![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 1, 2022, 7:18 PM IST
ಸಾಗರ : ತಾಲೂಕಿನ ತುಮರಿ ಸಮೀಪದ ಬ್ಯಾಕೋಡು ಗ್ರಾಮಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡ ಎಂಪಿಎಂ ಅಕೇಶಿಯಾ ನೆಡುತೋಪಿನ ಮರಗಳನ್ನು ಮೊದಲು ಕಟಾವು ಮಾಡಬೇಕು ಎಂದು ಆಗ್ರಹಿಸಿ ತುಮರಿ ಪಂಚಾಯ್ತಿ ಕಿರುವಾಸೆ ಗ್ರಾಮಸ್ಥರು ಮಂಗಳವಾರ ಗುತ್ತಿಗೆದಾರರ ಲಾರಿ ತಡೆದು ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ನೂರಾರು ಎಕರೆ ಜಾಗದಲ್ಲಿ ಕಳೆದ ೪೦ಕ್ಕೂ ಹೆಚ್ಚು ವರ್ಷಗಳಿಂದ ಎಂಪಿಎಂ ಅಕೇಶಿಯಾ ನೆಡುತೋಪು ಬೆಳೆಸಿದ್ದು ನಾಲ್ಕಾರು ಬಾರಿ ಕಟಾವು ಆಗಿದೆ. ಆದರೆ ಗ್ರಾಮಕ್ಕೆ ಹೋಗುವ ರಸ್ತೆ ಅಂಚಿನ ಮರಗಳನ್ನು ಕಟಾವು ಮಾಡದಿರುವುದರಿಂದ ಮರ ಮುರಿದು ರಸ್ತೆಗೆ ಬೀಳುವ ಕಾರಣ ನಿರಂತರವಾಗಿ ತೊಂದರೆ ಆಗುತ್ತಾ ಇದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಒಂದು ವರ್ಷದಿಂದ ಎಂಪಿಎಂ ಕಚೇರಿಗೆ ಈ ಮರಗಳ ಕಟಾವು ಮಾಡಲು ಪದೇ ಪದೇ ವಿನಂತಿ ಮಾಡಿದ್ದು, ಆದರೆ ಈಚೆಯ ದಿನದಲ್ಲಿ ಕಟಾವಿಗೆ ಅನುಮತಿ ನೀಡಲಾಗಿದೆ. ಆದರೆ ಗುತ್ತಿಗೆದಾರ ಕೆಲಸ ನಿರ್ವಹಣೆ ಮಾಡದೆ ತೊಂದರೆ ಉಂಟುಮಾಡುತ್ತಾ ಇದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಕಟಾವು ಆಗಿರುವ ಪ್ಲಾಂಟೇಶನ್ ದಿಮ್ಮಿಗಳನ್ನು ತೆಗೆದುಕೊಂಡು ಹೋಗುವುದಕ್ಕಿಂತ ಮೊದಲು ರಸ್ತೆ ಬದಿ ಮರಗಳನ್ನು ಕಟಾವು ಮಾಡಬೇಕು ಎಂದು ಬೇಡಿಕೆ ಇಟ್ಟು ಗ್ರಾಮಸ್ಥರು ದಿಮ್ಮಿ ಸರಕು ಲಾರಿ ತಡೆದು ಪ್ರತಿಭಟನೆ ನಡೆಸಿದರು. ಲಾರಿ ತಡೆದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕರಿಯಪ್ಪ ಹೂಗಾರ್ ನೇತೃತ್ವದ ಶ್ರೀಧರ್, ರಂಜಿತ್ ಒಳಗೊಂಡ ಪೊಲೀಸ್ ತುರ್ತು ಸಹಾಯಕ ವಾಹನ ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರು ಮತ್ತು ಗುತ್ತಿಗೆದಾರ ಮೇಸ್ತ್ರಿ ಹಾಗೂ ಎಂಪಿಎಂ ಸಿಬ್ಬಂದಿ ಅಹವಾಲು ಆಲಿಸಿತು.
ಇದನ್ನೂ ಓದಿ : ಅಕ್ರಮ ಕಲ್ಲಿದ್ದಲು ಗಣಿ ಕುಸಿತ; 4 ಮೃತದೇಹ ಪತ್ತೆ, ಹಲವರು ಸಿಲುಕಿರುವ ಭೀತಿ
ಅಂತಿಮವಾಗಿ ಫೆಬ್ರವರಿ 10ರ ಒಳಗೆ ಮಂಗೀಸರ ಕಿರುವಾಸೆ ಗ್ರಾಮದ ರಸ್ತೆ ಅಂಚಿನ ಮರಗಳನ್ನು ಕಟಾವು ಮಾಡುವ ಭರವಸೆ ಗುತ್ತಿಗೆದಾರರು ಮತ್ತು ಎಂಪಿಎಂ ವಲಯ ಅಧಿಕಾರಿ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆದು ಲಾರಿ ಚಲಿಸಲು ಅವಕಾಶ ಮಾಡಿಕೊಡಲಾಯಿತು. ತುಮರಿ ಗ್ರಾಪಂ ಮಾಜಿ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ಕರೂರು, ಪಟೇಲ್ ಸುಬ್ರಾವ್, ಸಂತೋಷಕುಮಾರ್ ಶೆಟ್ಟಿ, ಸಂತೋಷ್, ಪ್ರವೀಣ್, ಹರೀಶ್, ರವಿ, ರಾಘವೇಂದ್ರ, ಪ್ರಕಾಶ್, ಶಿವರಾಜ್, ನಾಗರಾಜ್, ಕೃಷ್ಣಪ್ಪ, ಕೊಲ್ಲಾನಾಯ್ಕ ಮತ್ತಿತರರು ಹಾಜರಿದ್ದರು.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.