ರೈಲಿನಿಂದ ಬೀಳುತ್ತಿದ್ದ ತಂದೆ-ಮಗಳ ಜೀವ ಉಳಿಸಿದ ಲೋಕೋ ಪೈಲಟ್
Team Udayavani, Feb 14, 2022, 8:15 AM IST
ಬೆಳಗಾವಿ: ಚಲಿಸುತ್ತಿರುವ ರೈಲು ಹತ್ತುವಾಗ ಕೈ ಜಾರಿ ಬೀಳುತ್ತಿದ್ದ ತಂದೆ-ಮಗಳ ಕೈ ಹಿಡಿದು ಮೇಲೆತ್ತಿ ಪ್ರಾಣ ರಕ್ಷಿಸಿ ರೈಲ್ವೆ ಸಹಾಯಕ ಲೋಕೋ ಪೈಲಟ್ ಸಾಹಸ ಮೆರೆದಿದ್ದಾರೆ.
ಶನಿವಾರ ಬೆಳಗ್ಗೆ 11ರ ಸುಮಾರಿಗೆ ಅಜ್ಮೇರ್-ಬೆಂಗಳೂರು ರೈಲು ಬೆಳಗಾವಿ ರೈಲು ನಿಲ್ದಾಣಕ್ಕೆ ಬಂದಿತ್ತು. ಕೆಲ ಸಮಯ ನಿಲ್ದಾಣದಲ್ಲಿ ನಿಂತಿತ್ತು. ಈ ವೇಳೆ ತಂದೆ-ಮಗಳು ನೀರು ತರಲು ಕೆಳಗಿಳಿದಿದ್ದರು. ನೀರು ತೆಗೆದುಕೊಂಡು ಹೋಗುವಷ್ಟರಲ್ಲಿಯೇ ರೈಲು ಚಲಿಸತೊಡಗಿದೆ. ಆಗ ತಂದೆ-ಮಗಳು ಬೆನ್ನತ್ತಿ ರೈಲು ಹತ್ತಲು ಯತ್ನಿಸಿ ಕೈ ಜಾರಿ ಕೆಳಗೆ ಬಿದ್ದಿದ್ದರು. ರೈಲಿನ ಚಕ್ರದಡಿ ಕಾಲು ಹೋಗಿತ್ತು. ತತ್‌ಕ್ಷಣ ಅಲ್ಲಿ ಕರ್ತವ್ಯದಲ್ಲಿದ್ದ ಸಹಾಯಕ ಲೋಕೋ ಪೈಲಟ್ ಅನಿರುದ್ಧ ಗೋಸ್ವಾಮಿ ಓಡಿ ಹೋಗಿ ತಂದೆ-ಮಗಳ ಕೈ ಹಿಡಿದು ಮೇಲಕ್ಕೆತ್ತಿ ಜೀವ ಉಳಿಸಿದ್ದಾರೆ. ಈ ವೇಳೆ ಅನಿರುದ್ಧ ಕಾಲಿಗೂ ಸ್ವಲ್ಪ ಗಾಯವಾಗಿದೆ. ತಮ್ಮ ಪ್ರಾಣದ ಹಂಗು ತೊರೆದು ಇಬ್ಬರ ಜೀವ ಉಳಿಸಿದ ಅನಿರುದ್ಧ ಸಾಹಸಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Belagavi: ಎಸ್‌ಡಿಎ ರುದ್ರಣ್ಣ ಮೊಬೈಲ್ ಪತ್ತೆ: ಪೊಲೀಸರಿಂದ ತನಿಖೆ ಚುರುಕು
Belagavi; ರುದ್ರಣ್ಣ ಯಡವಣ್ಣವರ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಲಿ: ಹೆಬ್ಬಾಳಕರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.