ಅಕ್ಕೋಜಿಪಾಲ್: ದಲಿತ ಕಾಲನಿ ನಿವಾಸಿಗಳಿಗೆ ಆಧಾರ್ ನೋಂದಣಿ
Team Udayavani, Jan 22, 2022, 5:45 AM IST
ಪುತ್ತೂರು: ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರವಾಗಿರುವ ಸುಳ್ಯದ ಅಮರಪಡ್ನೂರು ಗ್ರಾಮದ ಅಕ್ಕೋಜಿಪಾಲ್‌ನಲ್ಲಿರುವ ಪರಿಶಿಷ್ಟ ಜಾತಿಯ ಮಾಯಿಲ ಸಮುದಾಯದ ಕುಟುಂಬಗಳು ಸರಕಾರಿ ಗುರುತಿನ ಚೀಟಿ ಇಲ್ಲದೆ ಪಡಿತರ ಇತ್ಯಾದಿ ಸೌಲಭ್ಯಗಳಿಂದ ವಂಚಿತವಾಗಿದ್ದ ಕುರಿತು ಉದಯವಾಣಿ ಪ್ರಕಟಿಸಿದ ವರದಿಯ ಪರಿಣಾಮ ಕಾಲನಿ ನಿವಾಸಿಗಳಿಗೋಸ್ಕರ ಆಧಾರ್ ಕಾರ್ಡ್ ನೋಂದಣಿ ಶಿಬಿರ ನಡೆಯಿತು.
ಅಕ್ಕೋಜಿಲ್‌ಪಾಲ್‌ನಲ್ಲಿ 100ಕ್ಕೂ ಅಧಿಕ ವರ್ಷಗಳಿಂದ ಮಲೆಯಾಳ ಮಾತೃಭಾಷಿಕ ಮಾಯಿಲ ಕುಟುಂಬಗಳು ನೆಲೆಸಿವೆ. ನಾಲ್ಕೈದು ಮಂದಿಯ ಹೆಸರಿನಲ್ಲಿದ್ದ ಜಾಗವನ್ನು 18 ವರ್ಷಗಳ ಹಿಂದೆ ನವಗ್ರಾಮ ಯೋಜನೆಯಡಿ 21 ಕುಟುಂಬಗಳಿಗೆ ತಲಾ 3 ಸೆಂಟ್ಸ್‌ನಂತೆ ವಿಭಾಗಿಸಿ ನೀಡಿ ವಸತಿ ಯೋಜನೆಯಡಿ ಮನೆ ನಿರ್ಮಿಸಲಾಗಿತ್ತು. ಇಲ್ಲಿರುವ 60 ಮಂದಿಯ ಪೈಕಿ ಹೆಚ್ಚಿನವರಿಗೆ ಆಧಾರ್ ಕಾರ್ಡ್ ಇಲ್ಲ.
ಸರಕಾರ ಸಮುದಾಯದ ಏಳಿಗೆಗೋಸ್ಕರ ಘೋಷಿಸುವ ಯೋಜನೆಗಳ ಸೌಲಭ್ಯ ಪಡೆಯಲು ಯಾವುದೇ ದಾಖಲೆಗಳು ಅವರಲ್ಲಿಲ್ಲ. 3 ಸೆಂಟ್ಸ್ ಜಾಗ, ಅದರಲ್ಲಿ ಮುರುಕು ಜೋಪಡಿಯಷ್ಟೇ ಅವರದ್ದಾಗಿತ್ತು. ಕೆಲವು ಮನೆಗಳಲ್ಲಿ ಶೌಚಾಲಯವೂ ಸರಿ ಇಲ್ಲದಿರುವ ಬಗ್ಗೆ ಉದಯವಾಣಿ 2021ರ ಮೇ 30ರಂದು ಸಮಗ್ರ ವರದಿ ಪ್ರಕಟಿಸಿತ್ತು. ಶುಕ್ರವಾರ ಮಂಗಳೂರಿನಿಂದ ಆಗಮಿಸಿದ ಅಧಿಕಾರಿಗಳ ತಂಡ ಅಮರಮುಟ್ನೂರು ಗ್ರಾ.ಪಂ. ಸಭಾಂಗಣದಲ್ಲಿ ಕಾಲನಿ ನಿವಾಸಿಗಳಿಗೆ ಆಧಾರ್ ನೋಂದಣಿ ಪ್ರಕ್ರಿಯೆ ನಡೆಸಿತು. 19 ಮಂದಿಗೆ ಶೀಘ್ರ ಆಧಾರ್ ಕಾರ್ಡ್ ದೊರೆಯಲಿದ್ದು ಬಳಿಕ ಪಡಿತರ ಚೀಟಿ ನವೀಕರಣಗೊಂಡು ಪಡಿತರವೂ ದೊರೆಯಲಿದೆ.
ತಹಶೀಲ್ದಾರ್ ಅನಿತಾಲಕ್ಷ್ಮೀ, ಜಿ.ಪಂ. ಮಾಜಿ ಸದಸ್ಯ ಎಸ್.ಎನ್.ಮನ್ಮಥ, ತಾ.ಪಂ. ಮಾಜಿ ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಗ್ರಾ.ಪಂ. ಅಧ್ಯಕ್ಷೆ ಪದ್ಮಪ್ರಿಯಾ, ಸದಸ್ಯರಾದ ರಾಧಾಕೃಷ್ಣ ಕೊರತ್ತಡ್ಕ, ಕೃಷ್ಣ ಪ್ರಸಾದ್ ಮಾಡಬಾಕಿಲು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.