Agricultural ಪಂಪ್‌ಸೆಟ್ ಕಳವು: ಕಳ್ಳರ ಚಹರೆ ಕೆಮರಾದಲ್ಲಿ ಸೆರೆ
Team Udayavani, Jul 27, 2024, 1:35 AM IST
ವಿಟ್ಲ: ಪುಣಚ ಗ್ರಾಮದ ವಿದ್ಯುತ್ ಉಪಕರಣ ದುರಸ್ತಿ ಅಂಗಡಿಯಿಂದ 2 ಲಕ್ಷ ರೂ. ಮೌಲ್ಯದ ಕೃಷಿ ಪಂಪ್‌ಸೆಟ್ ಕಳವು ಮಾಡಿದ ಕಳ್ಳರ ವಾಹನದ ಚಲನವಲನ ಸಿಸಿ ಕೆಮರಾದಲ್ಲಿ ಪತ್ತೆಯಾಗಿದ್ದು, ಸುಮಾರು 2 ಗಂಟೆ ಪುಣಚ ಪೇಟೆಯಲ್ಲಿ ಓಡಾಡಿದ ವಾಹನ ಕೊನೆಗೆ ಪುತ್ತೂರು ಕಡೆಗೆ ತೆರಳಿದ್ದು ದಾಖಲಾಗಿದೆ.
ಪುಣಚ ಗುರ್ಮೆ ನಿವಾಸಿ ಗಣೇಶ್ ಗೌಡ ಅವರ ಅಂಗಡಿಯಿಂದ ಕಳ್ಳತನ ಆಗಿದ್ದು, ಗುರುವಾರ ವಿಟ್ಲ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಈ ನಡುವೆ ಜು. 22ರಂದು ರಾತ್ರಿ ಸುಮಾರು 1 ಗಂಟೆಗೆ ಪುಣಚ ಗ್ರಾಮ ಪಂಚಾಯತ್ ಸಿಸಿ ಕೆಮರಾದಲ್ಲಿ ಪಿಕಪ್ ರೀತಿಯ ವಾಹನವೊಂದು ಪುತ್ತೂರು ಭಾಗದಿಂದ ಪೇಟೆಗೆ ಬರುತ್ತಿರುವುದು ಪತ್ತೆಯಾಗಿದೆ.
ಹೀಗೆ ಬಂದ ವಾಹನ ಗುರ್ಮೆ ಕಡೆಗೆ ಹೋಗುವ ನಾಟೆಕಲ್ ರಸ್ತೆಗೆ ತಿರುಗಿ ಹೋಗಿದೆ. ಕೆಲವು ಸಮಯದ ಬಳಿಕ ಹಿಂದೆ ಬಂದು ಅಜ್ಜಿನಡ್ಕ ಭಾಗಕ್ಕೆ ಹೋಗಿ ಮತ್ತೆ ಬಂದು ಪುಣಚ ಪೆಟ್ರೋಲ್ ಬಂಕ್ ಬಳಿಗೆ, ಆ ಬಳಿಕ ಸಹಕಾರಿ ಸಂಘದ ಸಮೀಪದಲ್ಲಿರುವ ಕಟ್ಟೆಯ ಬಳಿ ಕೆಲ ಸಮಯ ನಿಂತಿದ್ದು, ಬಳಿಕ ನಾಟೆಕಲ್ ರಸ್ತೆಯಲ್ಲಿ ಹೋಗಿ ಸುಮಾರು 1.30 ಗಂಟೆಗೆ ನಾಪತ್ತೆಯಾಗಿದೆ. ಆ ಬಳಿಕ ಬಂದ ವಾಹನ ಪುತ್ತೂರು ಭಾಗಕ್ಕೆ ಹೋಗಿರುವ ದೃಶ್ಯಾವಳಿಗಳು ಲಭಿಸಿದೆ.
ಸರಿಯಾದ ಮಾಹಿತಿಯನ್ನು ಹೊಂದಿದ ಕಳ್ಳರು ಈ ಕೃತ್ಯವನ್ನು ಮಾಡಿದ್ದು, ಇದರ ಹಿಂದೆ ವ್ಯವಸ್ಥಿತವಾದ ಜಾಲ ಇದೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.