆ ಷರತ್ತು ಮರುಪರಿಶೀಲಿಸಿ
Team Udayavani, Apr 19, 2020, 10:35 AM IST
ಮಂಗಳೂರು: ಅಲ್ಪಾವಧಿ ಕೃಷಿ ಸಾಲ ಯೋಜನೆಯ ಷರತ್ತನ್ನು ಮರು ಪರಿಶೀಲಿಸುವಂತೆ ರಾಜ್ಯ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರ ಮೂಲಕ ರಾಜ್ಯ ಸರಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮನವಿ ಮಾಡಿದ್ದಾರೆ.
2019-20ನೇ ಸಾಲಿನ ಅವಧಿಯಲ್ಲಿ ರೈತರಿಗೆ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಗರಿಷ್ಠ 3 ಲಕ್ಷ ರೂ. ವರೆಗೆ ಅಲ್ಪಾವಧಿ ಕೃಷಿ ಸಾಲ ನೀಡುವ ಯೋಜನೆಯನ್ನು ಕೆಲವೊಂದು ಷರತ್ತಿಗೆ ಒಳಪಟ್ಟು ರಾಜ್ಯ ಸಹಕಾರ ಇಲಾಖೆಯು ಮಾ. 30ರಂದು ಆದೇಶ ಹೊರಡಿಸಿತ್ತು.
ಆದರೆ 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ ಎಲ್ಲ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ಮಿತಿ ಮಂಜೂರಾತಿ ಹಾಗೂ ಸಾಲ ವಿತರಣೆ ಪ್ರಕ್ರಿಯೆ ಸಂಪೂರ್ಣಗೊಂಡಿರುತ್ತದೆ. 2019-20ನೇ ಸಾಲಿನ ಸಂಪೂರ್ಣ ಸಾಲ ವಿತರಣೆಯಾದ ಅನಂತರ ಈಗ ಮರುಪಾವತಿ ಸಮಯದಲ್ಲಿ ಈ ಆದೇಶದಲ್ಲಿ ವಿಧಿಸಿರುವ ಷರತ್ತುಗಳನ್ನು ಪಾಲಿಸಲು ಆಗುವ ತೊಂದರೆಗಳ ಬಗ್ಗೆ ರಾಜ್ಯ ಸರಕಾರ ತುರ್ತಾಗಿ ಗಮನಹರಿಸುವಂತೆ ಮನವಿ ಮಾಡಿದ್ದಾರೆ.
ಸರಕಾರದ ಆದೇಶದಲ್ಲಿ ವಿಧಿಸಿರುವ ಷರತ್ತಿನಂತೆ ರೈತರು ಆಧಾರ್, ರೇಷನ್ ಕಾರ್ಡ್ ಮತ್ತು ಆರ್‌ಟಿಸಿಯೊಂದಿಗೆ ಸ್ವಯಂ ದೃಢೀಕರಣ ಪತ್ರ ಸಲ್ಲಿಸಬೇಕು. ಈ ಪೈಕಿ ಒಂದು ಕುಟುಂಬ ಪಡೆದುಕೊಂಡಿರುವ 3 ಲಕ್ಷಗಿಂತ ಹೆಚ್ಚಿನ ಸಾಲಕ್ಕೆ, ಮಾಸಿಕ 20,000 ರೂ. ಪಿಂಚಣಿ/ಸಂಬಳ, ಆದಾಯ ಕರ ಪಾವತಿದಾರರು, ಭೂ ಮಾಲಕತ್ವ ಮತ್ತು ಸಾಗುವಳಿದಾರರ ಹೆಸರು ಪಹಣಿ ಪತ್ರದಲ್ಲಿ ಇಲ್ಲದೆ ಇದ್ದ ಪಕ್ಷದಲ್ಲಿ ಸದರಿ ರೈತರಿಗೆ ರಾಜ್ಯ ಸರಕಾರದ ಶೂನ್ಯ ಬಡ್ಡಿ ದರದ ಯೋಜನೆ ಅನ್ವಯಿಸುವುದಿಲ್ಲ. ನಮ್ಮ ಜಿಲ್ಲೆಯಲ್ಲಿ ಸುಮಾರು 1,05,000 ರೈತರಿಗೆ ಬೆಳೆ ಸಾಲ ವಿತರಣೆಯಾಗಿದು,ª ಈ ಪೈಕಿ ಸುಮಾರು 14,000 ರೈತರು ಶೂನ್ಯ ಬಡ್ಡಿ ದರದ ಯೋಜನೆಯಿಂದ ವಂಚಿತರಾಗುತ್ತಾರೆ. ಈ ರೈತರಿಗೆ ಈಗಾಗಲೇ ಮಂಜೂರು ಮಾಡಿ ನೀಡಿರುವ ಶೂನ್ಯ ಬಡ್ಡಿದರದ ಸಾಲವನ್ನು ಉಲ್ಲೇಖೀತ ಆದೇಶದಲ್ಲಿ ಕೇಂದ್ರ ಸರಕಾರದ ಶೇ.7ರ ಬಡ್ಡಿ ದರದಲ್ಲಿ ಬೆಳೆ ಸಾಲ ಒದಗಿಸುವ ಯೋಜನೆ ಅನ್ವಯವಾಗುತ್ತದೆ ಎಂಬುದಾಗಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಸರಕಾರದ ಆದೇಶದಲ್ಲಿ ವಿಧಿಸಿರುವ ಷರತ್ತುಗಳನ್ನು ಮರುಪರಿಶೀಲಿಸಿ, ಶೂನ್ಯ ಬಡ್ಡಿ ದರದ ಬೆಳೆ ಸಾಲವನ್ನು ಎಲ್ಲ ರೈತರಿಗೆ ಅನ್ವಯವಾಗುವಂತೆ ಪರಿಷ್ಕೃತ ಆದೇಶವನ್ನು ಹೊರಡಿಸುವ ಬಗ್ಗೆ ಡಾ| ರಾಜೇಂದ್ರ ಕುಮಾರ್ ಅವರು ಸರಕಾರದ ಗಮನಕ್ಕೆ ತಂದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.