AI News: ಗಾಂಜಾ ಸೇವನೆ ಪತ್ತೆಗೆ ಎಐ
Team Udayavani, Oct 7, 2023, 9:12 PM IST
ಗಾಂಜಾ ಸೇವನೆಯನ್ನು ದೃಢಪಡಿಸಲು ಸದ್ಯಕ್ಕೆ ವೈದ್ಯರು ಮೂತ್ರ, ಸಲೈವ, ಕೂದಲಿನ ಪರೀಕ್ಷೆಯನ್ನು ನಡೆಸುತ್ತಿದ್ದಾರೆ. ಅದರ ವರದಿ ಕೈ ಸೇರಲು ಒಂದು ದಿನ ಬೇಕಾಗುತ್ತದೆ. ಈ ವಿಳಂಬ ತಪ್ಪಿಸಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಂತ್ರಜ್ಞಾನ ಕೇವಲ ಸೆಕೆಂಡುಗಳಲ್ಲಿ ನೀವು ಗಾಂಜಾ ಸೇವಿಸಿದ್ದೀರಿ, ಇಲ್ಲ ಎಂಬುದನ್ನು ಪತ್ತೆಹಚ್ಚಬಲ್ಲದು !
ನ್ಯೂಜೆರ್ಸಿಯ ಸ್ಟೀವನ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕ ಸ್ಯಾಂಗ್‌ವನ್ ಬೀ ನೇತೃತ್ವದ ತಂಡ ಇಂಥದ್ದೊಂದು ಸಂಶೋಧನೆ ನಡೆಸಿದ್ದು, 30 ಮಂದಿಯನ್ನು ಪ್ರಯೋಗಕ್ಕೂ ಒಳಪಡಿಸಿ ಯಶಸ್ವಿಯಾಗಿದೆ. ವಿಶೇಷವೆಂದರೆ ಎಐ ಮನುಷ್ಯರ ಸೂಕ್ಷ್ಮ ಚಲನವಲನವನ್ನು ಗಮನಿಸಿ ಶೇ.85ರಷ್ಟು ನಿಖರವಾಗಿ ಗಾಂಜಾ ಸೇವನೆ ಬಗ್ಗೆ ಮಾಹಿತಿ ನೀಡಿದೆ. ಈ ಸಂಬಂಧಿಸಿದ ಮತ್ತಷ್ಟು ಸಂಶೋಧನೆ ನಡೆಸಿ ಶೇ.100ರಷ್ಟು ಖಚಿತ ಫಲಿತಾಂಶ ಪಡೆಯುವುದಾಗಿ ಸಂಶೋಧಕರು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.