Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ಕುಷ್ಟಗಿ ತಾಲೂಕಿನಲ್ಲೇಕೆ ಅಸಾಧ್ಯ ಎನ್ನುವುದು ದೊಡ್ಡಪ್ಪಅವರ ವಾದ.
Team Udayavani, Nov 4, 2024, 3:29 PM IST
ಉದಯವಾಣಿ ಸಮಾಚಾರ
ಕುಷ್ಟಗಿ: ತಾಲ್ಲೂಕಿನ ಕಂದಕೂರು ಸೀಮಾದ ರೈತರೊಬ್ಬರ ಸಮ್ಮಿಶ್ರ ಬೆಳೆ ಪದ್ಧತಿಯ ಕನಸು ನನಸಾಗುವ ನಿರೀಕ್ಷೆ ಮೂಡಿಸಿದೆ. ಮೂರುವರೆ ಎಕರೆ ಜಮೀನಿನಲ್ಲಿ ಅಡಿಕೆ ಹಾಗೂ ಲಿಂಬೆ ಗಿಡಗಳು ಅಡಿಯುದ್ದಕ್ಕೂ ಬೆಳೆದು ನಳನಳಿಸುತ್ತಿವೆ.
ಇದನ್ನು ಬೆಳೆಯಲು ಮಾನಸಿಕವಾಗಿ ಸಿದ್ಧರಾಗಿ ನಾಟಿ ಸಿದ್ಧತೆಯಲ್ಲಿದ್ದಾಗ ಕೆಲವರು ಉತ್ಸಾಹ ಕುಂದಿಸಲು ಯತ್ನಿಸಿದರೂ ದೊಡ್ಡಪ್ಪ ಲಿಂಗಸುಗೂರು ಅವರು, ಮಾಯಗೊಂಡನ ಹಳ್ಳಿಯಲ್ಲಿ 25 ರೂ. ಸಸಿ ಖರೀದಿ ಸಿ, ತುಂತುರು ನೀರಾವರಿ ವ್ಯವಸ್ಥೆಯಲ್ಲಿ ಅಡಿಕೆ ಸಸಿಗಳೊಂದಿಗೆ ಮಿಶ್ರ ಬೆಳೆಯಾಗಿ ಕಾಗ್ಜಿ ತಳಿ ಲಿಂಬೆ ಬೆಳೆದಿದ್ದಾರೆ.
ಒಂದು ವೇಳೆ ಅಡಿಕೆ ಕೈ ಕೊಟ್ಟರೂ ಲಿಂಬೆ ಆದಾಯ ತಂದುಕೊಂಡುವ ಭರವಸೆಯಲ್ಲಿದ್ದಾರೆ. ಸದ್ಯ 1 ವರ್ಷ 1 ತಿಂಗಳ ಬೆಳೆಯ ಕಡು ಹಸಿರಿನ ಗರಿಗಳಿಂದ ಮಲೆನಾಡ ಭಾಗದ ಅಡಿಕೆ ಬೆಳೆಯನ್ನು ಇದು ಮೀರಿಸುವಂತಿದೆ. ಸದ್ಯ ಈ ಬೆಳೆಗೆ ಯಾವುದೇ ರೋಗ ರುಜಿನ ಕಂಡು ಬಂದಿಲ್ಲ. ಆ ಭಾಗದಲ್ಲಿ ಅಡಿಕೆಗೆ ಕಾಡುವ ಕೊಳೆ ರೋಗ ಇಲ್ಲಿ ಬೆಳೆದ ಅಡಿಕೆಗೆ ಬಾರದು ಎನ್ನುತ್ತಾರೆ ದೊಡ್ಡಪ್ಪ
ಲಿಂಗಸುಗೂರು.
ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆ ಸೆರಗಿನಲ್ಲಿ ಅಡಿಕೆ ಬೆಳೆಯಬಹುದಾದರೆ ಈ ತಾಲೂಕಿನಲ್ಲೇಕೆ ಅಸಾಧ್ಯ ಎಂಬ ಪ್ರಶ್ನೆಯೇ ತಾಲೂಕಿನ ಗ್ರಾಮದ ನಿವೃತ್ತ ನೌಕರ ದೊಡ್ಡಪ್ಪ ಲಿಂಗಸುಗೂರು ಅವರು ಸವಾಲಾಗಿ ಸ್ವೀಕರಿಸಿ ಅಡಿಕೆ 1,200 ಗಿಡ, ಲಿಂಬೆ 280 ಗಿಡಗಳನ್ನು ಬೆಳೆಸಿದ್ದಾರೆ. ಸದ್ಯ 13 ತಿಂಗಳ ಬೆಳೆಯಿದೆ. ಇನ್ನೂ 4 ವರ್ಷವರೆಗೂ ಆರೈಕೆ ಸಕಾಲಿಕವಾಗಿ ನಿರ್ವಹಿಸಿದರೆ ಹೊಂಬಾಳಿ ಬಿಡಲು ಆರಂಭಿಸಲಿದೆ ಎನ್ನುವುದು ಅವರ ಲೆಕ್ಕಾಚಾರ.
ಈ ಭಾಗದಲ್ಲಿ ಬಯಲುಸೀಮೆ -ಕರಾವಳಿ ಭಾಗದಲ್ಲಿ ಬೆಳೆಯುವ ಅಡಿಕೆ ವಾಣಿಜ್ಯ ಬೆಳೆಯನ್ನು ಈ ಭಾಗದಲ್ಲಿ ಬೆಳೆಯುವ ಸವಾಲನ್ನು ರೈತ ದೊಡ್ಡಪ್ಪ ಲಿಂಗಸುಗೂರು ಸ್ವೀಕರಿಸಿದ್ದಾರೆ. ಇಲ್ಲಿಯೂ ಅಡಿಕೆ ಇಳುವರಿ ಸಾಧ್ಯವಿದೆ. ಚಿತ್ರದುರ್ಗದಲ್ಲಿ ಸಾಧ್ಯ ಆಗಬಹುದಾದರೆ ಹೆಚ್ಚು ಕಡಿಮೆ ಅದೇ ಹವಾಗುಣವಿರುವ ಕುಷ್ಟಗಿ ತಾಲೂಕಿನಲ್ಲೇಕೆ ಅಸಾಧ್ಯ ಎನ್ನುವುದು ದೊಡ್ಡಪ್ಪಅವರ ವಾದ.
ನ್ಯಾಯಾಂಗ ಇಲಾಖೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತನಾಗಿ ಚಿತ್ರದುರ್ಗ ತಾಲೂಕಿನ ಹೊಳಲ್ಕೆರೆಯಲ್ಲಿ 16 ವರ್ಷ ಸೇವೆ ಸಲ್ಲಿಸಿ ನಂತರ ಕುಷ್ಟಗಿ ನ್ಯಾಯಾಲಯದಲ್ಲಿ 2019ರಲ್ಲಿ ಸೇವಾ ನಿವೃತ್ತಿಯಾಗಿದ್ದಾರೆ. ಸಾಂಪ್ರದಾಯಿಕವಾಗಿ ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ, ಹುರಳಿ ಬೆಳೆಯುವ ಭೂಮಿಯಲ್ಲೇ ಅವರು, ಸಂಪೂರ್ಣ ಮಲೆನಾಡು, ಅರೆ ಮಲೆನಾಡಿನ ಪ್ರಮುಖ
ಬೆಳೆಯನ್ನೇ ಬೆಳೆದಿರುವುದು ಇಲ್ಲಿ ಗಮನಾರ್ಹ.
ಅಡಿಕೆ ಬೆಳೆಗೆ ಸಾಲ ಹುಟ್ಟಲಿಲ್ಲ: ಸ್ಥಳೀಯ ಆರ್ ಕೆಡಿಸಿಸಿ ಬ್ಯಾಂಕಿನಲ್ಲಿ ಬೆಳೆ ಸಾಲ ಪಡೆಯಲು ಮುಂದಾಗಿದ್ದ ರೈತ ದೊಡ್ಡಪ್ಪ ಲಿಂಗಸುಗೂರು ಅವರಿಗೆ ಜಮೀನಿಲ್ಲಿ ಅಡಿಕೆ ಬೆಳೆ ಇದೆ ಎಂದಾಗ ಬ್ಯಾಂಕ್ ಸಿಬ್ಬಂದಿ ಅಚ್ಚರಿಯಿಂದ ಸಾಲ ನೀಡಲು ನಿರಾಕರಿಸಿದರು. ಇನ್ನು ತೋಟಗಾರಿಕೆ ಇಲಾಖೆ ಆಧಿಕಾರಿಗಳು ಏಕೆ ಬೆಳೆದು ಹಾಳು ಮಾಡುತ್ತೀರಿ. ಇದರ ಬದಲಾಗಿ ದಾಳಿಂಬೆ. ಪಪ್ಪಾಯ, ಪೇರಲ ಬೆಳೆಯಲು ಸಲಹೆ ನೀಡಿದರು. ದಿನ ಕಳೆದಂತೆ ಗರಿಗಳ ಬೆಳವಣಿಗೆ ಸಮೃದ್ಧ ಪೈರಿನ ಅಡಿಕೆ ಬೆಳೆ ಕಂಡು ಖುಷಿಯಾಗಿದೆ ಎನ್ನುತ್ತಾರೆ ದೊಡ್ಡಪ್ಪ.
ಜಿಲ್ಲೆಯಲ್ಲಿ ಸರ್ಕಾರಿ ಸೇವೆ ಸಲ್ಲಿಸಿದ ದಿನಗಳಲ್ಲಿ ಆ ಭಾಗದ ರೈತರೊಂದಿಗೆ ಒಡನಾಟವಿದೆ. ಅಡಿಕೆ ಬೆಳೆ ಬಗ್ಗೆ ಸಾಕ್ಷಾತ್ ಅನುಭವವಿದೆ. ಪ್ರಾಯೋಗಿಕವಾಗಿ ನಮ್ಮೂರ ಸೀಮೆಯಲ್ಲಿ ಬೆಳೆದಿದ್ದಾರೆ. ಕುಷ್ಟಗಿ ತಾಲೂಕಿನ ಈ ಭಾಗದಲ್ಲಿ ನಮ್ಮೂರಿನ ರೈತ ದೊಡ್ಡಪ್ಪ ಲಿಂಗಸುಗೂರು ಅಡಿಕೆ ಬೆಳೆದಿರುವುದು ನಿಜಕ್ಕೂ ಅಪರೂಪವಾಗಿದೆ.
●ರವೀಂದ್ರನಾಥ ಎಂ.ಪತ್ತಾರ,
ಕಂದಕೂರು
■ ಮಂಜುನಾಥ ಮಹಾಲಿಂಗಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಪಾಟ್ನಾ-ಗುಜರಾತ್ ಟೈ
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
C.T.Ravi issue: ಕೋರ್ಟ್ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.