ಅಲೆಕ್ಸಾ ಬಾಯ್ ಫ್ರೆಂಡ್ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?
Team Udayavani, Aug 11, 2021, 5:00 PM IST
ಹೊಸದಿಲ್ಲಿ: “ಈಗ ಗಂಟೆ ಎಷ್ಟು’ ಎಂದು ಪ್ರಶ್ನೆ ಮಾಡಿದರೆ ನಿಖರವಾಗಿ ಸಮಯ ಹೇಳುವ ಅಮೆಜಾನ್‌ನ ಅಲೆಕ್ಸಾಗೆ ಜತೆಗಾರ ಸಿಕ್ಕಿದೆ. ಅದರ ಹೆಸರೇ “ಝಿಗಿ'(Ziggy). ಹೀಗಾಗಿ, ಗ್ರಾಹಕರಿಗೆ ಎರಡು ಆಯ್ಕೆಗಳು ಸಿಕ್ಕಿದಂತಾಗಿವೆ. ಖರೀದಿಯ ಬಳಿಕ ಕೂಡ ಅಲೆಕ್ಸಾ ಅಥವಾ ಝಿಗಿಯ ಧ್ವನಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಗ್ರಾಹಕರಿಗೇ ಅಮೆಜಾನ್ ನೀಡಲಿದೆ.
2014ರಲ್ಲಿ ಅಲೆಕ್ಸಾ ಮಾರುಕಟ್ಟೆಗೆ ಬಂದ ಬಳಿಕ ಅದು ಭಾರೀ ಜನಪ್ರಿಯತೆ ಪಡೆದುಕೊಂಡಿತ್ತು. ಸರಿಯಾಗಿ 7 ವರ್ಷಗಳ ಬಳಿಕ ಪುರುಷ ಧ್ವನಿಯುಳ್ಳ ಸಹಾಯಕ ವ್ಯವಸ್ಥೆಯನ್ನು ಅಮೆಜಾನ್ ತಂದಿದೆ.
ಅಮೆಜಾನ್ ಅಲೆಕ್ಸಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಸಂದರ್ಭದಲ್ಲಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಹೆಣ್ಣು ಮಗುವಿಗೆ ಅಲೆಕ್ಸಾ ಎಂದೇ ಹೆಸರು ಇರಿಸಲಾಗಿತ್ತು.
ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?
– ಬಳಕೆದಾರರು ಧ್ವನಿ ಸಹಾಯಕ ವ್ಯವಸ್ಥೆ ಖರೀದಿಯ ಬಳಿಕ ಅಲೆಕ್ಸಾ ಅಥವಾ ಝಿಗಿ ನಡುವೆ ಆಯ್ಕೆ ಮಾಡಬಹುದು.
– ಅಮೆಜಾನ್‌ನ ಇಕೋದಲ್ಲಿ ಬಳಕೆದಾರರು ಧ್ವನಿಯನ್ನು ಬದಲಿಸಿ ಕೊಳ್ಳುವ ಅವಕಾಶ ಕಲ್ಪಿಸಿಕೊಡಲಾಗಿದೆ.
– ಅದಕ್ಕಾಗಿ “ಅಲೆಕ್ಸಾ, ನಿಮ್ಮ ಧ್ವನಿ ಬದಲಾಯಿಸಿ’ ಎಂದರೆ ಅದರಲ್ಲಿ ಪುರುಷ ಧ್ವನಿ ಬರುತ್ತದೆ
– ಝಿಗಿಯನ್ನು ಖರೀದಿಸಿದವರಿಗೆ ಕೂಡ “ಅಲೆಕ್ಸಾದಂತೆ ಧ್ವನಿ ಬದಲಾಯಿಸಿ’ ಎಂದರೆ ಸ್ತ್ರೀ ಧ್ವನಿಯನ್ನೂ ಕೇಳಬಹುದು.
– ಆ್ಯಪಲ್ ಮತ್ತು ಗೂಗಲ್‌ನಲ್ಲಿ ಕೂಡ ಇಂಥದ್ದೇ ಧ್ವನಿ ಬದಲಾಯಿಸುವ ತಂತ್ರಜ್ಞಾನ ವ್ಯವಸ್ಥೆ ಹೊಂದಿರುವ ವಸ್ತುಗಳೂ ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.