ಪಿಲಿಕುಳದಲ್ಲಿ ಪ್ರಾಣಿಗಳಿಗೂ ಕ್ವಾರಂಟೈನ್!
Team Udayavani, Jun 11, 2020, 10:23 AM IST
ಮಂಗಳೂರು: ಕೋವಿಡ್ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಹೊರ ರಾಜ್ಯದಿಂದ ಬಂದವರನ್ನು ಹೋಂ ಕ್ವಾರಂಟೈನ್ ಮಾಡುವುದು ಸಾಮಾನ್ಯ. ಆದರೆ, ಪಿಲಿಕುಳ ಮೃಗಾಲಯದಲ್ಲಿರುವ ಪ್ರಾಣಿಗಳಿಗೂ ಇದೇ ಮಾದರಿಯ ಕ್ವಾರಂಟೈನ್ ನಿಯಮ ಪಾಲನೆಯಾಗುತ್ತಿರುವುದು ವಿಶೇಷ !
ಕೋವಿಡ್ ಕಾರಣಕ್ಕಾಗಿ ಪಿಲಿಕುಳದ ಪ್ರಾಣಿಗಳಿಗೆ ಕ್ವಾರಂಟೈನ್ ಇಲ್ಲ. ಬದಲಾಗಿ, ದೇಶದ ಬೇರೆ ಬೇರೆ ಮೃಗಾಲಯಗಳಿಂದ ಕರೆ ತರುವ ಪ್ರಾಣಿಗಳಲ್ಲಿ ಆರೋಗ್ಯ ಸಮಸ್ಯೆಯನ್ನು ಪತ್ತೆ ಹಚ್ಚಲು ಪ್ರತ್ಯೇಕ ಕೋಣೆಯಲ್ಲಿರಿಸಿ ನಿಗಾ ವಹಿಸುವ ಕ್ವಾರಂಟೈನ್ ವ್ಯವಸ್ಥೆ ಇಲ್ಲಿದೆ.
ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಇದೀಗ ಕ್ವಾರಂಟೈನ್ ಕೇಂದ್ರವನ್ನು ಉನ್ನತೀಕರಿಸಲು ನಿಸರ್ಗಧಾಮದ ಆಡಳಿತ ಮಂಡಳಿ ನಿರ್ಧರಿಸಿದ್ದು ಪ್ರತ್ಯೇಕ ಕಟ್ಟಡ ನಿರ್ಮಾಣ ಕೊನೆಯ ಹಂತದಲ್ಲಿದೆ.
ಕ್ವಾರಂಟೈನ್ ನಿಯಮ ಹೇಗೆ?
ಬೇರೆ ಬೇರೆ ಮೃಗಾಲಯಗಳಿಂದ ತರಲಾಗುವ ಪ್ರಾಣಿ-ಪಕ್ಷಿ, ಹಾವನ್ನು ನೇರವಾಗಿ ಮೃಗಾಲಯದಲ್ಲಿ ಬಿಡುವ ಬದಲು ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. 1ರಿಂದ 2 ತಿಂಗಳ ಬಳಿಕ ಯಾವುದೇ ರೋಗ ಲಕ್ಷಣ ಇಲ್ಲ ಎಂಬುದು ಗೊತ್ತಾದ ಬಳಿಕ ಅವುಗಳನ್ನು ಮೃಗಾಲಯದಲ್ಲಿ ಇತರ ಪ್ರಾಣಿಗಳ ಜತೆಗೆ ಬಿಡಲಾಗುತ್ತದೆ.
70 ಸಿಸಿ ಕೆಮರಾ ಕಣ್ಗಾವಲು
ಪಿಲಿಕುಳ ನಿಸರ್ಗಧಾಮದಲ್ಲಿ ಸದ್ಯ 20 ಸಿಸಿ ಕೆಮರಾಗಳ ಮೂಲಕ ನಿತ್ಯ ಚಟುವಟಿಕೆಗಳನ್ನು ಗಮನಿಸಲಾಗುತ್ತಿದೆ. ಪ್ರಾಣಿಗಳ ಆವರಣ ಕೇಂದ್ರದ ಹೊರಗೆ/ಒಳಗೆ, ಪ್ರವಾಸಿಗರು ತಿರುಗಾಡುವ ಸ್ಥಳ ದಲ್ಲಿ ಸಿಸಿ ಕೆಮರಾ ಕಣ್ಗಾವಲು ಇರಲಿದೆ.
“ವಿವಿಧ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿ’
ಪಿಲಿಕುಳಕ್ಕೆ ತರುವ ಎಲ್ಲ ಪ್ರಾಣಿ-ಪಕ್ಷಿಗಳನ್ನು ಆರೋಗ್ಯ ದೃಷ್ಟಿಯಿಂದ ಕ್ವಾರಂಟೈನ್ ಮಾಡಲಾ ಗುತ್ತಿದ್ದು, ಇದಕ್ಕಾಗಿ ಪಿಲಿಕುಳದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುತ್ತಿದ್ದು, ಕ್ವಾರಂಟೈನ್ ಕೇಂದ್ರ ತೆರೆಯ ಲಾಗುತ್ತದೆ. ಜತೆಗೆ, ಇನ್ಕ್ಯುಬೇಟರ್, ರಕ್ತ ಪರೀಕ್ಷಾ ಕೇಂದ್ರ, ಸಿಸಿ ಕೆಮರಾ ಅಳವಡಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಪಿಲಿಕುಳದಲ್ಲಿ ಕೈಗೊಳ್ಳಲಾಗುತ್ತಿದೆ.
ಎಚ್. ಜಯಪ್ರಕಾಶ್ ಭಂಡಾರಿ, ನಿರ್ದೇಶಕರು, ಪಿಲಿಕುಳ ಜೈವಿಕ ಉದ್ಯಾನವನ
ಪ್ರಾಣಿಗಳ ರಕ್ತ ಪರೀಕ್ಷೆಗೆ ಪ್ರತ್ಯೇಕ ಘಟಕ
ಪಿಲಿಕುಳದ ಪ್ರಾಣಿಗಳಿಗೆ ಆರೋಗ್ಯ ಸಮಸ್ಯೆ ಎದುರಾದರೆ ಅಂತಹ ಪ್ರಾಣಿಗಳ ರಕ್ತದ ಮಾದರಿಯ ಪರೀಕ್ಷೆಯನ್ನು ಬೆಂಗಳೂರು-ಮಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ನಡೆಸಲಾಗುತ್ತಿದೆ. ಆದರೆ, ಇದೀಗ ಪಿಲಿಕುಳದಲ್ಲಿಯೇ ಪ್ರತ್ಯೇಕ ರಕ್ತ ಪರೀಕ್ಷಾ ಘಟಕ, ಇನ್ಕ್ಯುಬೇಟರ್ ಮತ್ತು ಮಾಂಸ ಶೇಖರಿಸಿಡುವ ಬೃಹತ್ ಶೀತಲೀಕರಣ ಘಟಕ ನಿರ್ಮಿಸಲು ನಿಸರ್ಗಧಾಮ ಆಡಳಿತ ಮಂಡಳಿ ನಿರ್ಧರಿಸಿದ್ದು, ಕಾಮಗಾರಿ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.